ಶಾಲಾ ಮಕ್ಕಳ ಪೌಷ್ಟಿಕಾಂಶ ಗುಣಮಟ್ಟ ಪರಿಷ್ಕರಣೆ; ಮೊಟ್ಟೆ ಕಡ್ಡಾಯವಿಲ್ಲ

Date:

Advertisements
  • ಆಂತರಿಕ ಸಚಿವಾಲಯ ಸಮಿತಿಯ ಶಿಫಾರಸುಗಳ ಮೇರೆಗೆ ಪೌಷ್ಟಿಕಾಂಶ ಗುಣಮಟ್ಟ ಪರಿಷ್ಕರಣೆ
  • ಆಹಾರದಲ್ಲಿ ಕ್ಯಾಲರಿಗಳು ಮತ್ತು ಪ್ರೋಟೀನ್‌ಗಳ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಶಿಫಾರಸು

ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ನೀಡುವ ಆಹಾರ ಪೌಷ್ಟಿಕಾಂಶ ಗುಣಮಟ್ಟವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ ಎಂದು ಮಾಧ್ಯಮಗಳು ಸೋಮವಾರ (ಮೇ 1) ವರದಿ ಮಾಡಿವೆ.

ಸರ್ಕಾರದ ಆಹಾರ ಸುರಕ್ಷತಾ ಕಾರ್ಯಕ್ರಮದ ಭಾಗವಾಗಿ ಮೊಟ್ಟೆಗಳನ್ನು ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಕರಡು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ, ಸದ್ಯ ಈ ಪ್ರಸ್ತಾವನೆಯನ್ನು ಕೇಂದ್ರ ಕೈಬಿಟ್ಟಿದೆ.

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಸೇರಿ ಶಾಲಾ ಪೂರ್ವ ಮಕ್ಕಳು ಮತ್ತು ಅಂಗನವಾಡಿಗಳಲ್ಲಿ ಸಂಯೋಜಿತ ಮಕ್ಕಳ ಅಭಿವೃದ್ಧಿ ಸೇವೆಗಳು (ಐಸಿಡಿಎಸ್‌) ಯೋಜನೆ ಹಾಗೂ ಶಾಲೆಗಳಲ್ಲಿ ಪಿಎಂ ಪೋಷಣೆ ಹಸರಿನಲ್ಲಿ ಆಹಾರ ಸುರಕ್ಷತಾ ಕಾರ್ಯಕ್ರಮಗಳಡಿ ವಿತರಿಸುವ ಮಧ್ಯಾಹ್ನದ ಬಿಸಿಯೂಟಗಳ ಪಟ್ಟಿಯಲ್ಲಿ ಮೊಟ್ಟೆಗಳು ಹಾಗೂ ಇತರ ಪದಾರ್ಥಗಳನ್ನು ಸೇರಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisements

“ರಾಜ್ಯಗಳು ಆಹಾರದಲ್ಲಿ ಮೊಟ್ಟೆಗಳನ್ನು ವಿತರಿಸಲು ಹಿಂಜರಿದರೆ ನೂತನ ಪೌಷ್ಟಿಕಾಂಶ ಗುಣಮಟ್ಟ ತಲುಪಲು ಆಹಾರ ಪಟ್ಟಿಯನ್ನು ಪರಿಷ್ಕರಿಸಿ ಅದರಲ್ಲಿ ಬೇಳೆಕಾಳುಗಳು ಮತ್ತು ಹಸಿರು ತರಕಾರಿಗಳನ್ನು ಸೇರಿಸಬಹುದು. ಈಗ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊಟ್ಟೆಗಳು ಮಧ್ಯಾಹ್ನ ಬಿಸಿಯೂಟದ ಭಾಗವಾಗಿವೆ” ಎಂದು ಸರ್ಕಾರದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯುಪಿಎ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಜಾರಿಗೊಂಡ ಒಂದು ದಶಕದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆಹಾರದಲ್ಲಿ ಪೌಷ್ಟಿಕಾಂಶ ಕ್ಯಾಲರಿಗಳು ಮತ್ತು ಪ್ರೋಟೀನ್‌ಗಳ ಪ್ರಮಾಣ ಹೆಚ್ಚಿಸುವುದು ಮತ್ತು ಸೂಕ್ಷ್ಮ ಪೋಷಕಾಂಶಗಳ ಸೇರಿಸುವಿಕೆ ಕಡ್ಡಾಯಗೊಳಿಸುವುದನ್ನು ಈ ಪರಿಷ್ಕರಣೆ ಒಳಗೊಂಡಿದೆ.

ಆಂತರಿಕ ಸಚಿವಾಲಯ ಸಮಿತಿಯ ಶಿಫಾರಸುಗಳ ಮೇರೆಗೆ ಕೇಂದ್ರ ಈ ಎನ್‌ಎಫ್‌ಎಸ್‌ಎಗೆ ಪರಿಷ್ಕರಣೆಯ ತಿದ್ದುಪಡಿ ಮಾಡಿದೆ.

ಅಪೌಷ್ಟಿಕತೆಯ ಬಿಕ್ಕಟ್ಟನ್ನು ಮತ್ತಷ್ಟು ಹದಗೆಡಿಸುವುದರಲ್ಲಿ ಕೋವಿಡ್‌ ಪಿಡುಗಿನ ಸಂಭವನೀಯ ಪರಿಣಾಮ ಉಲ್ಲೇಖಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಂತರಿಕ ಸಚಿವಾಲಯದ ತಂಡ ಕರಡು ವರದಿಯಲ್ಲಿ ಶಿಫಾರಸು ಮಾಡಿತ್ತು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಜನವರಿ 25ರಂದು ತಿದ್ದುಪಡಿ ಮಾಡಲಾಗಿದೆ. ಆಹಾರಗಳ ಪೌಷ್ಟಿಕಾಂಶ ಗುಣಮಟ್ಟವನ್ನು ಒಂಬತ್ತು ಗುಂಪುಗಳಾಗಿ ವಿಭಾಗಿಸಲಾಗಿದೆ. ಆರು ತಿಂಗಳ ಶಿಶುವಿನಿಂದ ಒಂದು ವರ್ಷದ ಮಗು ಹಾಗೂ ಪ್ರೌಢಶಾಲೆಯ ಮಕ್ಕಳವರೆಗೆ ವರ್ಗೀಕರಿಸಲಾಗಿದೆ.

ಆರು ತಿಂಗಳಿಂದ ಆರು ವರ್ಷದ ಅಪೌಷ್ಟಿಕ ಮಕ್ಕಳಿಗಾಗಿ ಹೊಸ ಮೂರು ವಿಭಾಗಗಳನ್ನು ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಗೆಹ್ಲೋಟ್‌ ರಾವಣ ಹೋಲಿಕೆ; ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ವಿರುದ್ಧ ಪ್ರಕರಣ

ಅಸ್ತಿತ್ವದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ವಿಭಾಗಗಳಿಗೆ ಪೌಷ್ಟಿಕಾಂಶ ಗುಣಮಟ್ಟವನ್ನು ಪರಿಷ್ಕರಿಸಲಾಗಿದೆ.

ಅದರಂತೆ ಹಿಂದಿನ ಮಾನದಂಡಗಳ ಅಡಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಲ್ಲಿನ ಪ್ರತಿ ಮಗುವೂ ಮಧ್ಯಾಹ್ನ ಬಿಸಿಯೂಟದೊಡನೆ 450 ಕಿಲೋ ಕ್ಯಾಲರಿ ಮತ್ತು 12 ಗ್ರಾಂ ಪ್ರೊಟೀನ್‌ ಪಡೆಯಲು ಅರ್ಹವಾಗಿರುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X