ಮಂಡ್ಯ | ಶ್ರಮಿಕರ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ‘ಶ್ರಮಿಕರ ಮ್ಯಾರಥಾನ್’

Date:

Advertisements

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಹಿಳಾ ಮುನ್ನಡೆ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಶ್ರಮಿಕ ಶಕ್ತಿ ವಿದ್ಯಾರ್ಥಿ ಸಂಘಟನೆಗಳ ಆಶ್ರಯದಲ್ಲಿ ಮಂಡ್ಯದಲ್ಲಿ ಇಂದು ‘ಶ್ರಮಿಕರ ಮ್ಯಾರಥಾನ್’ ನಡೆಸಲಾಯಿತು.

ಸಂಜಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಕರ್ನಾಟಕ ಜನಶಕ್ತಿಯ ಸಿದ್ದರಾಜು, “ನಾವು ಆರಿಸಿ ಗೆಲ್ಲಿಸಿದ ಜನ ಪ್ರತಿನಿಧಿಗಳು ನಮ್ಮ ಕಡೆ ತಿರುಗಿಯೂ ನೋಡುತ್ತಿಲ್ಲ. ಭೂಮಿ ವಸತಿ ವಂಚಿತರಿಗೆ ನೆಲ ಮತ್ತು ನೆಲೆ ದಕ್ಕುವುದೆಂದು? ಇಂತವರನ್ನು ನಾವು ಮತ್ತೆ ಯಾವುದೇ ಕಾರಣಕ್ಕೂ ಮತ್ತೆ ಗೆಲ್ಲಿಸಬಾರದು” ಎಂದು ತಿಳಿಸಿದರು.

WhatsApp Image 2024 08 20 at 4.11.02 PM

ಮಂಡ್ಯದ ಶ್ರಮಿಕ ನಗರಗಳಲ್ಲಿ ಕಳೆದ ಮೂರು ತಲೆಮಾರುಗಳಿಂದ ತುಂಡು ನೆಲ ಇಲ್ಲದೆ ಸಾವಿರಾರು ಜನ ಬದುಕುತ್ತ ಇದ್ದಾರೆ. ಗೆದ್ದ ಶಾಸಕರು ಇಲ್ಲವೇ ಮಂತ್ರಿಗಳನ್ನು ನಾವು ಹಿಡಿದು ನಿಲ್ಲಿಸಿ ಕೇಳಬೇಕು. ಒಂದೇ ಕೋಣೆಯಂತ ಮನೆಯಲ್ಲಿ ಮೂರು ನಾಲ್ಕು ತಲೆಮಾರಿನ ಜನ ಬದುಕಲು ಸಾಧ್ಯವೇ. ಮೊದಲು ಬಡ ಜನರಿಗೆ ಮನೆ ಕೊಡಿ ಅಂತ ಕೇಳಬೇಕು ಎಂದು ತಿಳಿಸಿದರು.

Advertisements

ಬಳಿಕ ಮಾತನಾಡಿದ ಭೂಮಿ ವಸತಿ ಹಕ್ಕು ವಂಚಿತರ ಸಮಿತಿಯ ಸದಸ್ಯರಾದ ಕಂದೇಗಾಲ ಶ್ರೀನಿವಾಸ್, “ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ನಾವು ಘನತೆಯಿಂದ ಬದುಕಲು ತುಂಡು ಭೂಮಿಯನ್ನು ಕೊಡದ ಸರ್ಕಾರ ಇದ್ದರೇನು ಇಲ್ಲದಿದ್ದರೇನು. ಯಾವುದೇ ಧರ್ಮ, ಜನಾಂಗದವರಾದರು ಮೊದಲು ವಸತಿ ಆಶ್ರಯ ಇರಬೇಕು. ಊಟ, ಶಿಕ್ಷಣ ಇರಬೇಕು‌. ಇವು ಮೂಲಭೂತ ಸೌಲಭ್ಯಗಳು ಸರ್ಕಾರ ಕನಿಷ್ಠ ಇವುಗಳನ್ನಾರು ಕೊಡಬೇಕು. ಎಲ್ಲಾ ಜನರಿಗೆ ಘನತೆಯಿಂದ ಬದುಕಬೇಕು ಎಂದರೆ ತುಂಡು ನೆಲ ಸಿಗಬೇಕು” ಎಂದು ಒತ್ತಾಯಿಸಿದರು.

WhatsApp Image 2024 08 20 at 4.11.00 PM

ಮಹಿಳಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, “ಇವತ್ತು ದೇವರಾಜ ಅರಸು ರವರ ಜನ್ಮ ದಿನ. ಅವರ ಕನಸು ಉಳುವವನೇ ನೆಲದೊಡೆಯ ಅನ್ನುವುದು ಆಗಿತ್ತು. ಸಾವಿರಾರು ರೈತರಿಗೆ ಭೂಮಿಯನ್ನು ಹಂಚಿದ್ದರು. ಆದರೆ ಈಗಿನ ಸರಕಾರ ಜನರ ಬಳಿ ಇರುವ ನೆಲವನ್ನೇ ಕಸಿದುಕೊಳ್ಳುತ್ತಿದೆ. 78ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಶ್ರಮಿಕ ನಗರದ ಜನರು ಇಲ್ಲ. ಅವರಿಗೆ ಬದುಕಲು ತುಂಡು ನೆಲ ಇಲ್ಲ. ಆದ್ದರಿಂದ ನಿಮ್ಮ ಸ್ವಾತಂತ್ರ್ಯ ಸಂಭ್ರಮದಲ್ಲಿ ಇಲ್ಲ. ಓದಿದ ಯುವಕರಿಗೆ ಕೆಲಸ ಕೊಡದೆ ಸಾರಾಯಿ, ಗಾಂಜಾ ಕೊಟ್ಟು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ. ಆದ್ದರಿಂದ ನಿಮ್ಮ ಸ್ವಾತಂತ್ರ್ಯ ಸಂಭ್ರಮದಲ್ಲಿ ನಾವಿಲ್ಲ. ನಮಗೆ ವಸತಿ, ಮನೆ ಹಾಗೂ ಮೂಲಭೂತ ಸೌಕರ್ಯಗಳ ಕೊಡೆದೆ ಇದ್ದರೆ ಮುಂದಿನ ದಿನಗಳಲ್ಲಿ ಓಟನ್ನು ಹಾಕದೆ ಸರಕಾರಕ್ಕೆ ಬುದ್ದಿ ಕಲಿಸಬೇಕಾಗುತ್ತದೆ” ಎಂದು ಹೇಳಿದರು.

ಭದ್ರತೆ ಸಿಗಬೇಕು. ಶ್ರಮಿಕ ನಗರಗಳಲ್ಲಿ ಅತ್ಯಾಚಾರ, ಹಲ್ಲೆಗಳು ನಡೆಯದ ರೀತಿಯಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸ್ಲಂಗಳ ಯುವಕರು ಮಾದಕ ವ್ಯಸನಿಗಳಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿಯೂ ಕ್ರಮ ವಹಿಸಬೇಕು ಎಂದು ಇದೇ ವೇಳೆ ಒತ್ತಾಯಿಸಲಾಯಿತು.

WhatsApp Image 2024 08 20 at 4.11.02 PM 1

ಶ್ರಮಿಕಶಕ್ತಿ ವಿದ್ಯಾರ್ಥಿ ಸಂಫಟನೆಯ ಯುವಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ್, “ಜಿಲ್ಲಾಡಳಿತ ಶ್ರಮಿಕರ ಜೊತೆಗೆ ನಿಲ್ಲಲಿದೆ. ತಾಂತ್ರಿಕ ಕಾರಣಗಳಿಗಾಗಿ ಕೆಲವು ಕೆಲಸಗಳು ನಿಧಾನವಾಗಿವೆ. ಮೂರು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಶೀಘ್ರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.

ಈ ವೇಳೆ ವಕೀಲರಾದ ಬಿ.ಟಿ.ವಿಶ್ವನಾಥ್, ಸಿಐಟಿಯುನ ಸಿ.ಕುಮಾರಿ, ನುಡಿ ಕರ್ನಾಟಕದ ನಾಗೇಶ್, ರೈತ ಸಂಘದ ಲತಾ ಶಂಕರ್, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪವಿತ್ರ, ಮಹಿಳಾ ಮುನ್ನಡೆ ಸಂಘಟನೆಯ ಶಿಲ್ಪ, ಅಂಜಲಿ, ಕರ್ನಾಟಕ ಜನಶಕ್ತಿಯ ವೈದುನ, ಚಂದ್ರು, ಮದ್ದೂರು ತಮಿಳು ಕಾಲೋನಿಯ ರವಿ, ಪೊನ್ನುಸ್ವಾಮಿ, ವೀರಮ್ಮ, ಲಕ್ಷ್ಮಿ, ಶಾಂತಿ, ಮಂಜುಳಾ, ಗುಡಿಗೆರೆಯ ಪ್ರಸಾದ್ ಹಾಗೂ ಮಂಡ್ಯ ಜಿಲ್ಲೆಯ ಶ್ರಮಿಕ ನಿವಾಸಿಗಳು ಉಪಸ್ಥಿತರಿದ್ದರು.

ಮಂಡ್ಯ 15
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X