ನೂತನವಾಗಿ ಮಂಜೂರಾದ ಬಿಸಿಎಂ ಹಾಸ್ಟೆಲ್ ಪ್ರಾರಂಭಿಸಿ, ಅರ್ಜಿ ಹಾಕಿರುವ ಎಲ್ಲ ವಿದ್ಯಾರ್ಥಿಗಳಿಗೂ ವಸತಿ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ರಾಣೆಬೆನ್ನೂರು ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಸ್ಟೆಲ್ ಪ್ರವೇಶ ಆಯ್ಕೆಪಟ್ಟಿ ಬಿಡುಗಡೆ ವಿಳಂಬ ನೀತಿಯನ್ನು ಖಂಡಿಸಿ, ಕೂಡಲೇ ಆಯ್ಕೆ ಬಿಡುಗಡೆಗಾಗಿ ಆಗ್ರಹಿಸಿ ಪಟ್ಟಣದ ಬಸ್ ನಿಲ್ದಾಣದಿಂದ ಬಿಸಿಎಂ ಇಲಾಖೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎದುರು ಧರಣಿ ನಡೆಸಿದರು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಆಯ್ಕೆಪಟ್ಟಿ ಬಿಡುಗಡೆ ಮಾಡಿ ಅನೇಕ ದಿನಗಳು ಕಳೆದಿವೆ. ರಾಣೆಬೆನ್ನೂರ ತಾಲೂಕಿನ ಆಯ್ಕೆ ಪ್ರಕ್ರಿಯೆ ವಿಳಂಬಕ್ಕೆ ಹೊಣೆ ಯಾರು? ಆಯ್ಕೆಪಟ್ಟಿ ಬಿಡುಗಡೆ ಮಾಡುವವರೆಗೂ ಇಲಾಖೆಯ ಎದುರು ಹಗಲು ರಾತ್ರಿ ಧರಣಿ ನಡೆಸಲಾಗುವುದು. ಅಧಿಕಾರಿಗಳು ಶಾಸಕರ ಕಚೇರಿಗೆ ಹೋಗಿ ಆಯ್ಕೆ ಪಟ್ಟಿ ಬಿಡುಗಡೆ ಮಾಡುವವರೆಗೂ ಧರಣಿ ಮುಂದುವರೆಸುತ್ತೇವೆ” ಎಂದು ಪಟ್ಟುಹಿಡಿದ್ದ ಎಸ್ಎಫ್ಐ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಆಳವಾದ ಅಧ್ಯಯನ ನಡೆಸಿ ‘ಹಾವಳಿ’ ಕಾದಂಬರಿ ರಚಿಸಲಾಗಿದೆ: ಪವಣ ಕುಮಾರ್ ಕೆ ಪಿ
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಕೊಣಸಾಲಿ, ಶೃತಿ ಆರ್ ಎಂ, ಕರಬಸಪ್ಪ ತೋಟಗೇರ್, ಶೃತಿ ಆರ್ ಎಂ, ಖಲಂದರ್ ಬಿ ಎಂ, ಜೀವನ್ ಕುಮಾರ ನಾಯಕ್, ಸಂಜೀವ ಮತ್ತೂರ, ಸಚಿನ್ ಹರಿಜನ ಪವನ್ ಕುಮಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.