ಹಿಂದೂ ಕುಟುಂಬದಲ್ಲಿ ಜನಿಸಿದ ಕಾರಣ ನನ್ನನ್ನು ಬಂಧಿಸಿಲ್ಲ: ಸ್ವರಾ ಭಾಸ್ಕರ್ ವಿಡಿಯೋ ವೈರಲ್

Date:

Advertisements

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ “ನಾನು ಹಿಂದೂ ಎಂದು ನನ್ನನ್ನು ಬಂಧಿಸಿಲ್ಲ” ಎಂದು ಹೇಳಿದ್ದು, ಜೊತೆಗೆ ನ್ಯಾಯಾಧೀಶರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2020ರಲ್ಲಿ ದೆಹಲಿ ಗಲಭೆಯ ನಂತರ ವಿವಾದಾತ್ಮಕ ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967 ಅಡಿಯಲ್ಲಿ ದಾಖಲಿಸಲಾದ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರ ಕಾರ್ಯಕರ್ತರ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣದ ವಿಳಂಬಕ್ಕಾಗಿ ನ್ಯಾಯಾಂಗದ ವಿರುದ್ಧ ವಾಗ್ದಾಳಿ ನಡೆಸಿದರು.

ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮುಸ್ಲಿಮರು ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಆದರೆ ನಾನು ಹಿಂದೂ ಕುಟುಂಬದಲ್ಲಿ ಜನಿಸಿದ ಕಾರಣ ನನ್ನನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ.

Advertisements

“ನಾನೂ ಕೂಡ ಚಳವಳಿಯ ಸಂದರ್ಭದಲ್ಲಿ ದನಿ ಎತ್ತಿದ್ದೆ ಮತ್ತು ಪ್ರತಿಭಟನಾಕಾರರಲ್ಲಿ ಒಬ್ಬಳಾಗಿದ್ದೆ. ಆದರೆ ನಾನು ಜೈಲಿಗೆ ಹೋಗಲಿಲ್ಲವೇಕೆ? ಏಕೆಂದರೆ ಕಾಕತಾಳೀಯವಾಗಿ, ನಾನು ಹಿಂದೂ ಕುಟುಂಬದಲ್ಲಿ ಜನಿಸಿದೆ. ಅದರಲ್ಲೂ ಸವರ್ಣೀಯರ ಕುಟುಂಬದಲ್ಲಿ ಜನಿಸಿದೆ. ನನ್ನನ್ನು ಕಂಬಿಗಳ ಹಿಂದೆ ಹಾಕುವುದು ಸೂಕ್ತವೆಂದು ಅವರಿಗೆ ಅನಿಸಿಲ್ಲ” ಎಂದು ಸ್ವರಾ ಭಾಸ್ಕರ್ ಹೇಳಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಇದನ್ನು ಓದಿದ್ದೀರಾ? ಕಾಂಗ್ರೆಸ್ ಇರದಿದ್ದರೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ: ಬಿಜೆಪಿಗೆ ಶಿವಸೇನೆ ನಾಯಕ ಸಂಜಯ್ ರಾವುತ್ ತಿರುಗೇಟು

“ನೀವು ಮುಸಲ್ಮಾನನನ್ನು ಭಯೋತ್ಪಾದಕ ಎಂದು ಹೇಳಬಹುದು. ಆದರೆ ಹಿಂದೂ, ಮಾಜಿ ನೌಕಾಪಡೆಯ ಅಧಿಕಾರಿಯ ಮಗಳನ್ನು ಭಯೋತ್ಪಾದಕಿ ಎಂದು ಹೇಳುವುದು ಸ್ವಲ್ಪ ಜಾಸ್ತಿ ಎನಿಸಿಬಹುದು” ಎಂದು ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಜೈಲು ಸೇರಿರುವ ಕಾರ್ಯಕರ್ತರ ಜಾಮೀನು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಅಮಿತ್ ಶರ್ಮಾ ವಿರುದ್ಧವೂ ಸ್ವರಾ ವಾಗ್ದಾಳಿ ನಡೆಸಿದ್ದಾರೆ. “ನೀವು ವಿಚಾರಣೆ ನಡೆಸಲು ಏಕೆ ಸಾಧ್ಯವಿಲ್ಲ? ನೀವು ಶಿಕ್ಷಣ ಪಡೆದವರಲ್ಲವೇ? ನಾವು ಪಾವತಿ ಮಾಡುವ ತೆರಿಗೆಯಿಂದ ನೀವು ವೇತನ ಪಡೆಯುತ್ತೀರಿ. ಹಾಗಾದರೆ ನಿಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹೇಗೆ ನಿಮಗೆ ಹಕ್ಕಿದೆ? ಹೀಗೆ ಮಾಡುವುರಿಂದ ನೀವು ದೇಶದ ಜನರಿಗೆ ದ್ರೋಹ ಮಾಡುತ್ತಿಲ್ಲವೇ” ಎಂದು ಪ್ರಶ್ನಿಸಿದರು.

ಸ್ವರಾ ಭಾಸ್ಕರ್ ಭಾಷಣಕ್ಕೆ ಜನಸಮೂಹದಿಂದ ಚಪ್ಪಾಳೆ ಸುರಿಮಳೆ ಕೇಳಿಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋಗೆ ಮಿಶ್ರಾ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ 2019ರ ಅಂತ್ಯದಲ್ಲಿ ಮತ್ತು 2020ರ ಆರಂಭದಲ್ಲಿ ದೆಹಲಿಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ತೀವ್ರ ಘರ್ಷಣೆಯಲ್ಲಿ 53 ಜನರು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಖಾಲಿದ್, ಇಮಾಮ್ ಮತ್ತು ಇತರರು ಸೇರಿದಂತೆ ಹಲವಾರು ಜನರನ್ನು ಗಲಭೆಯ ‘ಮಾಸ್ಟರ್‌ಮೈಂಡ್‌ಗಳು’ ಎಂದು ಆರೋಪಿಸಲಾಗಿದೆ. ದೇಶದ್ರೋಹದ ಜೊತೆಗೆ ವಿವಾದಾತ್ಮಕ ಯುಎಪಿಎ ಕಾಯ್ದೆಯ ಆರೋಪಗಳನ್ನು ಹೊರಿಸಲಾಗಿದೆ.

ಇಮಾಮ್ ಅವರನ್ನು ಜನವರಿ 2020ರಲ್ಲಿ ಬಂಧಿಸಲಾಗಿದೆ. ಆದರೆ 2024ರ ಮೇ ತಿಂಗಳಲ್ಲಿ ದೇಶದ್ರೋಹ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿದೆ. ಮತ್ತೊಂದೆಡೆ, ಖಾಲಿದ್ ಅವರನ್ನು 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿದೆ. ಇನ್ನೂ ಕೂಡಾ ಜಾಮೀನು ಅರ್ಜಿಯ ವಿಚಾರಣೆ ನಡೆದಿಲ್ಲ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X