ಹುಣಸೂರು | ಸೋರುತ್ತಿದೆ ಆರ್‌ಟಿಓ ಕಚೇರಿ ಮಾಳಿಗೆ; ಅಧಿಕಾರಿಗಳಿಗೇ ಇಲ್ಲ ಮೂಲ ಸೌಕರ್ಯ!

Date:

ಮೈಸೂರು ಜಿಲ್ಲೆ ಹುಣಸೂರಿನ ಆರ್‌ಟಿಓ ಕಚೇರಿ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವ್ಯಾಪಕ ಮಳೆಯಿಂದಾಗಿ ಮಾಳಿಗೆ ಸೋರುತ್ತಿದೆ. ಭಾಗಶಃ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಭಯದ ನಡುವೆ ಕೆಲಸ ಮಾಡಬೇಕಿದೆ. ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಜನಸಾಮಾನ್ಯರು ಆತಂಕದಿಂದ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -

ರಾಜ್ಯದಲ್ಲಿರುವ ಆರ್‌ಟಿಓ ಕಚೇರಿಗಳಲ್ಲಿ ಹುಣಸೂರು ಆರ್ ಟಿ ಓ ಅಂದ್ರೆ ಜನರಿಗೆ ವಿಶೇಷವಾಗಿ ಇಷ್ಟ. ಅದಕ್ಕೆ ಕಾರಣ ಕೆ ಎ 45. ಯಾವಾಗಲೂ ಗಿಜಿಗಿಡುವ ಜನಸಂದಣಿ, ಇಕ್ಕಟ್ಟಾದ ಕಚೇರಿ, ಯಾವುದೇ ಮೂಲ ಸೌಕರ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

KA 45

ಅಧಿಕಾರಿಗಳ ಕೊಠಡಿಗಳಾಗಲಿ, ದಾಖಲೆಗಳ ಸಂಗ್ರಹದ ಕೊಠಡಿಯಾಗಲೀ ಸುರಕ್ಷಿತವಾಗಿ ಇಲ್ಲ. ಎಲ್ಲೆಂದರಲ್ಲಿ ನೀರು ಸೋರುತ್ತಿದೆ. ಮೇಲ್ಛಾವಣಿ ಕಿತ್ತಿದೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಮಳೆಯಿಂದಾಗಿ ಶೀತ ಹೆಚ್ಚಾದಂತೆ ಕಡತಗಳು ಹಾಳಾಗುವ ಸಾಧ್ಯತೆಯೇ ಹೆಚ್ಚಿದೆ.

ಕಟ್ಟಡದ ಅವಸ್ಥೆ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್ ಹೆಚ್ ಎಸ್, “2004ರಲ್ಲಿ ಕಾವೇರಿ ನೀರಾವರಿ ನಿಗಮ ಮಂಡಳಿಯಿಂದ ಬಾಡಿಗೆಗೆ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಆರ್‌ಟಿಓ ಕಟ್ಟಡವಾಗಿದೆ. ಇಲ್ಲಿಗೆ ಸರಿ ಸುಮಾರು 20 ವರ್ಷಗಳೇ ಕಳೆಯುತ್ತಾ ಬಂದಿದೆ. ಇದು ಬಾಡಿಗೆಯ ಕಟ್ಟಡ ಆಗಿರುವುದರಿಂದ ಸಮರ್ಪಕ ನಿರ್ವಹಣೆ ಸಾಧ್ಯವಾಗಿಲ್ಲ. ಮಳೆ ಬಂತೆಂದರೆ ಇಡೀ ಕಟ್ಟಡ ಸೋರುತ್ತದೆ” ಎಂದು ತಮ್ಮ ನೋವು ತೋಡಿಕೊಂಡರು.

bhagwan

ಆರ್ ಟಿ ಓ ಕಚೇರಿ ಬದಲಾಯಿಸಬೇಕು ಎನ್ನುವ ಪ್ರಸ್ತಾವನೆಗೆ ಈಗಾಗಲೇ ಹಣ ಎತ್ತಿಟ್ಟಿದ್ದು, ಸರಿಯಾದ ಜಾಗ ದೊರೆತರೆ ತಕ್ಷಣದಲ್ಲಿಯೇ ಬದಲಾಯಿಸುವ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. 2023ರಲ್ಲಿ ಹುಣಸೂರು ತಹಶೀಲ್ದಾರ್ ಅವರಿಗೆ ಜಾಗ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅದಕ್ಕೆ ಬೇರೊಬ್ಬರು ತಡೆ ಅರ್ಜಿ ಹಾಕಿರುವುದರಿಂದ ಆಗಿಲ್ಲ. ನಮಗೆ ಒಳ್ಳೆಯ ಜಾಗ ಸಿಕ್ಕರೆ ಸುಸಜ್ಜಿತವಾದ ಆರ್‌ಟಿಓ ಕಚೇರಿ ಕಟ್ಟಲು ಸಿದ್ಧವಿರುವುದಾಗಿ ತಿಳಿಸಿದರು.

ಆರ್‌ಟಿಓ ಕಚೇರಿಗೆ ಬಂದಿದ್ದ ಅಶೋಕ್ ಹುಣಸೂರು ಮಾತನಾಡಿ, “ನಾವು ಕಾರ್ ಎಫ್‌ಸಿ ಮಾಡಿಸಲು ಕೆಲವು ವರ್ಷಗಳ ಹಿಂದೆ ಬಂದಿದ್ದೆವು. ಇದು ಆಗಿನಿಂದ ಈಗಲೂ ಹಾಗೆಯೇ ಇದೆ. ಏನೂ ಬದಲಾವಣೆ ಇಲ್ಲ. ಸ್ವಲ್ಪ ಕೂಡ ಕಟ್ಟಡ ಚೆನ್ನಾಗಿಲ್ಲ. ಮಳೆ ಬಂದರೆ ಜನರು ನಿಲ್ಲೋದಕ್ಕೂ ಸರಿಯಾದ ಜಾಗ ಇಲ್ಲ. ಒಳಗೆ ಹೋದರೂ ಇಕ್ಕಟ್ಟು. ಸರಿಯಾಗಿ ಕುಳಿತುಕೊಳ್ಳಲಿಕ್ಕೂ ಆಗಲ್ಲ. ಹುಣಸೂರಿಗೆ ಒಳ್ಳೆಯ ಆರ್‌ಟಿಓ ಕಟ್ಟಡ ಆದಷ್ಟು ಶೀಘ್ರವಾಗಿ ಆಗಬೇಕು” ಎಂದು ಮನವಿ ಮಾಡಿದರು.

rto4
ಕಡತಗಳ ರಾಶಿ

ನಟರಾಜ್ ಹನಗೂಡು ಮಾತನಾಡಿ, “ಮಳೇಲಿ ಬಂದ್ರೆ ನೆನೆಯೋದು ಮಾತ್ರ ತಪ್ಪಲ್ಲ. ಎಲ್ಲ ಕಡೆ ಸೋರುತ್ತೆ. ಅಧಿಕಾರಿಗಳು ಗಮನ ಹರಿಸಬೇಕು. ಅವರ ಪಾಡಿಗೆ ಅವರು ಇದ್ರೆ ಹೊಸ ಕಟ್ಟಡ ಎಲ್ಲಿಂದ ಆಗುತ್ತೆ. ಈಗಲೆ ಗೋಡೆಯೆಲ್ಲ ಬಿರುಕು ಬಿಟ್ಟು ಸೋರುತ್ತೆ. ಏನಾದ್ರೂ ಆಗಿ ಜನಗಳ ಮೇಲೆ ಬಿದ್ರೆ ಇದಕ್ಕೆಲ್ಲ ಹೊಣೆ ಯಾರು? ಸರ್ಕಾರಿ ಕಚೇರಿಗಳಿಗೆ ಇಂತಹ ದುಸ್ಥಿತಿ ಇರುವುದು ನಿಜಕ್ಕೂ ಖೇದನೀಯ. ಇನ್ನು ಜನ ಸಾಮಾನ್ಯರ ಬದುಕು ಹೇಗಿರುತ್ತೆ ಎಂದು ಒಮ್ಮೆ ಆಲೋಚಿಸಿ” ಎಂದು ಪ್ರಶ್ನಿಸಿದರು.

rto2
ಕಚೇರಿಯ ಕಾಂಪೌಂಡ್‌ನಲ್ಲಿ ಬಿರುಕು ಬಿಟ್ಟಿರುವುದು

ಸಣ್ಣೇಗೌಡ ಯಮಗುಂಬ ಮಾತನಾಡಿ, “ಹುಣಸೂರಿನಲ್ಲಿ ಇರುವಷ್ಟು ಕೆಟ್ಟ ಕಚೇರಿ-ಕಟ್ಟಡಗಳು ಇಡೀ ರಾಜ್ಯದಲ್ಲಿ ಇಲ್ಲ ಅನಿಸುತ್ತದೆ. ಯಾವ ಕಚೇರಿಗೆ ಹೋಗಿ ಎಲ್ಲವೂ ಹಾಳಾಗಿವೆ. ಒಂದೂ ಕೂಡ ಚೆನ್ನಾಗಿಲ್ಲ. ಅಧಿಕಾರಿಗಳಿಗೆ ಇದು ಗೊತ್ತಿದ್ದರೂ, ಈ ಬಗ್ಗೆ ಧ್ವನಿ ಎತ್ತೋದೇ ಇಲ್ಲ. ಜನರಿಗೆ ಕೂರಲು ಹೋಗಲಿ ಶೌಚಾಲಯ, ಕುಡಿಯುವ ನೀರಿಲ್ಲ. ಇದನ್ನು ಯಾರೂ ಕೂಡ ಕೇಳೋದೇ ಇಲ್ಲ. ಗತಿ ಇಲ್ಲದಂತಾಗಿದೆ. ಹುಣಸೂರು ಕಚೇರಿಗಳು ಯಾವಾಗ ಬದಲಾಗುತ್ತೋ ಅದನ್ನ ಅಧಿಕಾರಿಗಳೇ ಹೇಳಬೇಕು” ಎಂದು ಆಕ್ರೋಶ ಹೊರಹಾಕಿದರು.

ಹುಣಸೂರಿಗೆ ಒಳ್ಳೆಯ ಆರ್‌ಟಿಓ ಕಚೇರಿ ಆಗಬೇಕು ಎಂಬುದು ಕೇವಲ ಜನರ ಬೇಡಿಕೆಯಲ್ಲ, ಅಧಿಕಾರಿಗಳದ್ದೂ ಕೂಡ. ಆದಷ್ಟು ಶೀಘ್ರವೇ ಹೊಸ ಕಟ್ಟಡವಾಗಿ, ಹಳೆಯ ಕಟ್ಟಡದಿಂದ ಮುಕ್ತಿ ಪಡೆಯಲಿ ಎಂಬುದು ಸ್ಥಳೀಯರ ಆಗ್ರಹ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರೋ ಅಥವಾ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.

rto3 rto1

WhatsApp Image 2024 07 25 at 3.09.26 PM

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...

ವಿಜಯಪುರ | ಮತದಾರರ ಹಕ್ಕು ರಕ್ಷಣೆಗೆ SIR ಪರಿಶೋಧನಾ ಪ್ರವಾಸ; ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಅಹಿಂಸೆ-ಸತ್ಯಾಗ್ರಹದ ಸಂದೇಶದೊಂದಿಗೆ ಸಾಮರಸ್ಯ ನಡಿಗೆ

ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಭಾರತವನ್ನು ಮುನ್ನಡೆಸಿ, ಜಗತ್ತಿಗೆ ಬೆಳಕಾದ ಮಹಾತ್ಮ...