ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದೆ. ಸೋಮವಾರ ಈ ಕಂಪನಿಯ ಷೇರಿನ ಬೆಲೆ 102.65 ಅಥವಾ ಶೇಕಡ 3.42ರಷ್ಟು ಕುಸಿದು ಮಾರುಕಟ್ಟೆಯ ಮೌಲ್ಯದಲ್ಲಿ ಭಾರಿ ನಷ್ಟ ಕಂಡಿದೆ. ಕೇವಲ 6 ಗಂಟೆಗಳಲ್ಲಿ ಕಂಪನಿಗಳ ಮಾರುಕಟ್ಟೆಯ ಮೌಲ್ಯ 70,195.32 ಕೋಟಿ ರೂ ಕಳೆದುಕೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ತೀವ್ರ ಕುಸಿತದ ನಂತರ ಕಂಪನಿಯ ಷೇರು 3035ರಿಂದ 2096ರವರೆಗೆ ಕುಸಿದು ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ 19,58,500.25 ರೂ ಕೋಟಿಗೆ ಇಳಿದಿದೆ.
ಇದನ್ನು ಓದಿದ್ದೀರಾ? ಕರಡಿಯದ್ದೇ ದರ್ಬಾರು! 3%ರಷ್ಟು ಕುಸಿತ ಕಂಡ ಷೇರು ಮಾರುಕಟ್ಟೆ
ಇದರ ಹೊರತಾಗಿ ಮಂಗಳವಾರ ಕೇವಲ 20.99 ರೂಗಳ ಮುನ್ನೋಟದೊಂದಿಗೆ 2915.55ಕ್ಕೆ ತನ್ನ ಷೇರು ಮೌಲ್ಯವನ್ನು ಉಳಿಸಿಕೊಂಡಿದೆ.
ಒಟ್ಟಾರೆಯಾಗಿ ಸೆನ್ಸೆಕ್ಸ್166.33 ಅಂಕಗಳನ್ನು ಕಳೆದುಕೊಂಡರೆ, ನಿಫ್ಟಿ 63.05 ಅಂಕಗಳಷ್ಟು ಹಿನ್ನಡೆಯ ಹಾದಿ ಹಿಡಿದಿವೆ.
ವಿದೇಶಿ ಮಾರುಕಟ್ಟೆಯ ಆಧಾರದ ಮೇಲೆ ಭಾರತೀಯ ಷೇರು ಮಾರುಕಟ್ಟೆ ಬಹು ಏರಿಳಿತಗಳಿಂದ ಕೂಡಿವೆ ಎಂದು ಅನೇಕ ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ. ಇದು ಹೀಗೆ ಮುಂದುವರೆಯುತ್ತದೆಯೇ ಕಾದುನೋಡಬೇಕಿದೆ.
