ಹುನಗುಂದ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಬಾಗಲಕೋಟೆ ಲೋಕಾಯುಕ್ತ ಎಸ್‌ಪಿ ಸತೀಶ್ ಚಿಟಗುಬ್ಬಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
“ಪಟ್ಟಣದ ಹೊರವಲಯದ ಗುಡ್ಡದಲ್ಲಿರುವ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ಮುಂದೆ ಚರಂಡಿ ನೀರಿನ ಗುಂಡಿಯು ಅನೇಕ ವರ್ಷಗಳಿಂದಲೂ ಹಾಗೇ ಇದ್ದು, ಮಲಿನಗೊಂಡ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುವ ತಾಣವಾಗಿದೆ. ಇಷ್ಟು ದಿನವಾದರೂ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅವ್ಯವಸ್ಥೆಯನ್ನು ಕಂಡ ಲೋಕಾಯುಕ್ತ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ ಎಚ್ ಕಟ್ಟಿಮನಿ ಮತ್ತು ಪುರಸಭೆ ಇಲಾಖೆಯ ಸಿಬ್ಬಂದಿಗೆ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ವಿದ್ಯಾರ್ಥಿಗಳ ವಸತಿ ನಿಲಯಗಳ ಕೊಠಡಿಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, “ಊಟ ಮತ್ತು ವಸತಿ ನಿಲಯದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ನಮಗೆ ತಿಳಿಸಿ” ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಕ್ರಮವಾಗಿ ಮದ್ಯ ಮಾರಾಟ; ತಡೆಯದಿದ್ದಲ್ಲಿ ಹೋರಾಟದ ಎಚ್ಚರಿಕೆ
“ವಸತಿ ನಿಲಯದಲ್ಲಿನ ಆಹಾರ ಗುಣಮಟ್ಟ, ಗ್ರಂಥಾಲಯ, ಶುದ್ದ ನೀರಿನ ಘಟಕ, ವಿದ್ಯಾರ್ಥಿಗಳಿಗೆ ನೀಡುವ ಕಿಟ್, ಶೌಚಾಲಯ, ಅಡುಗೆಕೋಣೆ, ಸ್ವಚ್ಛತೆ, ಹಾಜರಾತಿ ಕುರಿತು ವಸತಿ ನಿಲಯಗಳ ಕಡತಗಳಗಳ ಪರೀಶೀಲನೆ ನಡೆಸಿದರು.
ಲೋಕಾಯುಕ್ತ ಡಿವೈಎಸ್‌ಪಿ ಸಿದ್ದೇಶ್ವರ, ಸಿಪಿಐಗಳಾದ ಬಸವರಾಜ ಮುಕರ್ತಿಹಾಳ, ಎಂ ಎಚ್ ಬಿದರಿ, ತಹಶೀಲ್ದಾರ್ ನಿಂಗಪ್ಪ ಬಿರಾದರ, ತಾಪಂ ಇಒ ಮುರಳೀಧರ ದೇಶಪಾಂಡೆ, ಪುರಸಭೆ ಮ್ಯಾನೇಜರ ಎಂ ಎಚ್ ಕಳ್ಳಿಗುಡ್ಡ ಇದ್ದರು.