ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬಂದರೂ ಕೂಡಾ ಅವಳಿನಗರ ಮಾತ್ರ ಸ್ಮಾರ್ಟ್ ಆಗುತ್ತಿಲ್ಲ. ಸ್ಮಾರ್ಟ್ ಸಿಟಿ ಹಣೆಪಟ್ಟಿ ಹೊತ್ತಿರುವ ಅವಳಿ ನಗರ ತಗ್ಗು-ಗುಂಡಿಗಳ ಆಗರವಾಗುತ್ತಿರುವದು ವಿಪರ್ಯಾಸವಾಗಿದೆ ಎಂದು ಸಮಾಜ ಸೇವಕ ರಾಜು ನಾಯಕವಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, “ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅನುದಾನ ಬಿಡುಗಡೆಗೆ ಕೋರಿ ಪತ್ರ ಬರೆದಿದ್ದಾರೆ. ಈ ಹಣವಾದರೂ ಅಭಿವೃದ್ಧಿಗೆ ಪೂರಕವಾಗಿ ಖರ್ಚುವಾಗುವುದೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ” ಎಂದರು.

“ಜನಸಾಮಾನ್ಯರ ತೆರಿಗೆ ಹಣ ಪೋಲಾಗುವುದನ್ನು ನಾವೆಲ್ಲರೂ ಖಂಡಿಸಬೇಕಿದೆ. ಏಕೆಂದರೆ ಈಗಾಗಲೇ ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಸ್ಮಾರ್ಟ್ ಸಿಟಿ ಸೇರಿದಂತೆ ಇತರ ಯೋಜನೆಗಳಿಂದ ನೂರಾರು ಕೋಟಿ ಹಣ ಬಂದಿದೆ. ಇದನ್ನು ಸ್ವತಃ ಜನಪ್ರತಿನಿಧಿಗಳೇ ಹೇಳಿಕೊಳ್ಳುತ್ತಾರೆ. ಹೀಗಿರುವಾಗ ನಗರ ಮಾತ್ರ ಯಾಕೆ ನಿರೀಕ್ಷೆಯ ಮಟ್ಟದಲ್ಲಿಯಾದರೂ ಅಭಿವೃದ್ಧಿಯಾಗುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಅಕ್ರಮ ಗಣಿಗಾರಿಕೆ, ಜಿಂದಾಲ್‌ಗೆ ಭೂ ಮಂಜೂರು ವಿರೋಧಿಸಿ ಸೆ.4 ರಂದು ಸಮಾವೇಶ
“ಇದೀಗ ಮಹಾಪೌರರು ಅನುದಾನ ಬಿಡುಗಡೆಗೆ ಮನವಿ ಮಾಡಿರುವುದು ಸ್ವಾಗತಾರ್ಹ. ಹೀಗಾಗಿ ಈಗಲಾದರೂ ಮೇಯರ್, ಉಪಮೇಯರ್, ಸರ್ವಸದಸ್ಯರು ಮತ್ತು ಅಧಿಕಾರಿಗಳು ಜನರ ತೆರಿಗೆ ಹಣವನ್ನು ಪೋಲು ಮಾಡದೇ, ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ನಗರವನ್ನು ಅಭಿವೃದ್ಧಿಗೊಳಿಸಬೇಕು” ಎಂದು ಒತ್ತಾಯಿಸಿದರು.
Worst twin city in the world