- ದುಬೈಗೆ ಸಂಪರ್ಕ ಕಲ್ಪಿಸುವ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಹೆದ್ದಾರಿ
- ಗಂಟೆಗೆ 120 ಕಿಲೋಮೀಟರ್ ಕನಿಷ್ಠ ವೇಗ, 140 ಕಿಲೋಮೀಟರ್ ಗರಿಷ್ಠ ವೇಗ
ಅತಿ ವೇಗವಾಗಿ ವಾಹನ ಚಲಾಯಿಸಿದರೆ ದಂಡ ವಿಧಿಸುವ ನಿಯಮ ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಜಾರಿಯಲ್ಲಿದೆ. ಆದರೆ ಅತಿ ವೇಗವಾಗಿ ವಾಹನ ಚಲಾಯಿಸಿದಿದ್ದರೆ ದಂಡ ವಿಧಿಸುವ ನಿಯಮ ಯುಎಇ ರಾಜಧಾನಿ ಅಬುಧಾಬಿಯಲ್ಲಿ ಮೇ 1ರಿಂದ ಜಾರಿಗೆ ಬಂದಿದೆ.
ಅಬುಧಾಬಿಯಿಂದ ವಿಶ್ವವಿಖ್ಯಾತ ನಗರ ದುಬೈಗೆ ಸಂಪರ್ಕ ಕಲ್ಪಿಸುವ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ನಿಯಮ ಅನ್ವಯವಾಗಲಿದೆ.
4 ಪಥದ 62 ಕಿಲೋಮೀಟರ್ ಉದ್ದದ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಹೆದ್ದಾರಿಯಲ್ಲಿ ವಾಹನಗಳ ಗರಿಷ್ಠ ವೇಗ ಗಂಟೆಗೆ 140 ಕಿಲೋಮೀಟರ್ ಮತ್ತು ಕನಿಷ್ಠ ವೇಗ ಗಂಟೆಗೆ 80 ಕಿಲೋಮೀಟರ್ ನಿಗದಿಪಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?: ಯೆಮನ್ | ಭೀಕರ ಕಾಲ್ತುಳಿತ: 85 ಮಂದಿ ಸಾವು, 322 ಜನರಿಗೆ ಗಾಯ
ಆದರೆ ಈ ಹೆದ್ದಾರಿಯ ಎಡದಿಂದ ಮೊದಲ ಮತ್ತು ಎರಡನೇ ಪಥಗಳಲ್ಲಿ ಸಂಚರಿಸುವ ವಾಹನಗಳು ಮೇ 1ರಿಂದ ಕನಿಷ್ಠ 120 ಕಿಲೋಮೀಟರ್ ವೇಗದಲ್ಲಿ ಸಂಚರಿಸಬೇಕಿದೆ.
ಈ ನಿಯಮವನ್ನು ಉಲ್ಲಂಘಿಸುವ ವಾಹನ ಚಾಲಕರು 8 ಸಾವಿರ (400 ದಿರ್ಹಂ) ದಂಡ ತೆರಬೇಕಾಗುತ್ತದೆ ಎಂದು ಅಬುಧಾಬಿ ಪೊಲೀಸ್‌ನ ಕೇಂದ್ರ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಜನರಲ್ ಅಹ್ಮದ್ ಸೈಫ್ ಅಲ್ ತಿಳಿಸಿದ್ದಾರೆ.
ಭಾರೀ ಗಾತ್ರದ ವಾಹನಗಳಿಗೆ ಮೂರನೇ ಮತ್ತು ಕೊನೆಯ ಪಥದಲ್ಲಿ ಕನಿಷ್ಠ ವೇಗದ ನಿಯಮವು ಅನ್ವಯವಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.