ಜಗತ್ತಿನ ದೃಶ್ಯ ಮಾಧ್ಯಮವನ್ನು ಸಂಪೂರ್ಣವಾಗಿ ಆವರಿಸಿಕೊಂಡ ಯೂಟ್ಯೂಬ್

Date:

ವಿಶ್ವದಾದ್ಯಂತ ಸಾವಿರಾರು ಜನರು ವಿವಿಧ ರೀತಿಯ ಚಾನಲ್‌ಗಳ ಮೂಲಕ ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಯೂಟ್ಯೂಬ್‌ ತನಗೆ ಬರುವ ಜಾಹೀರಾತು ಆದಾಯದಲ್ಲಿ ಶೇ. 55 ರಷ್ಟು ಹಣವನ್ನು ಯೂಟ್ಯೂಬ್‌ ಚಾನಲ್‌ ನಡೆಸುವವರಿಗೆ ನೀಡುತ್ತದೆ. ವಿಡಿಯೋ ರಚಿಸುವವರು ಹಾಗೂ ಪಾಲುದಾರರಿಗೆ ಯೂಟ್ಯೂಬ್‌ ಸಂಸ್ಥೆ ಕಳೆದ ಮೂರು ವರ್ಷಗಳಿಂದ 70 ಬಿಲಿಯನ್‌ ಡಾಲರ್‌ ಪಾವತಿಸಿದೆ.

ಪೇಪಾಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಚ್ಯಾಡ್ ಹರ್ಲಿ, ಸ್ಟೀವ್ ಚಾನ್ ಮತ್ತು ಜಾವೆದ್ ಕರೀಮ್‌ ಎಂಬ ಉದ್ಯೋಗಿಗಳು ತಮ್ಮ ಮೋಜಿನ ಕೂಟದ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದ ನಂತರ ಹಂಚಿಕೊಳ್ಳಲು ಹೆಣಗಾಡುತ್ತಿದ್ದರು. ಇಂತಹ ವಿಡಿಯೋಗಳನ್ನು ಸುಲಭವಾಗಿ ಒಂದು ಕಡೆ ಸಿಗುವ ವೇದಿಕೆಯನ್ನಾಗಿಸಲು ಫೆಬ್ರವರಿ 14, 2005 ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 11.5 ಲಕ್ಷ ಡಾಲರ್‌ ಬಂಡವಾಳದೊಂದಿಗೆ ‘ಯೂಟ್ಯೂಬ್‌’ ಎಂದ ದೃಶ್ಯ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಈ ಮಾಧ್ಯಮವು ಜಗತ್ತಿನ ದೃಶ್ಯ ಮಾಧ್ಯಮವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಳ್ಳುತ್ತದೆ ಎಂಬುದನ್ನು ಅರಿತ ಗೂಗಲ್‌ ಸಂಸ್ಥೆ ನವೆಂಬರ್‌ 2006ರಲ್ಲಿ 1.65 ಬಿಲಿಯನ್‌ ಡಾಲರ್‌ಗಳನ್ನು ನೀಡಿ ಸಂಸ್ಥಾಪಕರಿಂದ ಖರೀದಿಸಿತು.

ಸದ್ಯ ಗೂಗಲ್‌ನ ಪ್ರಮುಖ ಅಂಗಸಂಸ್ಥೆಯಾಗಿರುವ ಯೂಟ್ಯೂಬ್ ಸಾಮಾಜಿಕ ಮಾಧ್ಯಮಗಳ ಪೈಕಿ ಫೇಸ್‌ಬುಕ್‌ ನಂತರದ ಎರಡನೇ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಅಂದಾಜು 270 ಕೋಟಿ ಚಂದಾದಾರರಿದ್ದಾರೆ. ವರ್ಷಕ್ಕೆ ಸಾವಿರಾರು ಕೋಟಿ ಆದಾಯ ಹರಿದು ಬರುತ್ತಿದೆ. ಕಂಪನಿ ಮಾತ್ರವಲ್ಲ ಯೂಟ್ಯೂಬ್‌ ಮೂಲಕ ವಿಶ್ವದಾದ್ಯಂತ ಸಾವಿರಾರು ಮಂದಿ ತಮ್ಮದೇ ವಿಧವಿಧವಾದ ಚಾನಲ್‌ಗಳನ್ನು ಆರಂಭಿಸುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡು ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ.

ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಾಲಕಾಲಕ್ಕೆ ತಂತ್ರಜ್ಞಾನದಲ್ಲಿ ಬದಲಾವಣೆ ಮಾಡಿಕೊಂಡು ಕಳೆದ 2 ದಶಕಗಳಿಂದ ಪ್ರಬಲ ಮಾಧ್ಯಮವಾಗಿ ಯೂಟ್ಯೂಬ್ ಹೊರಹೊಮ್ಮಿದೆ. ಅಲ್ಲದೆ ಇಂಟರ್ನೆಟ್ ಟಿವಿಯ ಸ್ವರೂಪ ಮತ್ತು ವೀಕ್ಷಕರ ಅಭ್ಯಾಸಗಳನ್ನು ಬದಲಾಯಿಸುವುದನ್ನು ಮುಂದುವರೆಸಿದೆ. ಇತ್ತೀಚಿಗೆ ಕೆಲವು ವರ್ಷಗಳಿಂದ ಹಣ ನೀಡಿಕೆಯ ಚಂದಾದಾರಿಕೆ ಆಯ್ಕೆಯನ್ನು ಶುರು ಮಾಡಿದರೂ ಶೇ. 90 ಮಂದಿ ಗ್ರಾಹಕರು ಉಚಿತ ಚಂದಾದಾರಿಕೆಯಲ್ಲಿಯೇ ದೃಶ್ಯಗಳನ್ನು ವೀಕ್ಷಿಸುತ್ತಿದ್ದಾರೆ.   

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯೂಟ್ಯೂಬರ್‌ಗಳಿಗೆ 70 ಬಿಲಿಯನ್‌ ಡಾಲರ್‌ ಪಾವತಿ

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕರು ಹೊರಗಡೆ ಪ್ರಪಂಚಕ್ಕೆ ಸುಳಿಯದೆ ಮನೆಯಲ್ಲಿಯೇ ಬಂಧಿಯಾಗಿದ್ದಾಗ ತಮ್ಮ ಮನರಂಜನೆಗಾಗಿ ವಿವಿಧ ರೀತಿಯ ಕಂಟೆಂಟ್‌ ದೊರೆಯುವ ಯೂಟ್ಯೂಬ್‌ ಮಾಧ್ಯಮಕ್ಕೆ ಮೊರೆ ಹೋದರು. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ದೃಶ್ಯ ಮಾಧ್ಯಮ ಯೂಟ್ಯೂಬ್‌ನ ಜನಪ್ರಿಯತೆ ಮತ್ತೊಂದು ಎತ್ತರಕ್ಕೆ ಜಿಗಿಯಿತು. ಅಮೆಜಾನ್‌, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಸೇರಿದಂತೆ ವಿವಿಧ ರೀತಿಯ ಹಣ ಪಾವತಿಸುವ ಒಟಿಟಿ ಆಗಮಿಸಿತ್ತಾದರೂ ಯೂಟ್ಯೂಬ್‌ ಬೆಳವಣಿಗೆಗೆ ಯಾವುದೇ ಕೊರತೆಯೂ ಆಗಲಿಲ್ಲ, ಹಿನ್ನಡೆಯೂ ಸಂಭವಿಸಲಿಲ್ಲ.

ಯಾಕೆಂದರೆ ಯೂಟ್ಯೂಬ್‌ನಲ್ಲಿನ ಶೇ.90 ರಷ್ಟು ಕಂಟೆಂಟ್‌ಗಳನ್ನು ವೀಕ್ಷಿಸಲು ಯಾವುದೇ ಹಣ ಪಾವತಿಸಬೇಕಾಗಿಲ್ಲ. ಆಯ್ದ ದೃಶ್ಯಗಳಿಗೆ ಮಾತ್ರ ಹಣ ಪಾವತಿಸಿ ಚಂದಾದಾರರಾಗಬೇಕು. ಜಾಹೀರಾತು ರಹಿತ ಆಯ್ಕೆ ಲಭ್ಯವಿದ್ದು, ಇದಕ್ಕೆ ಹಣ ಪಾವತಿಸಬೇಕಿದೆ. ವೀಕ್ಷಣೆಗೆ ಕೆಲವೊಂದು ಷರತ್ತುಗಳು ಹೊರತುಪಡಿಸಿದರೆ ಬಹುತೇಕ ಉಚಿತ ವ್ಯವಸ್ಥೆಯನ್ನು ಯೂಟ್ಯೂಬ್‌ ನೀಡುತ್ತದೆ.

ಈ ಸುದ್ದಿ ಓದಿದ್ದೀರಾ? ಮದುವೆಯಾಗದೆ 12 ದೇಶಗಳ ನೂರು ಮಕ್ಕಳಿಗೆ ತಂದೆಯಾಗಿದ್ದೇನೆ: ಟೆಲಿಗ್ರಾಂ ಸಿಇಒ ಪಾವೆಲ್ ದುರೋವ್‌

ಹೂಡಿಕೆ ವಿಚಾರದಲ್ಲೂ ಒಟಿಟಿ ಮಾಧ್ಯಮಗಳಿಗೆ ಹೋಲಿಸಿದರೆ ಯೂಟ್ಯೂಬ್‌ ಅತೀ ಹೆಚ್ಚು ಹಣವನ್ನು ತೊಡಗಿಸುವುದಿಲ್ಲ. ಬೇರೆ ಒಟಿಟಿ ಮಾಧ್ಯಮಗಳು ತಮ್ಮ ಚಂದಾದಾರರನ್ನು ಉಳಿಸಿಕೊಳ್ಳಲು ಜನಪ್ರಿಯ ಕಟೆಂಟ್‌ಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಕೆಲವೊಂದು ಷರತ್ತುಗಳನ್ನು ಒಳಗೊಂಡಿರುವುದನ್ನು ಹೊರತುಪಡಿಸಿದರೆ ಕಟೆಂಟ್‌ ಅಪ್‌ಲೋಡ್‌ ಮಾಡಲು ಯೂಟ್ಯೂಬ್‌ ಉಚಿತ ವೇದಿಕೆಯಾಗಿರುವ ಕಾರಣ ಹಣವನ್ನು ಹೆಚ್ಚು ವೆಚ್ಚ ಮಾಡುವ ಅಗತ್ಯವಿರುವುದಿಲ್ಲ.                 

ವಿಶ್ವದಾದ್ಯಂತ ಸಾವಿರಾರು ಜನರು ವಿವಿಧ ರೀತಿಯ ಚಾನಲ್‌ಗಳ ಮೂಲಕ ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಯೂಟ್ಯೂಬ್‌ ತನಗೆ ಬರುವ ಜಾಹೀರಾತು ಆದಾಯದಲ್ಲಿ ಶೇ. 55 ರಷ್ಟು ಹಣವನ್ನು ಯೂಟ್ಯೂಬ್‌ ಚಾನಲ್‌ ನಡೆಸುವವರಿಗೆ ನೀಡುತ್ತದೆ. ವಿಡಿಯೋ ರಚಿಸುವವರು ಹಾಗೂ ಪಾಲುದಾರರಿಗೆ ಯೂಟ್ಯೂಬ್‌ ಸಂಸ್ಥೆ ಕಳೆದ ಮೂರು ವರ್ಷಗಳಿಂದ 70 ಬಿಲಿಯನ್‌ ಡಾಲರ್‌ ಪಾವತಿಸಿದೆ.

ಭಾರತೀಯ ಮೂಲದವರೆ ಯೂಟ್ಯೂಬ್‌ನ ಜಾಗತಿಕ ಸಿಇಒ ಆಗಿರುವ ನೀಲ್‌ ಮೋಹನ್‌ ಅವರು, ಯೂಟ್ಯೂಬ್‌ ಹೊಸ ಪೀಳಿಗೆಯ ರೀಮೇಕ್‌ ಮಾಡಿದ ದೂರದರ್ಶನವಾಗಿದೆ. ನಮ್ಮ ಯೂಟ್ಯೂಬ್‌ ರಚನೆಕಾರರು ಕೂಡ ತಮ್ಮ ಅಭಿಮಾನಿಗಳು ಹಾಗೂ ವೀಕ್ಷಕರಿಗೆ ತಕ್ಕಂತೆ ಕಟೆಂಟ್‌ಅನ್ನು ತಯಾರಿಸುತ್ತಾರೆ ಎಂದು ಹೇಳುತ್ತಾರೆ.

ಶ್ರೀಮಂತ ದೇಶವೆನಿಸಿರುವ ಅಮೆರಿಕದಲ್ಲೂ ಕೂಡ ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬ್‌ ಇತರೆ ಒಟಿಟಿ ಮಾಧ್ಯಮಗಳಿಗೆ ಪೈಪೋಟಿ ನೀಡಿ ಮೇಲುಗೈ ಸಾಧಿಸುತ್ತಿದೆ. ಅಮೆರಿಕಾದಲ್ಲಿ 15 ಕೋಟಿ ಮಂದಿ ಪ್ರತಿ ತಿಂಗಳು ಯೂಟ್ಯೂಬ್‌ ಅನ್ನು ನಿಯಮಿತವಾಗಿ ವೀಕ್ಷಿಸುತ್ತಾರೆ. ಅಲ್ಲಿನ ಶೇ. 48ರಷ್ಟು ವೀಕ್ಷಕರು 34 ವರ್ಷದೊಳಗಿನವರಾಗಿದ್ದಾರೆ. ಸ್ಟ್ರೀಮಿಂಗ್‌ ಸ್ಥಾನದಲ್ಲೂ ಮೊದಲ ಸ್ಥಾನದಲ್ಲಿದೆ. ಇತರ ಮಾಧ್ಯಮಗಳಾದ ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್‌ ಮಾಧ್ಯಮಗಳ ವೀಕ್ಷಕರ ಅಂತರದಲ್ಲಿ ಹೆಚ್ಚಿನ ವ್ಯತ್ಯಾಸವಿದೆ. ಹೊಸ ಪೀಳಿಗೆಯ ವೀಕ್ಷಕರ ಅಭಿರುಚಿಗೆ ತಕ್ಕಂತೆ ಯೂಟ್ಯೂಬ್‌ ಅಮೆರಿಕದಲ್ಲಿ ವಿಭಿನ್ನ ರೀತಿಯ ಕಂಟೆಂಟ್‌ಗಳನ್ನು ರಚಿಸಿ ಯಶಸ್ವಿಯಾಗಿದೆ ಎಂದು ನೀಲ್‌ ಮೋಹನ್‌ ಹೇಳುತ್ತಾರೆ.

ಯೂಟ್ಯೂಬ್‌ ಕಡೆಗೆ ಭಾರತೀಯ ವೀಕ್ಷಕರ ಹೆಚ್ಚಿನ ಒಲವು

ಭಾರತದಲ್ಲೂ ಇತರ ಮಾಧ್ಯಮಗಳಿಗೆ ಹೋಲಿಸಿದರೆ ಯೂಟ್ಯೂಬ್‌ನಲ್ಲಿ ಹೆಚ್ಚು ಚಂದಾದಾರರಿದ್ದಾರೆ. ಸುಮಾರು 47 ಕೋಟಿ ಚಂದಾದಾರರು ನಮ್ಮ ದೇಶದಲ್ಲಿದ್ದಾರೆ. ಯೂಟ್ಯೂಬರ್‌ಗಳ ಜೊತೆ ಇತ್ತೀಚಿನ ದಿನಗಳಲ್ಲಿ ಸಿನಿಮಾ ಒಳಗೊಂಡ ಮನರಂಜನೆ ಮಾಧ್ಯಮ ಕೂಡ ಯೂಟ್ಯೂಬ್‌ ಕಡೆ ಹೆಚ್ಚು ವಾಲುತ್ತಿದೆ. ಯಶಸ್ಸು ಕಾಣದ ತಮ್ಮ ಸಿನಿಮಾಗಳನ್ನು ಒಟಿಟಿಗಳ ಬದಲು ಯೂಟ್ಯೂಬ್​ಗೆ ಹಾಕಿ ಹಣಗಳಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ಈ ಸಂಖ್ಯೆ ಹೆಚ್ಚಾಗುತ್ತಿದೆ. ಯೂಟ್ಯೂಬ್ ನೋಡುತ್ತಾ ಮನರಂಜನೆ ಪಡೆಯುವುದರ ಜೊತೆ ಚಾನಲ್‌ ತೆರೆದು ಹಣಗಳಿಸುವುದು ಈಗ ಸುಲಭವಾಗಿದೆ.

ಅದಕ್ಕಾಗಿ ಯಾವುದೇ ಬಂಡವಾಳ ಬೇಕಾಗಿಲ್ಲ. ಆದರೆ ಚಾನಲ್ ನಿರ್ವಹಣೆ ಹಾಗೂ ಕಂಟೆಂಟ್‌ ವಿಷಯದಲ್ಲಿ ಶಿಸ್ತುಬದ್ಧ ಏಕಾಗ್ರತೆ ಅಗತ್ಯವಾಗಿದೆ. ಯೂಟ್ಯೂಬ್​ನಲ್ಲಿ ಚಂದಾದಾರರನ್ನು ಹೆಚ್ಚಿಸಲು, ನೀವು ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರಬೇಕು. ಯೂಟ್ಯೂಬ್​ನಲ್ಲಿ ಯಾವ ವಿಷಯದ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದೀರೊ, ಅದರಲ್ಲಿ ಕ್ರಿಯಾಶೀಲರಾಗಿರಬೇಕು. ನಿಮ್ಮ ಚಾನಲ್ ಅನ್ನು ಸರಿಯಾಗಿ ರೂಪಿಸಿದರೆ ಮಾತ್ರ ಇದರಿಂದ ಹಣ ಗಳಿಸಬಹುದು.

ಯೂಟ್ಯೂಬ್‌ನಲ್ಲಿ ಹಣ ಗಳಿಕೆಯ (ಮಾನಿಟೈಷನ್‌) ಅರ್ಹವಾಗಬೇಕಾದರೆ ಕನಿಷ್ಠ 500 ಚಂದಾದಾರರನ್ನು ಹೊಂದಿರಬೇಕು. ಒಂದು ವರ್ಷದಲ್ಲಿ ನಿಮ್ಮ ವಿಡಿಯೋಗಳು 3 ಸಾವಿರ ಗಂಟೆ ಅವಧಿಯನ್ನು ವೀಕ್ಷಿಸಿರಬೇಕು ಅಥವಾ ನಿಮ್ಮ ಶಾರ್ಟ್ ವಿಡಿಯೋಗಳು 90 ದಿನಗಳಲ್ಲಿ 30 ಲಕ್ಷ ವೀಕ್ಷಣೆ ಪಡೆದಿರಬೇಕು. ನಿಮ್ಮ ಅಕೌಂಟ್‌ಅನ್ನು ಆಡ್‌ಸೆನ್ಸ್ ಅಕೌಂಟ್‌ಗೆ ಲಿಂಕ್‌ ಮಾಡಿಸಿರಬೇಕು. ಮನರಂಜನೆ, ಕ್ರೀಡೆ, ತಂತ್ರಜ್ಞಾನ ವಿವಿಧ ರೀತಿಯ ಕಟೆಂಟ್‌ಗೆ ವಿವಿಧ ರೀತಿಯ ಗಳಿಕೆಯಿರುತ್ತದೆ.

ಕೃಪೆ: ಡಿಎಚ್

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾರ್ಖಂಡ್ | ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ 12 ಸಾವು

ಜಾರ್ಖಂಡ್‌ನಲ್ಲಿ ಈ ವರ್ಷದ ಅಬಕಾರಿ ಕಾನ್‌ಸ್ಟೆಬಲ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ನೇಮಕಾತಿ ದೈಹಿಕ...

ಉತ್ತರ ಪ್ರದೇಶ| ಆಸ್ಪತ್ರೆಯ ಶುಲ್ಕ ಪಾವತಿಸಲಾಗದೆ ಸ್ವಂತ ಮಗುವನ್ನೇ ಮಾರಾಟ ಮಾಡಿದ ತಂದೆ

ಉತ್ತರ ಪ್ರದೇಶದ ಕುಷಿನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ...

ಸ್ವಂತ ಕುಟುಂಬ ಒಡೆಯುವುದನ್ನು ಸಮಾಜ ಇಷ್ಟಪಡಲ್ಲ, ನನ್ನ ತಪ್ಪಿನ ಅರಿವಾಗಿದೆ: ಅಜಿತ್ ಪವಾರ್

"ಕುಟುಂಬಗಳಲ್ಲಿನ ಬಿರುಕುಗಳನ್ನು ಸಮಾಜವು ಇಷ್ಟಪಡುವುದಿಲ್ಲ. ನನ್ನ ತಪ್ಪಿನ ಅರಿವು ನನಗಾಗಿದೆ" ಎಂದು...

ಲಕ್ನೋ ಕಟ್ಟಡ ಕುಸಿತ | ಮೃತರ ಸಂಖ್ಯೆ 8ಕ್ಕೆ ಏರಿಕೆ, 28 ಮಂದಿಗೆ ಗಾಯ

ಲಕ್ನೋ ಕಟ್ಟಡ ಕುಸಿತ ಪ್ರಕರಣದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಭಾನುವಾರ ಮುಂಜಾನೆ...