ಚಿಕ್ಕಬಳ್ಳಾಪುರ | ಸಂಸದ ಸುಧಾಕರ್‌ ಅಪ್ರಭುದ್ಧ ರಾಜಕಾರಣಿ: ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಕಿಡಿ

Date:

Advertisements

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯ ದಿನ ಸಂಸದರು ನಡೆದುಕೊಂಡ ರೀತಿ, ಶಾಸಕರ ಬಗ್ಗೆ ಮಾಧ್ಯಮದವರ ಮುಂದೆ ನೀಡಿದ ಹೇಳಿಕೆ ಸಂಸದರ ಅಪ್ರಭುದ್ಧತೆಯನ್ನು ತೋರುತ್ತದೆ. ರಾಷ್ಟೀಯ ಪಕ್ಷದ ಅಧ್ಯಕ್ಷನಾದ ನನ್ನನ್ನು ಏಯ್ ಯಾಕಿಲ್ಲಿದ್ದೀಯಾ? ಎಂದು ಮಾತಾಡಿದ್ದು, ಅವರ ಅಪ್ರಭುದ್ಧ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಕಿಡಿಕಾರಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣಾಧಿಕಾರಿ ಅನುಮತಿ ಪಡೆದೇ 1 ಗಂಟೆವರೆಗೂ ನಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಲು ನಿಂತಿದ್ದು ತಪ್ಪೇ?. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂಬುದು ಗೊತ್ತಿದ್ದರೂ ದರ್ಪ, ದೌರ್ಜನ್ಯ ಸಹಿತ ದುರ್ವರ್ತನೆ ತೋರಿದ್ದು ಸಂಸದನ ಸ್ಥಾನಕ್ಕೆ ತಕ್ಕುದ್ದಲ್ಲ ಅಸಮಾಧಾನಗೊಂಡರು.

ನಮ್ಮ ಪಕ್ಷದ ಮುಖಂಡರು ಹಾಗೂ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅಸಂಸದೀಯ ಪದಬಳಕೆ ಮಾಡುವುದಾಗಲಿ, ವೈಯಕ್ತಿಕ ವಿಚಾರಗಳನ್ನು ಕೆದಕಿ ಅವಹೇಳನ ಮಾಡುವುದಾಗಲಿ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಆಕ್ರೋಶಗೊಂಡರು.

Advertisements

ನೀವು ಸಚಿವರಾಗಿದ್ದಾಗ ವೈ.ಎ.ನಾರಾಯಣಸ್ವಾಮಿ ಇಲ್ಲಿ ಬಂದು ಮತ ಹಾಕಿದ್ದು ಸರಿ. ನಮ್ಮ ಪಕ್ಷದ ಎಂಎಲ್‌ಸಿಗಳು ಮತ ಹಾಕಿದರೆ ತಪ್ಪೇ?. ಶಾಸಕರು ರಾಜಕಾರಣಕ್ಕೆ ಹೊಸಬರು ಇರಬಹುದು. ಹಾಗಂತ ಅವಹೇಳನ ತರವಲ್ಲ. 2023 ರಿಂದೀಚೆಗೆ ಕ್ಷೇತ್ರದಲ್ಲಿ ವಿನಾಕಾರಣ ಯಾವುದಾದರೂ ಕೇಸು ಹಾಕಿದ್ದರೆ ಹೇಳಿ. ನಿಮ್ಮ ಅವಧಿಯಲ್ಲಿ ಪ್ರಶ್ನಿಸಿದವರ ಮೇಲೆ ರೌಡಿಶೀಟರ್ ಮಾಡುವುದು, ಅಟ್ರಾಸಿಟಿ ಕೇಸು ಹಾಕಿಸಿದ್ದು, ಎಲ್ಲವೂ ಗೊತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಬನ್ನಿ, ಅದನ್ನು ಬಿಟ್ಟು ಹೀನಾಯವಾಗಿ ಮಾತನಾಡುವುದು, ವೈಯಕ್ತಿಕ ನಿಂದನೆ ಸಹಿಸೊಲ್ಲ. ಸುಖಾಸುಮ್ಮನೆ ರೊಚ್ಚಿಗೆಬ್ಬಿಸಿದರೆ ಸುಮ್ಮನಿರಲ್ಲ ಎಂದು ಸಿಟ್ಟಾದರು.

ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ನಮ್ಮ ಶಾಸಕ ಪ್ರದೀಪ್ ಈಶ್ವರ್ ಅವರು ಹಣ ಕೊಟ್ಟು, ಹೆದರಿಸಿ ಬೆದರಿಸಿ ಅಕ್ರಮದಲ್ಲಿ ಚುನಾವಣೆ ನಡೆಸುವುದು ಬೇಡ ಎಂದಿದ್ದರು. ನಮ್ಮ ಸೋಲಿಗೂ ಶಾಸಕರಿಗೂ ಸಂಬಂಧವಿಲ್ಲ. ನಮ್ಮ ಸ್ನೇಹಿತರೇ ನಮ್ಮ ಬೆನ್ನಿಗೆ ಚೂರಿ ಹಾಕಿದ ಕಾರಣ ಸೋಲನ್ನು ಅನುಭವಿಸಬೇಕಾಯಿತು. ನಾವು ಎಲ್ಲಿಯೂ ತಲೆಮರೆಸಿಕೊಂಡಿಲ್ಲ ಎಂದು ಕುಟುಕಿದರು.

ಪ್ರದೀಪ್‌ ಈಶ್ವರ್ ಕುತಂತ್ರ ರಾಜಕಾರಣಿ ಅಲ್ಲ

ಶಾಸಕ ಪ್ರದೀಪ್‌ ಈಶ್ವರ್‌ ಕುತಂತ್ರ ರಾಜಕಾರಣಿ ಅಲ್ಲ. ಆದರೆ, ಸಂಸದ ಸುಧಾಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾಧ್ಯಮಗಳಿಗೆ ಸುಳ್ಳು ಸುದ್ದಿ ಹಬ್ಬಿಸಿ ನಮ್ಮ ಕಾಂಗ್ರೆಸ್ ಸದಸ್ಯರಿಗೆ ಅನಗತ್ಯ ಒತ್ತಡ ಹಾಕಿ, ಆಮಿಷಗಳನ್ನು ಒಡ್ಡಿ ಮತ ಹಾಕಿಸಿಕೊಂಡಿದ್ದಾರೆ. ಚುನಾವಣೆಗೂ ಮುನ್ನ ಪ್ರವಾಸದ ನೆಪದಲ್ಲಿ ಕೌನ್ಸಿಲರ್‌ಗಳನ್ನು ರೆಸಾರ್ಟ್ಗಳಲ್ಲಿ ಇಟ್ಟುಕೊಂಡು ಅವರಿದ್ದ ರೂಮುಗಳ ಮುಂದೆ ಬೌನ್ಸರ್‌ಗಳನ್ನು ಕಾವಲಿಟ್ಟು ಹೆದರಿಸಿ ಬೆದರಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಗುಡುಗಿದರು.

ಯಾರೂ ಮನಸಾಕ್ಷಿಯಂತೆ ಮತ ಹಾಕಿಲ್ಲ

ಸುಧಾಕರ್ ಅಧ್ಯಕ್ಷ ಸ್ಥಾನಕ್ಕೆ ಒಬ್ಬರನ್ನು ತೋರಿಸಿ, ಕೊನೆ ಗಳಿಗೆಯಲ್ಲಿ ಸ್ವಜಾತಿ ಪ್ರೇಮದಿಂದ ಅವರು ಗಜೇಂದ್ರ ಅಧ್ಯಕ್ಷರಾಗುವಂತೆ ಮಾಡಿದ್ದಾರೆ. ಯಾರೂ ಕೂಡ ಮನಸಾಕ್ಷಿಯಂತೆ ಮತ ಹಾಕಿಲ್ಲ. ಸಾಮಾಜಿಕ ನ್ಯಾಯವನ್ನು ಇವರು ಮಾಡಿಲ್ಲ. ನಮ್ಮ ಶಾಸಕರು ನಿಮ್ಮ ನಾಯಕರು ಮಾಡುವ ಹಾಗೆ ಕುತಂತ್ರ ರಾಜಕಾರಣ ಕಲಿತಿದ್ದರೆ, ನೀವ್ಯಾರೂ ಕೂಡ ನಗರದಲ್ಲಿ ಉಳಿಯಲು ಆಗುತ್ತಿರಲಿಲ್ಲ ಎಂದು ಆಕ್ರೋಶದಿಂದ ನುಡಿದರು.

ಮುಖಂಡ ಮಿಲ್ಟನ್ ವೆಂಕಟೇಶ್ ಮಾತನಾಡಿ, ಗಜೇಂದ್ರ ಅವರೇ ನಮ್ಮ ಶಾಸಕರ ಬಳಿ ಜೆಡಿಎಸ್ ಸದಸ್ಯೆ ವೀಣಾರಾಮು ಅವರನ್ನು ಕರದುಕೊಂಡು ಹೋಗಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರೆ ನಿಮಗೆ ಬೆಂಬಲ ನೀಡುವೆ ಎಂದು ಕೇಳಿದ್ದು ಸುಳ್ಳಾ?. ನಮ್ಮ ಅಧ್ಯಕ್ಷರಿಗೆ ಎಚ್ಚರಿಕೆ ನೀಡುವ ದಾಟಿಯಲ್ಲಿ ಮಾತನಾಡಿದ್ದು ಸಂಸದರೇ ವಿನಃ ನಮ್ಮ ನಾಯಕರಲ್ಲ. ನಿಮ್ಮಂತೆ ನಮಗೂ ನಮ್ಮ ನಾಯಕರ ಮೇಲೆ ಅಭಿಮಾನ ಇರುತ್ತದೆ. ಇಂತಹ ಗೊಡ್ಡು ಬೆದರಿಕೆ ಬಿಟ್ಟು ಅಭಿವೃದ್ಧಿಗೆ ಗಮನ ನೀಡಿ ಎಂದರು.

‌ನಗರಸಭೆ ಹಿರಿಯ ಸದಸ್ಯ ರಫೀಕ್ ಮಾತನಾಡಿ, ಡಾ.ಕೆ.ಸುಧಾಕರ್ ನೀವು 2013ರಲ್ಲಿ ಹೇಗಿದ್ದಿರಿ ಎಂಬುದನ್ನು ಒಮ್ಮೆ ನೆನಪಿಗೆ ತಂದುಕೊಳ್ಳಿ. ಕಾಂಗ್ರೆಸ್ ಪಕ್ಷದಿಂದ ಗೆದ್ದವರು ಅದನ್ನು ಮರೆಯಬೇಡಿ?. ನಮ್ಮ ಶಾಸಕರು ರಾಜಕಾರಣಕ್ಕೆ ಹೊಸಬರು, 2013ರಲ್ಲಿ ನಿಮ್ಮನ್ನು ಆಗ ತಿದ್ದಿ ತೀಡಿದಂತೆ ಇವರನ್ನೂ ಕೂಡ ತಯಾರು ಮಾಡುತ್ತೇವೆ. ಹಿರಿಯ ಜನಪ್ರತಿನಿಧಿ ಕಿರಿಯರಿಗೆ ಹೇಗೆ ಗೌರವ ನೀಡಿ ನಡೆಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ನಡೆದರೆ ನಿಮಗೂ ಕ್ಷೇಮ ನಮಗೂ ಕ್ಷೇಮ ಎಂದರು.

ನೀವು ಸಂಸದರಾಗಿ ಕೇಂದ್ರದಿಂದ ಏನೇನು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೋ ಅದನ್ನು ಮಾಡಿ. ಗೊತ್ತಿಲ್ಲದಿದ್ದರೆ ಏನೇನು ತರಬಹುದು ನಮ್ಮನ್ನು ಕೇಳಿ ಹೇಳಿಕೊಡುತ್ತೇವೆ. ಇದನ್ನು ಬಿಟ್ಟು ನಮ್ಮ  ಶಾಸಕರ ಬಗ್ಗೆ ಹಗುರವಾಗಿ ಮಾಡುವುದು ತರವಲ್ಲ. ನಿಮ್ಮ ಜತೆಗೆ ಗುರುತಿಸಿಕೊಂಡಿರುವ ಎಲ್ಲಾ ನಗರಸಭೆ ಸದಸ್ಯರು ಮಾಜಿ ಅಧ್ಯಕ್ಷರು ನಗರಸಭೆ ಆಸ್ತಿಯನ್ನು ನುಂಗಿದವರೇ ಆಗಿದ್ದಾರೆ. ಇದರ ವಿರುದ್ದ ನಾವು ಹೋರಾಟ ಮುಂದುವರೆಸುತ್ತೇವೆ. ನಿಮ್ಮ ಕೆಲಸ ನೀವು ಮಾಡಿ ಶಾಸಕರ ಕೆಲಸ ಶಾಸಕರು ಮಾಡುತ್ತಾರೆ ಎಂದು ಕಿವಿಮಾತು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಎಂದೂ ಕೂಡ ಕೋಮುಗಲಭೆ ಆಗಿಲ್ಲ. ಹಿಂದೂ ಮುಸ್ಲಿಂ ಎಲ್ಲರೂ ಕೂಡ ಭಾವೈಕ್ಯತೆಯಿಂದ ನಡೆದುಕೊಂಡು ಹೋಗಿದ್ದಾರೆ. ಸಂಸದರಾದ ಮೇಲೆ ಮುಸ್ಲಿಂ ಆಚರಣೆಗಳ ಮೇಲೆ ದಾಳಿಮಾಡಲು ಶುರುಮಾಡಿದ್ದಾರೆ ಎಂದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಸಂಸದ ಸುಧಾಕರ್‌ಗೆ ಬಹಿರಂಗ ಚರ್ಚೆಗೆ ಆಹ್ವಾನವಿತ್ತ ಕಾಂಗ್ರೆಸ್‌ ಮುಖಂಡರು

ವೇದಿಕೆಯಲ್ಲಿ ನಂದಿ ಆಂಜಿನಪ್ಪ, ಕೆ.ಎಂ.ಮುನೇಗೌಡ, ನಗರಸಭೆ ಸದಸ್ಯ ಅಂಬರೀಶ್, ಅಡ್ಡಗಲ್ ಶ್ರೀಧರ್, ಮಾಜಿ ಶಾಸಕಿ ಅನುಸೂಯಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಪ್ರೆಸ್ ಸೂರಿ ಮತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X