ರಾಯಚೂರಿನ ಉದಯನಗರದಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಬಾಲಕನ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಆಶ್ರಮದ ಉಸ್ತುವಾರಿ ವೇಣುಗೋಪಾಲ ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಪೆನ್ನು ಕದ್ದ ಆರೋಪದ ಮೇಲೆ ಆಶ್ರಮದ ಬಾಲಕ ಶ್ರವಣಕುಮಾರನ ಮೇಲೆ ಹಲ್ಲೆ ಮಾಡಿ ಕಣ್ಣಿಗೆ ಖಾರದ ಪುಡಿ ಎರಚಿ ಕೊಠಡಿಯಲ್ಲಿ ಮೂರು ದಿನ ಕೂಡಿಹಾಕಿದ್ದ ಎಂದು ಹೇಳಲಾಗಿತ್ತು. ಬಾಲಕನ ತಾಯಿ ನೀಡಿದ ದೂರಿನನ್ವಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಹಾಸನ | ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ; ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿ ಸಮಾಲೋಚನಾ ಸಭೆ
ಘಟನೆ ಬಳಿಕ ಮಕ್ಕಳ ಹಕ್ಕುಗಳ ಸಂರಕ್ಷಣಾ ಅಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಕ್ಕಳಿಂದ ಮಾಹಿತಿ ಪಡೆದಾಗ ಶ್ರವಣಕುಮಾರನ ಜತೆಗೆ ಮತ್ತೊಬ್ಬ ಬಾಲಕ ಮೌನೇಶ ಎಂಬುವವನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಮೌನೇಶನಿಗೆ ಕಬ್ಬಿಣದ ಸ್ಕೇಲಿನಿಂದ ಬೆನ್ನು ಹಾಗೂ ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿದ್ದು, ಈಗ ಬಯಲಾಗಿದೆ. ರಾಮಕೃಷ್ಣ ಮಠದ ಗುರೂಜಿ ಆರೋಪಿ ವೇಣುಗೋಪಾಲನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
