ದಿನನಿತ್ಯ 8 ಗಂಟೆಗೂ ಅಧಿಕ ಸಮಯ ದುಡಿಯುವ ಪ್ರತಿಯೊಂದು ಕುಟುಂಬಕ್ಕೂ ಉಳಿತಾಯದ ಆಲೋಚನೆ ಇದ್ದೇ ಇರುತ್ತದೆ. ಆದರೆ ಮನೆ ಮಂದಿ ಎಲ್ಲರೂ ಸೇರಿ ಕೆಲಸ ಮಾಡಿದರೂ, ತಿಂಗಳ ಕೊನೆಯಲ್ಲಿ ಏನನ್ನೂ ಉಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವವರೇ ಬಹುತೇಕ. ಆದರೆ ಒಂದು ಕುಟುಂಬದ ಅಲ್ಪ ಉಳಿತಾಯದ ಮಾಸಿಕ 10 ರಿಂದ 5 ಸಾವಿರ ಉಳಿತಾಯದಿಂದ ಮುಂಬರುವ 30 ವರ್ಷಗಳಲ್ಲಿ 3ಕೋಟಿಗೂ ಅಧಿಕ ಹಣವನ್ನು ಗಳಿಸಬಹುದು.
ಶಿಸ್ತಿನಿಂದ ದೀರ್ಘಾವಧಿ ಉಳಿತಾಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಕೇವಲ 10-15 ವರ್ಷಗಳಲ್ಲಿ ಕೋಟಿಗಳಿಸಲು ಸಾಧ್ಯವೆನ್ನುತ್ತವೆ ಅಧ್ಯಯನಗಳು. ಅದು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದರೇ ಹೀಗೆ ಸಣ್ಣ ಸಣ್ಣ ಉಳಿತಾಯದಿಂದಲೇ ಇಂದು ಕೋಟ್ಯಾಧಿಪತಿಯಾಗಿರುವ ಅನೇಕರನ್ನು ನೋಡಬಹುದು.
ಆದರೆ ಹೀಗೆ ಹಣವಂತರಾಗಲು ಕೆಲವು ಸಿಂಪಲ್ ಸೂತ್ರಗಳನ್ನು ಪಾಲಿಸಲೇಬೇಕಾಗುತ್ತದೆ. ಅವನ್ನು ಈ ಕೆಳಕಂಡತೆ ನೋಡಬಹುದು.
- ಒಟ್ಟು ಖರ್ಚುಗಳ ದಾಖಲು: ದಿನ ನಿತ್ಯ ಮಾಡುವ ಖರ್ಚುಗಳಾದ ಓಡಾಟದ ಖರ್ಚು, ಹೊರಗೆ ತಿನ್ನುವ ಊಟ, ಮನೆಗೆ ತಂದ ದಿನಸಿ ಸಾಮಗ್ರಿಗಳು, ಕರೆಂಟ್ ಬಿಲ್, ಮನೆ ಬಾಡಿಗೆ, ಗ್ಯಾಸ್ ಬಲ್, ನೀರಿನ ಬಿಲ್ ಹೀಗೆ ಒಂದು ತಿಂಗಳಲ್ಲಿ ಖರ್ಚಾಗುವ ಎಲ್ಲಾ ಬಿಲ್ ಗಳನ್ನು ಸಂಗ್ರಹಿಸಿ ಅಥವಾ ದಿನದ ಕೊನೆಯಲ್ಲಿ ತಪ್ಪದೇ ಒಂದು ಬುಕ್ ನಲ್ಲಿ ಬರೆದು ಇಡಬೇಕು. ಹೀಗೆ ಮಾಡುವುದರಿಂದ ನಿಮಗೆ ಯಾವುದರಲ್ಲಿ ಹೆಚ್ಚು ಖರ್ಚಾಗುತ್ತದೆ, ಯಾವುದು ಅನುಪಯೋಗ ಖರ್ಚು, ಯಾವುದನ್ನು ಇನ್ನುಮುಂದೆ ಮಾಡಬಾರದು ಎನ್ನುವ ಹಲವಾರು ವಿಷಯಗಳನ್ನು ಕರಾರುವಾಕ್ಕಾಗಿ ಗುರುತಿಸಬಹುದು. ಇದರಿಂದ ಸುಮಾರು 10% ಹಣವನ್ನು ಉಳಿಸಬಹುದು ಎನ್ನುವುದನ್ನು ಅಧ್ಯಯನಗಳು ತಿಳಿಸುತ್ತವೆ. ಇದನ್ನು ಮನೆಯ ಮಕ್ಕಳಲ್ಲಿ ಮಾಡಿಸದರೆ ಅವರಿಗೆ ಹಣದ ನಿರ್ವಹಣೆಯ ಬಗ್ಗೆ ಹೆಚ್ಚು ತಿಳಿಯಲು ಅನುಕೂಲವಾಗುತ್ತದೆ. ಆದರೆ ದೊಡ್ಡವರಿಂದ ಹಿಡಿದು ಚಿಕ್ಕವರೂ ತಪ್ಪದೇ ತಮ್ಮ ಖರ್ಚುಗಳನ್ನು ದಾಖಲಿಸಬೇಕು.
- ಫ್ಯಾಮಿಲಿ ಬಜೆಟ್: ತಿಂಗಳ ಸಂಬಳ ಬಂದಕೂಡಲೆ, ಮೇಲೆ ತಿಳಿಸಲಾದ ಅಷ್ಟೂ ಖರ್ಚುಗಳನ್ನು ಮೊದಲ ಎರಡು ಮೂರು ವಾರಗಳಲ್ಲಿ ವ್ಯಯಿಸಿಬಿಡುತ್ತೇವೆ. ಆದರೆ ಅದನ್ನು ಕೂಡಲೇ ಬದಲಾಯಿಸಬೇಕು. ಮೊದಲು ಈ ತಿಂಗಳ ಒಟ್ಟು ಖರ್ಚು ಏನೇನು, ಯಾವುವು ಮೊದಲ ಆಧ್ಯತೆಗಳು ಎನ್ನುವ ಆಧಾರದ ಮೇಲೆ ಪಟ್ಟಿ ಮಾಡಿ ಅದರ ಅನುಗುಣವಾಗಿ ಹಣವನ್ನು ಮೀಸಲಿಡಬೇಕು. ಇದರಿಂದ ನಮ್ಮ ತಿಂಗಳ ಖರ್ಚು ಮತ್ತು ಉಳಿತಾದ ಬಗ್ಗೆ ಮೊದಲೇ ಅಂದಾಜು ಸಿಕ್ಕಿಬಿಡುತ್ತದೆ.
- 50:30:20 ಪಾಲನೆ: ಇದನ್ನು ಚಾಚುತಪ್ಪದೇ ಅತಿ ಮುಖ್ಯವಾಗಿ ಪಾಲಿಸಲೇ ಬೇಕಾದ ಸೂತ್ರಗಳಲ್ಲಿ ಒಂದು. ಇದನ್ನೇ ಹಲವಾರು ಯಶಸ್ವಿ ವ್ಯಕ್ತಿಗಳು ಪಾಲಿಸುತ್ತಾರೆ. ಈ ಸೂತ್ರದ ಪ್ರಕಾರ ಮಾಸಿಕ ಉಳಿತಾಯವನ್ನು 50:30:20 ಆಧಾರದಲ್ಲಿ ವಿಭಾಗಿಸಬೇಕು. ಅಂದರೆ ಸಂಬಳದ ಅರ್ಧಭಾಗವನ್ನು ಮನೆಯ ಅಗತ್ಯಗಳಿಗೆ ಖರ್ಚು ಮಾಡಬೇಕು. ಉಳಿದ ಅರ್ಧಭಾಗದಲ್ಲಿ 30%ಹಣವನ್ನು ವಯಕ್ತಿಕ ಬದುಕಿಗೆ ವ್ಯಯ ಮಾಡಬೇಕು. ಅಂದರೆ ಹೊರಗಡೆ ಹೋದಾಗ ನಮ್ಮಿಷ್ಟದ ವಸ್ತುಗಳನ್ನು ಕೊಳ್ಳಲು ಬಳಕೆ ಮಾಡಬೇಕು. ಇನ್ನುಳಿದ ಹಣವನ್ನು ಖರ್ಚುಮಾಡದೇ ಉಳಿತಾಯ ಮಾಡಬೇಕು.
ಉದಾ: ಒಟ್ಟು ಸಂಬಳ 20,000ರೂ ಇದ್ದರೆ 10,000 ಮನೆ ಖರ್ಚಿಗೆ, 6,000ರೂ ಅಗತ್ಯ ವಸ್ತುಗಳ ಖರೀದಿ ಅಥವಾ ವಯಕ್ತಿಕ ಖರ್ಚು, 4,000 ಉಳಿತಾಯ ಮಾಡಬೇಕು. ಈ ಸೂತ್ರವನ್ನು ಕೆಲವರು ಹೆಚ್ಚು ಉಳಿತಾಯ ಮಾಡುವ ನಿಟ್ಟಿನಲ್ಲಿ ಸೊಲ್ಪ ಬದಲಾವಣೆ ಮಾಡಿ 50% ಹಣವನ್ನು ಉಳಿತಾಯ ಮಾಡುತ್ತಾರೆ. ಇದರಿಂದ ಬಹುಬೇಗನೆ ತಮ್ಮ ಗುರಿಯ ಕಡೆಗೆ ಮುನ್ನುಗ್ಗತ್ತಾರೆ. - ಬವಿಷ್ಯಕ್ಕಾಗಿ ಹೂಡಿಕೆ: ಈ ಹಂತದಲ್ಲಿ ನಮ್ಮ ಹಣವನ್ನು ಕೇವಲ ಉಳಿಯತಾಯಕ್ಕಾಗಿ ಮಾತ್ರವಲ್ಲದೆ ನಿರ್ದಿಷ್ಠ ಗುರಿಯೊಂದಿಗೆ ದೀರ್ಘಾವಧಿ ಹೂಡಿಕೆ ಮಾಡಬೇಕಾಗುತ್ತದೆ. ಇಲ್ಲಿ ನಮ್ಮ ಹಣವು ನಮಗಾಗಿ ದುಡಿಯುವುದಲ್ಲದೆ, ನಮ್ಮ ಭವಿಷ್ಯಕ್ಕೂ ದುಡಿಯುತ್ತಿದೆ ಎಂದು ಭಾವಿಸಬೇಕು. 20% ಉಳಿತಾಯದ ಮೊತ್ತವನ್ನು ಕೇವಲ ಉಳಿತಾಯ ಖಾತೆಯಲ್ಲೋ ಅಥವಾ ಫಿಕ್ಸ್ಡ್ ಡೆಪಾಸಿಟ್ ಮಾಡಿದರೆ ಹಣ ವೃದ್ದಿಸುವುದಿಲ್ಲ. ಬದಲಿಗೆ ಮ್ಯುಚುವಲ್ ಫಂಡ್ ಗಳಲ್ಲಿ, ಷೇರು ಮಾರುಕಟ್ಟೆಯ ಇಟಿಫ್ ಗಳಲ್ಲಿ, ಅಥವಾ ಡಿವಿಡೆಂಡ್ ಕೊಡುವ ಷೇರುಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಪ್ರತಿತಿಂಗಳು ಉಳಿತಾದ ಹಣವನ್ನು ಶಿಸ್ತುಬದ್ದವಾಗಿ ಎಸ್ಐಪಿ (systematic investment plan-SIP) ಮೂಲಕ ಹೂಡಿಕೆ ಮಾಡಿದರೆ, ಸಾಧಾರಣ 12% ವಾರ್ಷಿಕ ಆದಾಯದ ರಿಟರ್ನ್ ಗಳಿಸಬಹುದು. ಇದರಿಂದ ನಮ್ಮ ಉಳಿತಾಯದ ಹಣವು ವೇಗವಾಗಿ ವೃದ್ದಿಸುತ್ತದೆ.
ಮುಖ್ಯವಾಗಿ ಈ ಹಂತದಲ್ಲಿ ನಾವು ಪ್ರತಿತಿಂಗಳು ದೀರ್ಘಾವಧಿ ಹೂಡಿಕೆ ಮಾಡುವುದಿಂದ ಕಂಪೌಂಡಿಂಗ್ ಆಧಾರದಲ್ಲಿ ಬೆಳೆಯುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅಲ್ಪಾವದಿಯಲ್ಲಿ ಹಿಂಪಡೆಯಬಾರದು.
ಉದಾ: ಯಾವುದಾದರು ಒಂದು ಮ್ಯುಚುವಲ್ ಫಂಡ್ ನಲ್ಲಿ ತಿಂಗಳಿಗೆ 10,000ರೂ ನಂತೆ, ವಾರ್ಷಿಕ 12% ನಿರೀಕ್ಷೆಯೊಂದಿಗೆ 30ವರ್ಷ ಹೂಡಿಕೆ ಮಾಡಿದರೆ 3.52 ಕೋಟಿ ಹಣವನ್ನು ನೋಡಬಹುದು. - Term ಮತ್ತು Health ಇನ್ಸೂರೆನ್ಸ್: ಇವೆರಡನ್ನು ಹೂಡಿಕೆಯ ಬೇಲಿ ಅಂತಲೂ ವ್ಯಾಖ್ಯಾನಿಸುತ್ತಾರೆ.ಇದನ್ನು ಪ್ರತಿಯೊಬ್ಬರೂ ಮಾಡಿಸಿಕೊಳ್ಳಲೇ ಬೇಕಾದ ಅಗತ್ಯ ಈಗ ಇದೆ. ಆರೋಗ್ಯ ಸಬಂಧಿ ವೆಚ್ಚಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಹೂಡಿಕೆದಾರರು ಮೇಲಿನ ನಾಲ್ಕು ಅಂಶಗಳನ್ನು ಪ್ರವೇಶಿಸುವ ಮೊದಲು ಈ Term ಮತ್ತು Health ಇನ್ಸೂರೆನ್ಸ್ ನ್ನು ಮಾಡಿಸಲೇಬೇಕಾಗುತ್ತದೆ. ಆರೋಗ್ಯ ಸಮಸ್ಯೆ ಎದುರಾದಾಗ ಹೆಲ್ತ್ ಇನ್ಸೂರೆನ್ಸ್, ಅಥವಾ ಯಾವುದೋ ಅಪಾಯಕ್ಕೆ ಸಿಲುಕಿ ಸಾವನ್ನಪ್ಪಿದರೆ ಟರ್ಮ್ ಇನ್ಸೂರೆನ್ಸ್ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಕಾಪಾಡುತ್ತದೆ. ಇಲ್ಲದಿದ್ದರೆ ತಮ್ಮ ಹೂಡಿಕೆ ಹಣವನ್ನೇ ವ್ಯಯಮಾಡಬೇಕಾಗುತ್ತದೆ. ಆದ್ದರಿಂದ ಒಂದು ಆರೋಗ್ಯ ವಿಮೆ ಮತ್ತು ಟರ್ಮ್ ವಿಮೆ ಅತ್ಯಗತ್ಯವಾಗುತ್ತದೆ.
ಇವಿಷ್ಟನ್ನು ದೀರ್ಘಾವಧಿಯಲ್ಲಿ ಪಾಲಿಸಿದರೆ ಸಣ್ಣ ಉಳಿತಾಯದಾರರು ಭವಿಷ್ಯದಲ್ಲಿಕೋಟಿ ಗಳಿಸಬಹುದಾಗಿದೆ. ಮುಂದಿನ 10-20ವರ್ಷಗಳಲ್ಲಿ ಮಕ್ಕಳ ಓದು, ಮನೆ ಖರೀದಿ ಅಥವಾ ವೃದ್ದಾಪ್ಯ ಜೀವನವನ್ನು ನಿರಾತಂಕದಿಂದ ಕಳೆಯಲು ಈ ಸೂತ್ರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದು ಹೇಳಬಹುದು.
Disclaimer: ಇಲ್ಲಿ ತಿಳಿಸಲಾದ ಮಾಹಿತಿಯು ಶೈಕ್ಷಣಿಕ ಉದ್ದೇಶಕ್ಕಾಗಿ. ಹೂಡಿಕೆ ಮತ್ತು ಟ್ರೇಡಿಂಗ್ ಗಳು ಷೇರು ಮಾರುಕಟ್ಟೆಯ ಅಪಾಯಕ್ಕೆ ಒಳಗೊಂಡಿತ್ತವೆ. ಹೂಡಿಕೆಗೂ ಮುನ್ನ ತಜ್ಞರ ಸಲಹೆ ಮತ್ತು ಅಧ್ಯಯನ ನಡೆಸುವುದು ಹೆಚ್ಚು ಉಪಯುಕ್ತ.
