ಅವೈಜ್ಞಾನಿಕ ಕಸ ವಿಲೇವಾರಿ; ಪರಿಸರಕ್ಕೆ ಅಪಾಯಕಾರಿ

Date:

Advertisements

ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ತೀರಾ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಪ್ರತಿ ದಿನ ನಾವು ಹೊರಗೆ ಎಸೆಯುವ ಹಲವು ಬಗೆಯ ಅನುಪಯುಕ್ತ ವಸ್ತುವೇ ಕಸ. ನಾವು ವರ್ಷದಿಂದ ವರ್ಷಕ್ಕೆ ಜಿದ್ದಿಗೆ ಬಿದ್ದವರಂತೆ ಹೆಚ್ಚೆಚ್ಚು ಕಸವನ್ನು ಉತ್ಪತ್ತಿ ಮಾಡುತ್ತಲೇ ಇದ್ದೇವೆ. ಹಾಗಾಗಿ ಅದರಿಂದಾಗುವ ದುಷ್ಪರಿಣಾಮಗಳು ಹೆಚ್ಚಾಗುತ್ತಲೇ ಇವೆ. ಕಸ ಎಸೆದ ಕೂಡಲೆ ತಾನಾಗಿಯೇ ಎಂದಿಗೂ ಮಾಯವಾಗುವುದಿಲ್ಲ ಎಂಬ ಸಂಗತಿಯನ್ನು ನಾವೆಂದಿಗೂ ಮರೆಯಬಾರದು.

ಕಸದ ರಾಶಿ
ಕಸದ ರಾಶಿ

ಕೆಲವೊಂದು ವಸ್ತುಗಳು ಕೆಲ ಸಂದರ್ಭಗಳಲ್ಲಿ ಕೊಳೆಯುತ್ತವೆ. ಆದರೆ, ಪ್ಲಾಸ್ಟಿಕ್‌ನಂತಹ ಸಾಮಗ್ರಿಗಳು ಜೈವಿಕವಾಗಿ ಕೊಳೆಯುವುದೇ ಇಲ್ಲ. ಅದು ಪರಿಸರದಲ್ಲಿ ಶಾಶ್ವತವಾಗಿ ಹಾಗೆಯೇ ಉಳಿದು ಬಿಡುತ್ತದೆ. ಆದ್ದರಿಂದ ನಾವು ಇನ್ನಾದರೂ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ಒಂದು ಪ್ಲಾಸ್ಟಿಕ್ ಬ್ಯಾಗ್ ಕೊಳೆಯುವುದಕ್ಕೆ 15-1000 ವರ್ಷಗಳ ಕಾಲ ತೆಗೆದುಕೊಳುತ್ತದೆ. ವೃದ್ಧರು, ಮಕ್ಕಳಿಗೆ ಹಾಕುವಂತಹ ಡೈಪರ್‌, ಮಹಿಳೆಯರು ಬಳಸುವಂತಹ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಕರಗುವುದಕ್ಕೆ 500ರಿಂದ 800 ವರ್ಷಗಳಾಗುತ್ತದೆ. ಜೊತೆಗೆ 500 ವರ್ಷಗಳವರೆಗೆ ಹಾಗೆಯೇ ಇರುತ್ತವೆ.

Advertisements
ಕಸ
ಅವೈಜ್ಞಾನಿಕ ನಿರ್ವಹಣೆ

ಪ್ಲಾಸ್ಟಿಕ್ ಬಾಟಲ್‌ಗಳಂತೂ ಭೂಮಿಯಲ್ಲಿ ಕರಗುವುದೇ ಇಲ್ಲ. ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ನಾವು ಎಲ್ಲೆಂದರಲ್ಲಿ ಎಸೆಯುವಂತಹ ಚಿಕ್ಕ ಕಸವೂ ಕೂಡ ಬ್ಲಾಕ್‌ ಸ್ಪಾಟ್‌ ಆಗುತ್ತದೆ. ಆದ್ದರಿಂದ ಇನ್ನಾದರೂ ಪ್ಲಾಸ್ಟಿಕ್ ಪರಿಣಾಮಗಳ ಕುರಿತು ಎಚ್ಚೆತ್ತುಕೊಳ್ಳಬೇಕಾಗಿದೆ.

ಈ ಸುದ್ದಿ ಓದಿದ್ದೀರಾ? ಗದಗ | ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದ ಮಾಲಿಪಾಟೀಲ್ ಫೌಂಡೇಶನ್

ಹಸು, ನಾಯಿ, ಹಕ್ಕಿ ಸೇರಿದಂತೆ ಬಹುತೇಕ ಪ್ರಾಣಿ-ಪಕ್ಷಿಗಳು ಕಸವನ್ನು ತಿಂದ ಬಳಿಕ, ಆ ವಸ್ತುಗಳು ರಾಸಾಯನಿಕ ಹಾಗೂ ಸಾಮಗ್ರಿಗಳಾಗಿ ಅವುಗಳ ಹೊಟ್ಟೆಯನ್ನು ಸೇರುತ್ತವೆ. ಈ ಪ್ರಾಣಿಗಳು ಸೇವಿಸಿದ ಪ್ಲಾಸ್ಟಿಕ್‌ಗಳು ಜೀರ್ಣವಾಗುವುದೇ ಇಲ್ಲ. ಹಾಗಾಗಿ ಕರುಳಿನಲ್ಲಿ ಹಾಗೆಯೇ ಉಳಿದು ಅವುಗಳ ಮುಂದಿನ ಆಹಾರ ಸೇವನೆಗೆ ತುಂಬಾ ದೊಡ್ಡಮಟ್ಟದಲ್ಲಿ ನರಳಾಟ ಅನುಭವಿಸುತ್ತವೆ.

ಪ್ರತಿಯೊಬ್ಬರು ತಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿ ಇಡುತ್ತೇವೆಯೋ, ಹಾಗೆಯೇ ತಮ್ಮ ತಮ್ಮ ರಸ್ತೆ, ಬೀದಿ, ನಗರ ಮತ್ತು ಇಡೀ ಭೂ-ಮಂಡಲವನ್ನು ಸ್ವಚ್ಛವಾಗಿಡಲು ಶ್ರಮಿಸೋಣ.

- ಡಿ. ಬಾಲಾಜಿ, ಹಟ್ಟಿ ಚಿನ್ನದ ಗಣಿ
ತ್ಯಾಜ್ಯ ಪೂರೈಕೆ ಸರಪಳಿ ನಿರ್ವಹಣೆ ರಾಯಚೂರು 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X