ಪೋರ್ಚುಗಲ್‌ನ ಪ್ರಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಯೂಟ್ಯೂಬ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಯೂಟ್ಯೂಬ್ ಚಾನೆಲ್ ಆರಂಭಿಸಿದ ಒಂದು ದಿನದಲ್ಲೇ ಡೈಮಂಡ್ ಬಟನ್ ಪಡೆದುಕೊಂಡಿದ್ದಾರೆ.
ಚಾನೆಲ್ ಆರಂಭಿಸಿದ 90 ನಿಮಿಷಕ್ಕೆ 1 ಮಿಲಿಯನ್ ಅಂದರೆ 10 ಲಕ್ಷ ಹಾಗೂ 12 ಗಂಟೆಯಲ್ಲೇ 10 ಮಿಲಿಯನ್ ಅಂದರೆ ಒಂದು ಕೋಟಿಗೂ ಅಧಿಕ ಚಂದಾದಾರರನ್ನು ಹೊಂದಿದ್ದಾರೆ. ಈ ಸಮಯಕ್ಕೆ ಚಂದಾದಾರರ ಸಂಖ್ಯೆ 30.8 ಮಿಲಿಯನ್ ಅಂದರೆ ಮೂರು ಕೋಟಿಗೂ ಅಧಿಕವಾಗಿದೆ. ಕ್ಷಣಕ್ಷಣಕ್ಕೂ ಚಂದಾದಾರರ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿದೆ.
ರೊನಾಲ್ಡೊಗೆ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಅವರ ಯೂಟ್ಯೂಬ್ ಚಾನೆಲ್ ಸಾಕ್ಷಿಯಾಗಿದೆ. ಫುಟ್ಬಾಲ್ ಪ್ರೇಮಿಗಳ ನೆಚ್ಚಿನ ಆಟಗಾರರಾದ ರೊನಾಲ್ಡೊ ಖ್ಯಾತಿಯು ಬರೀ ಒಂದು ಯೂಟ್ಯೂಬ್ ಚಾನೆಲ್‌ನಿಂದ ಮತ್ತಷ್ಟು ಹೆಚ್ಚಾಗಿದೆ.
ಸಾಮಾನ್ಯವಾಗಿ ಯೂಟ್ಯೂಬರ್‌ಗಳಿಗೆ ಸಿಲ್ವರ್, ಗೋಲ್ಡ್, ಡೈಮಂಡ್ ಬಟನ್‌ಗಳನ್ನು ಪಡೆಯುವುದು ಒಂದು ಕನಸಾಗಿರುತ್ತದೆ. ಈ ಎಲ್ಲ ಬಟನ್‌ಗಳು ಚಂದಾದಾರರ ಸಂಖ್ಯೆಯ ಆಧಾರದಲ್ಲಿ ಸಿಗುತ್ತದೆ. 100,000 ಚಂದಾದಾರರಾದರೆ ಸಿಲ್ವರ್ ಬಟನ್, 1,000,000 ಚಂದಾದಾರರಾದರೆ ಗೋಲ್ಡ್ ಬಟನ್, 10,000,000 ಚಂದಾದಾರರಾದರೆ ಡೈಮಂಡ್ ಬಟನ್ ಲಭ್ಯವಾಗುತ್ತದೆ.
ಇದನ್ನು ಓದಿದ್ದೀರಾ? ಜಗತ್ತಿನ ದೃಶ್ಯ ಮಾಧ್ಯಮವನ್ನು ಸಂಪೂರ್ಣವಾಗಿ ಆವರಿಸಿಕೊಂಡ ಯೂಟ್ಯೂಬ್
ಯೂಟ್ಯೂಬರ್‌ಗಳು ತಮ್ಮ ಕನಸನ್ನು ನನಸಾಗಿಸಲು ಹಲವಾರು ವರ್ಷಗಳ ಪರಿಶ್ರಮದಿಂದ ಪಡೆಯುವಾಗ 39 ವರ್ಷ ವಯಸ್ಸಿನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಬರೀ 10 ಗಂಟೆಗಳಲ್ಲಿ ಸಾಧಿಸಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಪತ್ನಿ ಜಾರ್ಜಿನಾ ರೊಡ್ರಿಗಸ್ ಅವರ ಹಿರಿಯ ಮಗ ಕ್ರಿಸ್ಟಿಯಾನೊ ರೊನಾಲ್ಡೊ ಜೂನಿಯರ್ ಜೊತೆಗೆ ವಿಡಿಯೋಗಳನ್ನು ಮಾಡಿ ಈ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಈ ಹಿಂದೆ ಮಿಸ್ಟರ್ ಬೀಸ್ಟ್ 132 ದಿನಗಳಲ್ಲಿ ಮಿಲಿಯನ್ ಚಂದಾದಾರರನ್ನು ಪಡೆಯುವ ಸಾಧನೆ ಮಾಡಿದ್ದರು. ಪ್ರಸ್ತುತ 311 ಮಿಲಿಯನ್ ಚಂದಾದಾರರನ್ನು ಮಿಸ್ಟರ್ ಬೀಸ್ಟ್ ಹೊಂದಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಚಂದಾದಾರರ ಪ್ರಮಾಣ ಹೆಚ್ಚಾಗುತ್ತಿರುವ ವೇಗವನ್ನು ನೋಡಿದರೆ ಶೀಘ್ರವೇ ಮಿಸ್ಟರ್ ಬೀಸ್ಟ್‌ಗಿಂತ ಅಧಿಕ ಚಂದಾದಾರರನ್ನು ಕ್ರಿಸ್ಟಿಯಾನೋ ರೊನಾಲ್ಡೊ ಹೊಂದುವ ನಿರೀಕ್ಷೆಯಿದೆ.