ಬಳ್ಳಾರಿ | ಅಕ್ರಮ ಗಣಿಗಾರಿಕೆ, ಜಿಂದಾಲ್‌ಗೆ ಭೂ ಮಂಜೂರು ವಿರೋಧಿಸಿ ಸೆ.4 ರಂದು ಸಮಾವೇಶ

Date:

Advertisements

ಗಣಿ ಭಾದಿತ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪಕ್ಕಾಗಿ ಸೆ.4ರಂದು ಸಂಡೂರು ತಾಲೂಕಿನ ಆದರ್ಶ ಸಮುದಾಯ ಭವನದಲ್ಲಿ ಜನಸಂಗ್ರಾಮ ಪರಿಷತ್‌ ವತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಸಂಗ್ರಾಮ ಪರಿಷತ್‌ ರಾಜ್ಯಾಧ್ಯಕ್ಷ ಟಿ.ಎಂ.ಶಿವುಕುಮಾರ ಹೇಳಿದರು .

ʼಸಂಡೂರು ತಾಲೂಕಿನ ಗಣಿಭಾದಿತ ಜನರ ಬದುಕನ್ನು ಸುಸ್ಥಿರಗೊಳಿಸಲು, ಅಕ್ರಮ ಗಣಿಗಾರಿಕೆ ವಿರೋಧಿಸಿ, ಸಂಡೂರಿನ ಜೈವಿಕ ವೈವಿಧ್ಯತೆ ಅರಣ್ಯ ನಾಶ ಹಾಗೂ ಜಿಂದಾಲ್‌ ಕಂಪನಿಗೆ ಸರ್ಕಾರ ಭೂಮಿ ನೀಡಲು ಅನುಮತಿಸಿದ ವಿರುದ್ದ ಸಮಾವೇಶ ನಡೆಯಲಿದೆʼ ಎಂದು ಮಾಹಿತಿ ನೀಡಿದರು.

ʼಸಂಡೂರು ಭಾಗದ ಜನರು ತಲೆತಲಾಂತರದಿಂದ ಫಲವತ್ತಾದ ಕಂದಾಯ ಜಮೀನುಗಳಲ್ಲಿ ಬೇಸಾಯ ಮಾಡಿಕೊಂಡು ಬಂದಿದ್ದಾರೆ. ಆದರೆ ಅದೇ ಜಮೀನನ್ನು ಬರಡು ಜಮೀನು ಎಂದು ದಾಖಲೆಗಳಲ್ಲಿ ಅಕ್ರಮವಾಗಿ ನಮೂದಿಸಿ ಗಣಿ ಗುತ್ತಿಗೆದಾರರಿಗೆ ಪರ್ಯಾಯ ಅರಣ್ಯ ನೆಡುತೋಪು ಬೆಳೆಸಲು ನೀಡುತ್ತಿದ್ದಾರೆ, ರೈತರಿಗೆ ಹಕ್ಕನ್ನು ನೀಡದೆ ಸರಕಾರ ವಂಚಿಸಿದೆʼ ಎಂದು ದೂರಿದರು.

Advertisements

ʼಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ವಿರುದ್ಧವಾಗಿ ಸ್ಟಾಂಜ್ ಐರನ್ ಉದ್ಯಮಕ್ಕೆ ಅನುಮತಿ ನೀಡಿ ಅರಣ್ಯದಲ್ಲಿನ ವನ್ಯಜೀವಿ, ಗ್ರಾಮಗಳ ಜನರನ್ನು ರೋಗಗ್ರಸ್ತರಾಗುವಂತೆ ಮಾಡಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳದೆ ಸರಕಾರ ನಿರ್ಲಕ್ಷಿಸುತ್ತಿದೆ. ಜಿಂದಾಲ್‌ಗೆ 3‌,667 ಎಕರೆ ಜಮೀನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು ಜನವಿರೋಧಿಯಾಗಿದೆ. ಕಾಂಗ್ರೆಸ್‌ ಪಕ್ಷದವರು ಈ ಹಿಂದಿನ ಬಿಜೆಪಿ ಸರಕಾರ ಜಿಂದಾಲ್‌ ಕಂಪನಿಗೆ ಜಮೀನು ನೀಡಲು ನಿರ್ಧರಿಸಿದ ವೇಳೆ ವಿರೋಧ ವ್ಯಕ್ತಪಡಿಸಿತ್ತು, ಇಂದು ಅವರೇ ಜಿಂದಾಲ್‌ ಜೊತೆ ಪಾಲುದಾರಿಕೆಯಾಗಿ ಅನುಮತಿ ಕೊಟ್ಟಿದ್ದು ಖಂಡನೀಯʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಲಿಂಗಾಯತ ಧರ್ಮಕ್ಕೆ ಎಂ.ಎಂ.ಕಲಬುರ್ಗಿ ಕೊಡುಗೆ ಅಮೋಘ : ಬಸವಲಿಂಗ ಪಟ್ಟದ್ದೇವರು

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಒಗ್ಗೂಡಿ ಹೋರಾಡಬೇಕಿದೆ. ರೈತರು, ಪರಿಸರವಾದಿಗಳು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಲು ಕೋರಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X