ಗ್ಯಾಂಗ್ಸ್ಟರ್ನನ್ನು ಪ್ರೀತಿಸಿ ಆತನೊಂದಿಗೆ ಹೋಗಿದ್ದ ಐಎಎಸ್ ಅಧಿಕಾರಿ ಪತ್ನಿ ಮನೆಗೆ ವಾಪಸಾದ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್ನ ಗಾಂಧಿನಗರದಲ್ಲಿ ನಡೆದಿದೆ.
ಗ್ಯಾಂಗ್‌ಸ್ಟರ್ ಜತೆ ಹೋಗಿದ್ದ ಸೂರ್ಯ ಜೈ ಎಂಬ ಮಹಿಳೆ 9 ತಿಂಗಳ ಬಳಿಕ ವಾಪಸಾಗಿದ್ದಳು. ವಾಪಸ್ ಆದ ಹೆಂಡತಿಯನ್ನು ಐಎಎಸ್ ಅಧಿಕಾರಿ ಮನೆಗೆ ಸೇರಿಸಿರಲಿಲ್ಲ. ಗ್ಯಾಂಗ್‌ಸ್ಟಾರ್ ಜೊತೆ ಓಡಿ ಹೋಗಿದ್ದಕ್ಕೆ ಐಎಎಸ್ ಅಧಿಕಾರಿ ಮನೆಯೊಳಗೆ ಬಿಟ್ಟುಕೊಂಡಿರಲಿಲ್ಲ.
ಮಹಿಳೆಯ ಪತಿ ರಂಜಿತ್ ಕುಮಾರ್ ಗುಜರಾತ್ ವಿದ್ಯುತ್ ನಿಗಮದಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಮೂಲಗಳ ಪ್ರಕಾರ ದಂಪತಿ 2023ರಲ್ಲಿ ವಿವಾಹ ವಿಚ್ಚೇದನ ಪಡೆದು ಪ್ರತ್ಯೇಕವಾಗಿದ್ದರು ಎನ್ನಲಾಗಿದೆ.
ಮನೆಗೆ ಬಿಟ್ಟುಕೊಳ್ಳದ ಕಾರಣ ಸೂರ್ಯ ಜೈ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | RSS ನಿಷೇಧ ತೆರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆಯೇ?
ಮಧುರೈನಲ್ಲಿ 14 ವರ್ಷದ ಮಗುವಿನ ಅಪಹರಣ ಪ್ರಕರಣದಲ್ಲಿ ತಮಿಳುನಾಡು ಪೊಲೀಸರಿಂದ ಬಂಧನವನ್ನು ತಪ್ಪಿಸಲು ಸೂರ್ಯ ಜೈ ತನ್ನ ಗಂಡನ ಮನೆಗೆ ಮರಳಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ತಮಿಳಿನಲ್ಲಿ ಬರೆದಿರುವ ಆತ್ಮಹತ್ಯಾ ಪತ್ರವೂ ಪೊಲೀಸರಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ಆದರೆ ಈ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಸೂರ್ಯ ಜೈ ಜುಲೈ 11 ರಂದು ಪ್ರಿಯಕರ ಗ್ಯಾಂಗ್‌ಸ್ಟಾರ್ ಜೊತೆ ಸೇರಿ ಮಗುವೊಂದನ್ನು ಅಪಹರಿಸಿ 2 ಕೋಟಿ ರೂ. ಬೇಡಿಕೆ ಇಟ್ಟಿದ್ದಳು. ಆದರೆ ಮಧುರೈ ಪೊಲೀಸರು ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ನಂತರ ಪೊಲೀಸರು ಸೂರ್ಯ ಸೇರಿದಂತೆ ಭಾಗಿಯಾದವರ ಹುಡುಕಾಟ ಆರಂಭಿಸಿದ್ದರು. ಇದೇ ವೇಳೆ ಮಹಿಳೆಯ ಪತಿ ಶವ ಸ್ವೀಕರಿಸಲು ನಿರಾಕರಿಸಿದ್ದಾರೆ.