ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಬಹುತೇಕ ಮಳೆಯಲ್ಲೇ ಮುಕ್ತಾಯವಾಯಿತು. ಮಧ್ಯಾಹ್ನದವರೆಗೂ ಪಂದ್ಯ ನಡೆದು ಅತಿಥೇಯ ಬಾಂಗ್ಲಾದೇಶ 35 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 107 ರನ್ ಕಲೆಹಾಕಿದರು. ಪದೇಪದೇ ವರುಣ ಆಗಮಿಸಿದ ಕಾರಣ ದಿನದಾಟವನ್ನು ಸ್ಥಗಿತಗೊಳಿಸಲಾಯಿತು.
ಒಂದು ಗಂಟೆ ತಡವಾಗಿ ಪಂದ್ಯ ಆರಂಭವಾದಾಗ ಟಾಸ್ ಗೆದ್ದ ಭಾರತದ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬಾಂಗ್ಲಾ 12 ಓವರ್‌ಗಳಲ್ಲಿಯೇ ವೇಗಿ ಆಕಾಶ್‌ದೀಪ್ ದಾಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಮೊಮಿನುಲ್ ಹಕ್ (40) ಹಾಗೂ ನಾಯಕ ಶಾಂಟೋ (31) ಒಂದಿಷ್ಟು ಜೊತೆಯಾಟವಾಡಿದರು.
ಇವರಿಬ್ಬರ ಜೋಡಿಯನ್ನು ಸ್ಪಿನ್ನರ್ ಆರ್ ಅಶ್ವಿನ್ ಮುರಿದರು. ಟೀ ವಿರಾಮದ ವೇಳೆಗೆ ಮೊಮಿನುಲ್ ಹಕ್ ಹಾಗೂ ಮುಶ್ಫಿಕರ್ ರಹೀಮ್ (6) ಅಜೇಯರಾಗಿ ಆಟವಾಡುತ್ತಿದ್ದಾಗ ಮಳೆ ಜೋರಾದಾಗ ಪಂದ್ಯವನ್ನು ನಿಲ್ಲಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಟೆಸ್ಟ್ ಕ್ರಿಕೆಟ್ | ಐದನೇ ಶತಕ ಬಾರಿಸಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಶುಭ್‌ಮನ್ ಗಿಲ್
ಆಕಾಶ್ ದೀಪ್ 34/2 ಹಾಗೂ ಆರ್ ಅಶ್ವಿನ್ 22/1 ವಿಕೆಟ್ ಕಬಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಶ್ವಿನ್ ಅವರು ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಏಷ್ಯಾ ಖಂಡದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರನ ಹಿರಿಮೆಗೆ ಪಾತ್ರರಾದರು. ಮುಶ್ಪಿಕರ್ ರಹೀಮ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸುವುದರ ಮೂಲಕ ಅಶ್ವಿನ್ ಏಷ್ಯಾ ಖಂಡದಲ್ಲಿ 420 ವಿಕೆಟ್ ಪಡೆದು ಕುಂಬ್ಳೆ ಅವರ 419 ವಿಕೆಟ್ ದಾಖಲೆಯನ್ನು ಸರಿಗಟ್ಟಿದರು.
ಏಷ್ಯಾದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರುಳೀಥರನ್ ಇದ್ದು, 612 ವಿಕೆಟ್ ಕಬಳಿಸಿದ್ದಾರೆ. 300 ವಿಕೆಟ್ ಪಡೆದ ಹರ್‌ಭಜನ್ ಸಿಂಗ್ ಐದನೇ ಸ್ಥಾನದಲ್ಲಿದ್ದಾರೆ.
