ಮಂಡ್ಯ | ಸೆ.8ರಂದು ಪೂರ್ಣಚಂದ್ರ ತೇಜಸ್ವಿ-86 ರ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಕಾರ್ಯಕ್ರಮ

Date:

Advertisements

ಚಿತ್ರಕೂಟ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ಪೂರ್ಣಚಂದ್ರ ತೇಜಸ್ವಿ-86’ ರ ಅಂಗವಾಗಿ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ ಕಾರ್ಯಕ್ರಮ’ವನ್ನು ಸೆಪ್ಟೆಂಬರ್ 8ರಂದು ಮಂಡ್ಯದ ಅಂತರಂಗ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.

ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 7.30ರವರೆಗೆ ನಗರದ ವಿ.ವಿ.ರಸ್ತೆಯ ಜನತಾ ಬಜಾ‌ರ್ ಕಾಂಪ್ಲೆಕ್ಸ್‌ನ ಅಂತರಂಗ ಆಡಿಟೋರಿಯಂನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ವಿಜ್ಞಾನ ವಿಸ್ಮಯಗಳಿಂದ ಪರಿಸರ ಫೋಟೋಗ್ರಫಿಯ ತನಕ ಮಾತುಕತೆ’ ಎಂಬ ಹೊಸ ಬಗೆಯ ಸಂವಾದ ಕೂಡ ಆಯೋಜಿಸಲಾಗಿದೆ. ಲೀಲಾ ಅಪ್ಪಾಜಿ ಸಂಗ್ರಹಿಸಿರುವ ತೇಜಸ್ವಿ ಫೋಟೋ ಪ್ರದರ್ಶನದ ಉದ್ಘಾಟನೆಯನ್ನು ರವೀಂದ್ರ ಭಟ್ ನೆರವೇರಿಸಲಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜು, ಎಚ್‌.ಎಸ್.ರೋಹಿಣಿ ಅವರ ಹೊಸ ಕೃತಿ ‘ವಿಸ್ಮಯ ತೇಜಸ್ವಿ’ ಪುಸ್ತಕ ಬಿಡುಗಡೆ ಮಾಡಲಿದ್ದು, ಜಿಲ್ಲಾಧಿಕಾರಿ ಕುಮಾರ್, ಕಸಾಪದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪ್ರಕಾಶ ಮೂರ್ತಿ ಪಾಲ್ಗೊಳ್ಳಲಿದ್ದಾರೆ.

Advertisements
WhatsApp Image 2024 09 07 at 3.05.56 PM

‘ತೇಜಸ್ವಿ ಮತ್ತು ತಂತ್ರಾಂಶ’ ಕನ್ನಡ ಕಟ್ಟುವ ಹೊಸ ಬಗೆಯ ಮೊದಲ ಸಂವಾದದ ವಿಷಯವನ್ನು ಮಧ್ಯಾಹ್ನ 2.30 ರಿಂದ 3.20 ರವರೆಗೆ ಭಾಷಾ ವಿಜ್ಞಾನಿ ಮಿಥುನ್ ಮಂಡಿಸುವರು. ಶಿಕ್ಷಕಿ ಸಿ.ಎಚ್.ಮೇಘನಾ ಮತ್ತು ತಂತ್ರಾಂಶ ತಜ್ಞ ಹೆಗ್ಗೆರೆ ರಾಜ್ ಸಂವಾದ ನಡೆಸಿಕೊಡಲಿದ್ದಾರೆ.

‘ಕೃಷಿ: ಇಂದಿನ ಸಂಘರ್ಷ ನಾಳೆಯ ಭರವಸೆ’ ಎಂಬ ವಿಷಯವನ್ನು ಮಧ್ಯಾಹ್ನ 3.30 ರಿಂದ ಸಂಜೆ 4.20 ರವರೆಗೆ ಸಹಜ ಕೃಷಿಕ ಪ್ರಶಾಂತ್ ಜಯರಾಮ್ ಮಂಡಿಸಲಿದ್ದಾರೆ. ‘ಪರಿಸರದ ಕತೆ ನಾಗೇಶ ಹೆಗಡೆ ಜೊತೆ’ ಜೀವಸಂಕುಲದ ಉಳಿವಿಗೆ ಬೇಕು ವಿವೇಕ ಮಾರ್ಗ ವಿಷಯದಲ್ಲಿ ಸಂಜೆ 4.30 ರಿಂದ 5.30 ರವರೆಗೆ ಸಂವಾದಕರಾಗಿ ಕತ್ತರಘಟ್ಟ ವಾಸು, ಸೋಮವರದ ಹಾಗೂ ರೋಹಿತ್ ಅಗಸರಹಳ್ಳಿ ಭಾಗವಹಿಸುತ್ತಾರೆ.

ಈ ಸುದ್ಧಿ ಓದಿದ್ದೀರಾ? ಗೌರಿ ಲಂಕೇಶ್‌ ಹತ್ಯೆಯಾಗಿ ಏಳು ವರ್ಷ: ಕುಂಟುತ್ತ ಸಾಗಿದೆ ಆರೋಪಿಗಳ ವಿಚಾರಣೆ – ಈ ದಿನ.ಕಾಮ್

ಸಂಜೆ 5.45ರಿಂದ 6.30 ರವರೆಗೆ ‘ತಬರನ ಕಥೆ ಅಂದು-ಇಂದು’ ರವೀಂದ್ರ ಭಟ್ ಒಳನೋಟಗಳು ಹಾಗೂ ಸಂಜೆ 6.30 ರಿಂದ 7 ರವರೆಗೆ ಪೂಚಂತೇ ನಾನು ಕಂಡಂತೆ- ಬಿ.ಚಂದ್ರೇಗೌಡರೊಂದಿಗೆ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಲೇಖಕ ಎಂ.ವಿ.ಕೃಷ್ಣ, ಹರವು ದೇವೇಗೌಡ, ಪತ್ರಕರ್ತ ಭುಜವಳ್ಳಿ ರಾಮಚಂದ್ರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

Download Eedina App Android / iOS

X