ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ಹೊಸೂರಿನ ಆಸ್ಪತ್ರೆ ಕಾಂಪೌಂಡ್ ಕುಸಿತ ಉಂಟಾಗಿದ್ದು, ಹಲವೆಡೆ ಮರಗಳು ನೆಲಕ್ಕೆ ಉರುಳಿವೆ. ಮನೆ, ಶಾಲೆ, ಅಂಗನವಾಡಿಗಳ ಗುಡಿಸಲುಗಳು ಹಾನಿಯಾಗಿವೆ. ಎಲ್ಲೆಡೆ ಮಣ್ಣು ಕುಸಿದಿದೆ.
ತಾಲೂಕಿನ ಯಸಳೂರು ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಭಾರೀ ಮಳೆಗೆ ಮಣ್ಣು ಕುಸಿತ ಉಂಟಾಗಿರುವುದರಿಂದ ಆಯುರ್ವೇದ ಆಸ್ಪತ್ರೆಯ ಕಾಂಪೌಂಡ್ ನೆಲಸಮ ಆಗಿದೆ. ವಿಪರೀತ ಗಾಳಿ ಮಳೆಗೆ ಮಲೆನಾಡಲ್ಲಿ ಅಪಾರ ಹಾನಿ ಉಂಟಾಗಿದೆ.
ಈ ಸುದ್ದಿ ಓದಿದ್ದೀರಾ? ಹುಣಸೂರು | ಸೋರುತ್ತಿದೆ ಆರ್‌ಟಿಓ ಕಚೇರಿ ಮಾಳಿಗೆ; ಅಧಿಕಾರಿಗಳಿಗೇ ಇಲ್ಲ ಮೂಲ ಸೌಕರ್ಯ!
“ನಿನ್ನೆ ಸುರಿದ ಮಳೆಗೆ ಆಸ್ಪತ್ರೆಯ ಆವರಣದ ಗೋಡೆಯ ಕೆಳಗಿನ ಮಣ್ಣು ನೀರಿನಲ್ಲಿ ಇಂಗಿ ಈ ಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ. ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಕಾಂಪೌಂಡ್ ಕುಸಿತ ಕಂಡಿದ್ದು, ಇದರ ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನೂತನವಾಗಿ ನಿರ್ಮಿಸುತ್ತಿರುವ ಗ್ರಾಮಸೌಧ ಕಟ್ಟಡ ಇದರ ಪಕ್ಕದಲ್ಲೇ ಇದೆ. ಹೀಗೆಯೇ ಮಳೆ ಮುಂದುವರೆದರೆ ಕಟ್ಟಡಗಳು ಕುಸಿಯುವ ಸಾಧ್ಯತೆಯಿದೆ” ಎಂದು ಸುತ್ತಲಿನ ಗ್ರಾಮಸ್ಥರು ತಿಳಿಸಿದ್ದಾರೆ.