- ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಬಿಡುಗಡೆ
- ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆಯಿಂದ ಪ್ರಕಟ
‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆ ಪ್ರಕಟಿಸಿರುವ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಆಘಾತಕಾರಿ ಅಂಕಿ- ಅಂಶವನ್ನು ಬಹಿರಂಗಪಡಿಸಿದೆ. ಈ ಸೂಚ್ಯಂಕದಲ್ಲಿ ಭಾರತ 161ನೇ ಸ್ಥಾನಕ್ಕೆ ಕುಸಿದಿದೆ.
ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಪಟ್ಟಿಯಲ್ಲಿ ಕಳೆದ ಬಾರಿಗಿಂತ 11 ಸ್ಥಾನಗಳ ಕುಸಿತ ಕಂಡಿರುವ ಭಾರತ, ನೆರೆಯ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಕೆಳಗಿನ ಶ್ರೇಯಾಂಕ ಪಡೆದಿದೆ.
180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಕಳೆದ ಬಾರಿ 150ನೇ ಮತ್ತು ಅದಕ್ಕೂ ಮೊದಲಿನ ಪಟ್ಟಿಯಲ್ಲಿ 142ನೇ ಸ್ಥಾನದಲ್ಲಿತ್ತು. ಆ ಮೂಲಕ ದೇಶದಲ್ಲಿ ಪತ್ರಕರ್ತರು ಅತಿ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.
ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ (95), ಪಾಕಿಸ್ತಾನ (150), ಅಫ್ಘಾನಿಸ್ತಾನ (152), ಶ್ರೀಲಂಕಾ 135ನೇ ಶ್ರೇಯಾಂಕ ಹೊಂದಿದೆ. ಬಾಂಗ್ಲಾದೇಶ 163ನೇ ಮತ್ತು ಚೀನಾ 179ನೇ ಸ್ಥಾನದಲ್ಲಿದೆ ಎಂದು ಸಂಸ್ಥೆಯು ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ ನಾರ್ವೆ, ಐರ್ಲೆಂಡ್ ಮತ್ತು ಡೆನ್ಮಾರ್ಕ್ ಉತ್ತಮ ಪತ್ರಿಕಾ ಸ್ವಾತಂತ್ರ್ಯ ಹೊಂದಿರುವ ಮೊದಲ ಮೂರು ರಾಷ್ಟ್ರಗಳಾಗಿವೆ.
ರಾಜಕೀಯ, ಆರ್ಥಿಕ, ಶಾಸಕಾಂಗ, ಸಾಮಾಜಿಕ ಹಾಗೂ ಭದ್ರತೆ ಸೇರಿದಂತೆ ಐದು ಅಂಶಗಳ ಆಧಾರದ ಮೇಲೆ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆ ಪತ್ರಿಕಾ ಸ್ವಾತಂತ್ರ್ಯ ಸಂಬಂಧಿಸಿ ಮೌಲ್ಯಮಾಪನ ಮಾಡುತ್ತದೆ.
ಈ ಎಲ್ಲಾ ಐದು ಅಂಶಗಳಲ್ಲಿ ಭಾರತದ ಪರಿಸ್ಥಿತಿಯು ವರ್ಷದಿಂದ ವರ್ಷಕ್ಕೆ ಹದಗೆಡುತ್ತಿದೆ ಎಂದು ವರದಿ ಹೇಳಿದೆ. ರಾಜಕೀಯ ಅಂಶ 145 ರಿಂದ 169 ಮತ್ತು ಶಾಸಕಾಂಗ ಅಂಶ 120 ರಿಂದ 144 ಅಂದರೆ ಒಟ್ಟು 24 ಸ್ಥಾನಗಳಲ್ಲಿ ಕುಸಿತ ಕಂಡಿದೆ.
ಈ ಸುದ್ದಿ ಓದಿದ್ದೀರಾ?: ದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
2023ರ ಜನವರಿಯಿಂದ ಏಪ್ರಿಲ್ ತಿಂಗಳ ಅಂತ್ಯದ ಅವಧಿಯಲ್ಲಿ ಭಾರತದಲ್ಲಿ ಓರ್ವ ಪತ್ರಕರ್ತನ ಕೊಲೆಯಾಗಿದ್ದು, 10 ಮಂದಿ ಬಂಧನಕ್ಕೊಳಗಾಗಿದ್ದಾರೆ ಎಂದು ವರದಿ ಹೇಳಿದೆ.
ವಿಷಾದನೀಯ…