ಪ್ರತಿಯೊಂದು ರೋಟರಿ ಕ್ಲಬ್‌ಗಳು ಸಮಾಜಕ್ಕೆ ಒಂದಲ್ಲ ಒಂದು ರೀತಿ ಕೊಡುಗೆ ನೀಡುತ್ತಾ ಬಂದಿದ್ದು, ಈ ಸೇವಾ ಮನೋಭಾವನೆಯನ್ನು ನೋಡಿ ಹೊಸ ಸದಸ್ಯರುಗಳು ಸೇರ್ಪಡೆಗೊಳ್ಳುತ್ತಿರುವುದು ರೋಟರಿ ಸಂಸ್ಥೆಯ ಗೌರವ ಹೆಚ್ಚಿದೆ ಎಂದು ರೋಟರಿ ಪ್ರಥಮ ಜಿಲ್ಲಾ ಪಾಲಕ ಶ್ರೀನಿವಾಸ್ ಮೂರ್ತಿ ಶ್ಲಾಘಿಸಿದರು.
ಖಾಸಗಿ ಹೋಟೆಲ್‌ನಲ್ಲಿ ರೋಟರಿ ಸಕ್ಕರೆ ನಾಡು ಮಂಡ್ಯ 3192 ವತಿಯಿಂದ ಆಯೋಜಿಸಿದ್ದ 2024–25ನೇ ಸಾಲಿನ ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸೇವಾ ಮನೋಭಾವ ಎಂಬುದು ಹೆಚ್ಚಬೇಕಿದೆ. ಅದೇ ರೀತಿ ರೋಟರಿ ಕ್ಲಬ್‌ಗಳಲ್ಲಿ ಸದಸ್ಯತ್ವ ಹೊಂದುವ ಮೂಲಕ ಜನರ ಸಮಸ್ಯೆಗಳಿಗೆ ದನಿಯಾಗಿ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಾಗೋಣ ಎಂದು ಮನವಿ ಮಾಡಿದರು.
ರೋಟರಿ ಸಕ್ಕರೆ ನಾಡು 2024-25ನೇ ಸಾಲಿನ ಅಧ್ಯಕ್ಷರಾಗಿ ಎ.ಪಿ.ಸತೀಶ್ ಪದವಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಶಬ್ಧಕೋಶ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿಗಳಾದ ಕುಮಾರಸ್ವಾಮಿ, ಬಿಳಿಗೆರೆ ಶಿವಕುಮಾರ್, ವಲಯ ಪಾಲಕ ಪ್ರಶಾಂತ್, ಸಹ ಪಾಲಕ ಬರ್ನಾಡಪ್ಪ, ಯೂತ್ ಸರ್ವಿಸ್ ಕೆ.ಎಸ್.ಶ್ರೀಧರ್ ಭಾಗವಹಿಸಿದ್ದರು.
