ನೇಪಾಳದಲ್ಲಿ ಮತ್ತೊಂದು ವಿಮಾನ ಅಪಘಾತ ಸಂಭವಿಸಿದ್ದು, 19 ಮಂದಿ ಪ್ರಯಾಣಿಕರಿದ್ದ ವಿಮಾನ ಟೇಕಾಫ್ ವೇಳೆ ಪತನಗೊಂಡಿರುವ ಘಟನೆ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದಿದೆ.
ಕಠ್ಮಂಡುನಿಂದ ಪೋಖರಾಗೆ ತೆರಳಬೇಕಿದ್ದ ಸೌರ್ಯ ಏರ್‌ಲೈಲ್ಸ್‌ಗೆ ಸೇರಿದ ವಿಮಾನ ಪತನಗೊಂಡಿದೆ. ಬೆಳಗ್ಗೆ 11 ಗಂಟೆಗೆ ಅಪಘಾತ ಸಂಭವಿಸಿದೆ. ಈವರೆಗೆ ಐದು ಮೃತದೇಹಗಳು ಪತ್ತೆಯಾಗಿವೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದು ಇನ್ನೂ ನಿಖರವಾಗಿಲ್ಲ.
ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಮಾನದ ಪೈಲಟ್ ಕ್ಯಾಪ್ಟನ್ ಮನೀಶ್ ಶಾಕ್ಯಾ (37) ಅವರನ್ನು ರಕ್ಷಿಸಲಾಗಿದ್ದು, ಸಿನಮಂಗಲದ ಆಸ್ಪತ್ರೆಗೆ ರವಾನಿಸಲಾಗಿದೆ.
Saurya Airlines aircraft crashes during takeoff in Tribhuvan International Airport, Kathmandu. 19 people were aboard the Pokhara-bound plane. #Nepal #SauryaAirlines #planecrash pic.twitter.com/ypAgNE98ww
— Asia News (@asianewsteam) July 24, 2024
ವಿಮಾನವು ಟೇಕಾಫ್‌ಗಾಗಿ ರನ್‌ವೇನಲ್ಲಿ ತೆರಳುವಾಗ ಸ್ಕಿಡ್ ಆಗಿ ಪತನಗೊಂಡಿದೆ. ಪತನವಾದ ತಕ್ಷಣ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳ ಮತ್ತು ಭದ್ರತಾ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಬದುಕುಳಿದಿರುವವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
#WATCH | Plane crashes at the Tribhuvan International Airport in Nepal’s Kathmandu. Details awaited pic.twitter.com/tWwPOFE1qI
— ANI (@ANI) July 24, 2024
ಈ ಹಿಂದೆ, 2023ರ ಜನವರಿಯಲ್ಲಿ ಪೊಖರಾ ಬಳಿ ಯೇತಿ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿತ್ತು. ದುರಂತ ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲ 72 ಮಂದಿ ಪ್ರಾಣ ಕಳೆದುಕೊಂಡಿದ್ದರು. 2022ರ ಮೇ 29ರಂದು ತಾರಾ ಏರ್ ವಿಮಾನವು ಮುಸ್ತಾಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ, 22 ಮಂದಿ ಸಾವನ್ನಪ್ಪಿದ್ದರು.