ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಹಿಳಾ ಮುನ್ನಡೆ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಶ್ರಮಿಕ ಶಕ್ತಿ ವಿದ್ಯಾರ್ಥಿ ಸಂಘಟನೆಗಳ ಆಶ್ರಯದಲ್ಲಿ ಆಗಸ್ಟ್ 20 ರಂದು ಮಂಡ್ಯದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಜಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ತಿಳಿಸಿದರು.
ಮಂಡ್ಯ ಪತ್ರಕರ್ತರ ಸಂಘದಲ್ಲಿ ಮ್ಯಾರಾಥಾನ್ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 20 ರಂದು ದೇವರಾಜು ಅರಸು ಅವರ ಜನ್ಮದಿನದ ಅಂಗವಾಗಿ ಎಲ್ಲರಿಗೂ ಹಕ್ಕು ಸಿಗಲಿ ಎನ್ನುವ ನಿಟ್ಟಿನಲ್ಲಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ನಿವೇಶನ ರಹಿತರು ಭಾಗವಹಿಸುವಂತೆ ಮನವಿ ಮಾಡಿದರು.
ಭದ್ರತೆ ಸಿಗಬೇಕು. ಶ್ರಮಿಕ ನಗರಗಳಲ್ಲಿ ಅತ್ಯಾಚಾರ, ಹಲ್ಲೆಗಳು ನಡೆಯದ ರೀತಿಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸ್ಲಂಗಳ ಯುವಕರು ಮಾದಕ ವ್ಯಸನಿಗಳಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿಯೂ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಎಂ ಸಿದ್ದರಾಜು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 60 ಸ್ಲಂಗಳು ಇದ್ದು ಸಾವಿರಾರು ಕುಟುಂಬಗಳು ವಾಸವಿದೆ. ಹಾಗೆಯೇ ರಾಜ್ಯದಲ್ಲಿ 6,500 ಕೊಳಚೆ ಪ್ರದೇಶಗಳು ಇದ್ದು ಅಲ್ಲಿಯೂ ಕೂಡ ಲಕ್ಷಾಂತರ ಕುಟುಂಬಗಳು ವಾಸವಿದೆ. ಆದರೆ ಅವರಿಗೆ ಹಕ್ಕುಪತ್ರ, ವಸತಿ ಮತ್ತು ನಿವೇಶನವನ್ನು ನೀಡಿಲ್ಲ. ಹಾಗಾಗಿ ಈ ಬಗ್ಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಮದ್ದೂರು ಪಟ್ಟಣವನ್ನು ಸೇರಿದಂತೆ ಮಂಡ್ಯದ ಇತರೆಡೆ 60 ಶ್ರಮಿಕ ನಗರಗಳಲ್ಲಿ ನಿವೇಶನ, ವಸತಿ ಹಕ್ಕು ಕಲ್ಪಿಸಿಲ್ಲ. ಆದ ಕಾರಣ ನಿವೇಶನ ಮತ್ತು ವಸತಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮದ್ದೂರು ತಾಲ್ಲೂಕು ಗುಡಿಗೆರೆ ಗ್ರಾಮದ ಯುವಕರು ಮ್ಯಾರಥಾನ್‌ನಲ್ಲಿ ಭಾಗವಹಿಸುವ ಮೂಲಕ ಮಂಡ್ಯದ ಶ್ರಮಿಕರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ರಸ್ತೆಗಳ ಅಭಿವೃದ್ಧಿಗಾಗಿ 15 ಕೋಟಿ ಅನುದಾನ ಬಿಡುಗಡೆ : ಕೊತ್ತೂರು ಮಂಜುನಾಥ್
ಗೋಷ್ಠಿಯಲ್ಲಿ ಮಹಿಳಾ ಮುನ್ನಡೆ ಕಾರ್ಯದರ್ಶಿ ಶಿಲ್ಪ, ಜಿಲ್ಲಾ ಸಮಿಕ ನಗರ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ವಿದ್ಯಾರ್ಥಿ ಸಂಘಟನೆಯ ಅಂಜಲಿ, ಮುಖಂಡರಾದ ನಿಂಗಮ್ಮ, ಲತಾ, ಗಾಯಿತ್ರಿ ಉಪಸ್ಥಿತರಿದ್ದರು.