ರಾಮನಗರ | ರೈತ ಮುಖಂಡರು, ಹುತಾತ್ಮ ಯೋಧರ ನೆನಪು ಶ್ಲಾಘನೀಯ: ಪಿಎಸ್‌ಐ ಹರೀಶ್

Date:

Advertisements

ಅನ್ನ ನೀಡುವ ರೈತರನ್ನು ಹಾಗೂ ದೇಶ ಕಾಯುವ ಯೋಧರನ್ನು ಹುತಾತ್ಮರಾದ ಬಳಿಕವೂ ಸ್ಮರಣೆ ಮಾಡುವುದು ಸ್ವಾಗತಾರ್ಹವಾಗಿದೆ ಎಂದು ರಾಮನಗರ ಪುರ ಪೊಲೀಸ್ ಠಾಣೆ ಪಿಎಸ್‌ಐ ಹರೀಶ್ ಶ್ಲಾಘಿಸಿದರು.

ಚನ್ನಪಟ್ಟಣ ತಾಲೂಕಿನ ರೈತ ಮುಖಂಡ ಎಚ್ ಮೊಗೇನಹಳ್ಳಿ ಎಂ ರಾಮು ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ನಾವು ಪ್ರಸ್ತುತ ಸಮಾಜದಲ್ಲಿ ನೆಮ್ಮದಿಯಿಂದ ಜೀವನ ಮಾಡಲು ಯೋಧರು ಕಾರಣ. ನಮಗೆ ಅನ್ನ ನೀಡುವ ಅನ್ನದಾತನ ಶ್ರಮ ಹಾಗೂ ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ಕಾಯುತ್ತ ನಮ್ಮತ್ತ ಅಪಾಯ ಸುಳಿಯದಂತೆ ಹಗಲಿರುಳು ಸೇವೆ ಮಾಡುತ್ತಿರುವ ಯೋಧರ ಶ್ರಮ ಸ್ಮರಣೀಯ” ಎಂದರು.

Advertisements

“ರೈತರು ಶ್ರಮ ಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಪಡೆಯಲು, ಕೃಷಿಗೆ ಬೇಕಾದ ಸೌಲಭ್ಯ ಕೇಳಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಎಲ್ಲವನ್ನು ಪ್ರಶ್ನೆ ಮಾಡುವ ಗಟ್ಟಿ ಧ್ವನಿ ಎಂದರೆ ಅದು ರೈತ ನಾಯಕರು ಮಾತ್ರ. ಸಾವಿರಾರು ರೈತರ ಧ್ವನಿಯಾಗಿ ಸರ್ಕಾರ ಮತ್ತು ಅಧಿಕಾರಿಗಳನ್ನು ಪ್ರಶ್ನೆ ಮಾಡುವ ರೈತ ನಾಯಕರ ಅವಶ್ಯಕತೆ ಇಂದಿಗೂ ಇದೆ. ಇಂತಹ ರೈತನಾಯಕರಾಗಿದ್ದ ಎಂ ರಾಮು ಅವರು ನವಲಗುಂದ ರೈತರ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ವಾಪಸ್ ಬರುವಾಗ ಅಪಘಾತದಲ್ಲಿ ನಿಧನರಾಗಿದ್ದಾರೆ. ಇವರ ಸ್ಮರಣೆ ಮೂಲಕ ಮುಂದಿನ ಪೀಳಿಗೆಗೆ ಇವರ ಬಗ್ಗೆ ಪರಿಚಯಿಸಿ ಹೋರಾಟದ ಗುಣಗಳನ್ನು ಕಲಿಸಲು ಇದು ಪ್ರೇರಣೆಯಾಗಲಿದೆ” ಎಂದರು.

ಕರ್ನಾಟಕ ರಾಜ್ಯ ನೇಗಿಲು ಹೊತ್ತ ರೈತರ ಸಂಘದ ರಾಜ್ಯಾಧ್ಯಕ್ಷ ಬೇವೂರು ಕೃಷ್ಣೇಗೌಡ ಮಾತನಾಡಿ, “ರೈತನಾಯಕ ಎಂ ರಾಮು ಅವರು ಸದಾ ರೈತರ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದರು. ರೈತರಿಗೆ ಯಾವುದೇ ಸಮಸ್ಯೆ ಆದರೂ ಮೊದಲು ಧ್ವನಿ ಎತ್ತುವ ಮೂಲಕ ಹೋರಾಟಕ್ಕೆ ಕಿಚ್ಚು ನೀಡುತ್ತಿದ್ದರು. ಅಧಿಕಾರಿಗಳು, ಜನಪ್ರತಿನಿಧಿಗಳನ್ನು ನೇರವಾಗಿ ಪ್ರಶ್ನೆ ಮಾಡುವ ಅವರ ಗುಣ ಕೆಲವರಲ್ಲಿ ವಿರೋಧಕ್ಕೆ ಕಾರಣವಾಗುತಿತ್ತು. ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ರಾಮು ಅವರು ಎಂದೂ ಹಿಂದೆ ಸರಿದವರಲ್ಲ. ಬೈಕ್ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿದ್ದರೂ ಕೂಡಾ ರೈತ ಸಂಘದ ಹೋರಾಟದ ಬಗ್ಗೆ ಚಿಂತನೆ ಮಾಡುತಿದ್ದರು. ಮನೆಯಿಂದಲೇ ಹೋರಾಟದ ರೂಪುರೇಷೆ ರಚಿಸಿ ಮಾರ್ಗದರ್ಶನ ನೀಡುತ್ತಿದ್ದರು. ಸದಾ ರೈತರ ಹಿತಕ್ಕೆ ಮಿಡಿಯುತ್ತಿದ್ದ ರಾಮು ಅವರು ನಮ್ಮಿಂದ ಅಗಲಿದ್ದರೂ ಅವರು ಹಾಕಿಕೊಟ್ಟ ಹೋರಾಟದ ದಾರಿ ಸದಾ ನಮ್ಮನ್ನು ಕಾಪಾಡುತ್ತದೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ?ಮಂಡ್ಯ | ಜೀತಕ್ಕಿದ್ದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿದ ಜಿಲ್ಲಾಡಳಿತ

ಈ ಸಂದರ್ಭದಲ್ಲಿ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ಸುಮಲತಾ, ರಾಮನಗರ ಜಿಲ್ಲಾ ಉಪಾಧ್ಯಕ್ಷ ಶಿವರಾಮು, ಚನ್ನಪಟ್ಟಣ ತಾಲೂಕು ಅಧ್ಯಕ್ಷ ರವಿ, ಚನ್ನಪಟ್ಟಣ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಲೋಕೇಶ್, ಮಾಗಡಿ ತಾಲೂಕು ಗೌರವಾಧ್ಯಕ್ಷ ಪರಮೇಶ್, ಚನ್ನಪಟ್ಟಣ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಚನ್ನಪಟ್ಟಣ ನಗರ ಉಪಾಧ್ಯಕ್ಷ ಆನಂದ್, ಮೈನಾಯಕನಹಳ್ಳಿ ಗ್ರಾಮ ಶಾಖೆಯ ವಸಂತ್ ಹಾಗೂ ರೈತ ಸಂಘಟನೆಯ ಎಲ್ಲ ಪದಾಧಿಕಾರಿಗಳು ಸೇರಿದಂತೆ ಬಹುತೇಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X