ಸಂಘಪರಿವಾರದ ಇತಿಹಾಸ ನೋಡಿದರೆ ಅವರಿಗೆ ‘ಹೆಣರಾಜಕಾರಣ’ ಅಂದ್ರೆ ಬಲು ಇಷ್ಟ!

Date:

Advertisements
24 ಹಿಂದೂಗಳ ಕೊಲೆ ಎಂದು ರಾಜ್ಯದ ಬಿಜೆಪಿ ನಾಯಕರು ಆಗಿನ ಕೇಂದ್ರ ಗೃಹಮಂತ್ರಿ ರಾಜನಾಥ ಸಿಂಗ್ ಅವರಿಗೆ 24 ಮಂದಿಯ ಹೆಸರನ್ನು ಕೊಟ್ಟಿದ್ದು, ಅದರಲ್ಲಿ ಅಶೋಕ್ ಪೂಜಾರಿ ಎಂಬವರು ಸತ್ತೇ ಇರಲಿಲ್ಲ. ಬದುಕಿದ್ದ ಈ ವ್ಯಕ್ತಿಯ ಹೆಸರನ್ನೂ ಸತ್ತವರ ಪಟ್ಟಿಯಲ್ಲಿ ಬಿಜೆಪಿ ನಾಯಕರು ಕೊಟ್ಟಿದ್ದರು!

ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಸರಕಾರದಲ್ಲಿ ‘ಮಿನಿಸ್ಟರ್ ಆಫ್ ಪ್ರಪಗಾಂಡಾ’ ಎಂಬ ಹುದ್ದೆಯನ್ನು ನಿರ್ವಹಿಸಿದ್ದು ಪಾಲ್ ಜೋಸೆಫ್ ಗೊಬೆಲ್ಸ್. ಆಕರ್ಷಕ ಮಾತುಗಾರನೂ, ಪ್ರೊಪಗಾಂಡಾ ಅಥವಾ ಅಪಪ್ರಚಾರದಲ್ಲಿ ಎತ್ತಿದ ಕೈಯೂ ಆದ ಗೋಬೆಲ್ಸ್ ನಾಜಿ ಸರಕಾರದ ಬಗ್ಗೆ ಜರ್ಮನರಲ್ಲಿ ಒಳ್ಳೆಯ ಭಾವನೆ ಮೂಡಲು ಕಾರಣನಾದವನು ಮತ್ತು ಹಿಟ್ಲರ್ ನ ದುಷ್ಕೃತ್ಯಗಳಿಗೆ ಪ್ರೇರಣೆಯಾದವನು ಎನ್ನಲಾಗುತ್ತದೆ.

ಸುಳ್ಳು ಮತ್ತು ಅಪಪ್ರಚಾರ ರಾಜಕಾರಣದ ವಿಷಯ ಪ್ರಸ್ತಾಪವಾದಾಗಲೆಲ್ಲ ಈ ಗೋಬೆಲ್ಸ್ ನನ್ನು ಉಲ್ಲೇಖಿಸುವುದಿದೆ. ಇದಕ್ಕೆ ಕಾರಣ “ನೀವೊಂದು ದೊಡ್ಡ ಸುಳ್ಳನ್ನು ಹೇಳಿ ಅದನ್ನು ಮತ್ತೆ ಮತ್ತೆ ಪುನರುಚ್ಚರಿಸುತ್ತಿದ್ದರೆ ಅಂತಿಮವಾಗಿ ಜನರು ಅದನ್ನು ನಂಬುತ್ತಾರೆ” ಎಂಬ ಆತನ ಸುಪ್ರಸಿದ್ಧ ಮಾತು. ಈ ಪ್ರೊಪಗಾಂಡಾದ ಮೂಲಕವೇ ಹಿಟ್ಲರ್ ನ ಸರಕಾರ ಮೇಲೆ ಮೇಲೆ ಹೋಗುತ್ತದೆ ಮತ್ತು ಈ ಪ್ರೊಪಗಾಂಡಾದಿಂದಲೇ ಅದು ಮುಂದೊಂದು ದಿನ ಪತನಗೊಳ್ಳುತ್ತದೆ ಕೂಡಾ. ಇದು ಸುಳ್ಳಿನ ಬಗೆಗಿನ ಸಾರ್ವಕಾಲಿಕ ಸತ್ಯ ಕೂಡಾ.

ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್‌ಗೆ ಪ್ರೇರಣೆಯಾದುದು ಇಟಲಿಯ ಸರ್ವಾಧಿಕಾರಿ ಮುಸೊಲಿನಿಯ ಫ್ಯಾಸಿಸ್ಟ್ ತತ್ತ್ವ ಸಿದ್ಧಾಂತಗಳು. ಆರ್‌ಎಸ್‌ಎಸ್‌ನ ಸಂಸ್ಥಾಪಕರಲ್ಲೊಬ್ಬರಾದ ಡಾ ಬಿ ಎಸ್ ಮೂಂಜೆ ಇದೇ ಕಾರಣಕ್ಕೆ ಇಟಲಿಗೆ ಹೋಗಿ ಅವರ ಸಂಘಟನೆಯನ್ನು ಮತ್ತು ಸಿದ್ಧಾಂತಗಳನ್ನು ಅಧ್ಯಯನ ಮಾಡಿ ಬಂದಿದ್ದರು. ಸಂಘದ ಉಡುಗೆ ತೊಡುಗೆ, ವಂದನೆಯ ಶೈಲಿ, ಕವಾಯತು, ಸಂಘಟನೆಯ ಸ್ವರೂಪ, ಸಿದ್ಧಾಂತ ಎಲ್ಲವೂ ಅಲ್ಲಿಂದಲೇ ಬಂದುದು.

Advertisements

ಆರ್‌ಎಸ್‌ಎಸ್‌ನ ರಾಜಕೀಯ ಮುಖವಾದ ಬಿಜೆಪಿಗೆ ಸಹಜವಾಗಿಯೇ ಈ ಪ್ರೊಪಗಾಂಡಾ ರಾಜಕಾರಣ ಅಂದರೆ ಬಲು ಇಷ್ಟ. ಉದಾಹರಣೆಗೆ ಮೊನ್ನೆ ಮೊನ್ನೆಯ ಬಜರಂಗದಳ ವಿವಾದವನ್ನೇ ಗಮನಿಸಿ. ಕರ್ನಾಟಕ ಅಸೆಂಬ್ಲಿ ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸಲಾಗುವುದು ಎಂದು ಎಲ್ಲೂ ಹೇಳಿರಲಿಲ್ಲ. ಅಲ್ಲಿ ಹೇಳಿದ್ದು ‘ಕಾನೂನು ಮತ್ತು ಸಂವಿಧಾನ ಪರಮೋಚ್ಚವಾಗಿದ್ದು, ಕಾನೂನು ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡು, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಬಜರಂಗದಳ, ಪಿಎಫ್ ಐ ಸಹಿತ ಎಲ್ಲ ಸಂಘಟನೆಗಳ ವಿರುದ್ಧವೂ, ನಿಷೇಧವೂ ಸೇರಿದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು. ಕಾನೂನು ಉಲ್ಲಂಘಿಸುವವರ ವಿರುದ್ಧ ಮಾತ್ರ ಕ್ರಮ. ಆದರೆ ದೇಶದ ಪ್ರಧಾನಿಯೇ ಇದನ್ನು ತಿರುಚಿ ಬಜರಂಗದಳಕ್ಕೂ ಬಜರಂಗಬಲಿಗೂ (ಆಂಜನೇಯ) ಸಂಬಂಧ ಕಲ್ಪಿಸಿ ದೊಡ್ಡ ರಾದ್ಧಾಂತಕ್ಕೆ ಮುನ್ನಡಿ ಬರೆದರು. ಸತ್ಯ ಮನೆಯಿಂದ ಹೊರಬರುವಾಗ ಸುಳ್ಳು ಬ್ರಹ್ಮಾಂಡ ತಿರುಗಿಬಂದಾಗಿತ್ತು.

Parmesh Mesta
ಪರೇಶ್‌ ಮೇಸ್ತ

‘ಮೋದಿಯವರು ಭೂಮಿಗೆ ಸ್ವರ್ಗವನ್ನೇ ಇಳಿಸುವುದಾಗಿ ನಿಮಗೆ ಮೋಸ ಮಾಡುತ್ತಾರೆ, ನಾನು ಎಂತಹ ಮಶೀನ್ ಹಾಕುತ್ತೇನೆ ಅಂದರೆ ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಆ ಕಡೆಯಿಂದ ಚಿನ್ನ ಬರಬೇಕು ಎಂದೂ ಹೇಳುತ್ತಾರೆ’ ಎಂದು ರಾಹುಲ್ ಗಾಂಧಿ ಜನಸಭೆಯಲ್ಲಿ ಹೇಳಿದರು; ಐದಾರು ವರ್ಷಗಳ ಹಿಂದೆ. ಈ ಮಾತಿನ ತಲೆ ಮತ್ತು ಬಾಲವನ್ನು ಕತ್ತರಿಸಿದ ಬಿಜೆಪಿ ಪ್ರಪಗಾಂಡಾ ಮಶಿನರಿ ‘ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಆ ಕಡೆ ಚಿನ್ನ ಬರುವ ಮಶೀನ್ ಹಾಕುತ್ತೇನೆ’ ಎಂದು ರಾಹುಲ್ ಹೇಳಿದ್ದಾರೆ ಎಂದು ಸುಳ್ಳು ಹೇಳುತ್ತಾ ಹೋಯಿತು. ಎಷ್ಟು ಕ್ಷಿಪ್ರವಾಗಿ ಮತ್ತು ವ್ಯಾಪಕವಾಗಿ ಈ ಸುಳ್ಳನ್ನು ಅವರು ಹೇಳಿದರು ಎಂದರೆ, ಅದನ್ನು ಸತ್ಯ ಎಂದೇ ನಂಬಿದ ಕೋಟ್ಯಂತರ ಮಂದಿ ಈಗಲೇ ದೇಶದಲ್ಲಿದ್ದಾರೆ.

24 ಹಿಂದೂಗಳ ಹತ್ಯೆ!

ರಾಜ್ಯದ ವಿಷಯಕ್ಕೆ ಬರುವಾಗ, ಇಲ್ಲಿ ಬಿಜೆಪಿ ಹರಡಿದ ಮತ್ತು ಅದರಿಂದ ದೊಡ್ಡ ಮಟ್ಟದ ಲಾಭ ಪಡೆದ ಒಂದು ಸುಳ್ಳು ಎಂದರೆ, 24 ಹಿಂದೂಗಳ ಹತ್ಯೆ ಎಂಬುದು. ಸಿದ್ಧರಾಮಯ್ಯ ಸರಕಾರದ ಅವಧಿ ಪೂರ್ತಿಯಾಗಿ ಇನ್ನೇನು ಚುನಾವಣೆ ಬಂತು ಎನ್ನುವಾಗ, ಈ ಸುಳ್ಳನ್ನು ಶೋಭಾ ಕರಂದ್ಲಾಜೆಯ ಸಹಿತ ಬಿಜೆಪಿಯ ಬಹುತೇಕ ಎಲ್ಲ ನಾಯಕರು ಪ್ರತಿಯೊಂದು ವೇದಿಕೆಯಿಂದಲೂ ಹೇಳುತ್ತಲೇ ಹೋದರು. ಮಾತ್ರವಲ್ಲ, ಸಿದ್ದರಾಮಯ್ಯ ‘ಹಿಂದೂ ವಿರೋಧಿ’ ಎಂದು ಬಿಂಬಿಸುವಲ್ಲಿ ಅವರು ಬಹುಮಟ್ಟಿಗೆ ಯಶಸ್ವಿಯಾದರು ಮತ್ತು ಅದರ ರಾಜಕೀಯ ಲಾಭವನ್ನೂ ಪಡೆದುಕೊಂಡರು. ಆಗ ಎಂದಲ್ಲ ಈಗಲೂ ಆ ಸುಳ್ಳನ್ನು ಅವರು ಮತ್ತೆ ಮತ್ತೆ ಹೇಳುತ್ತಲೇ ಇರುತ್ತಾರೆ. ಸುಳ್ಳು ಹೇಳುತ್ತಾ ಹೇಳುತ್ತಾ ಆ ಸುಳ್ಳನ್ನು ಅವರೇ ಸತ್ಯ ಎಂದು ನಂಬಿಕೊಂಡಂತಿದೆ.

ಹಾಗಾದರೆ ಇಲ್ಲಿ ಸತ್ಯ ಏನು? ಆಗಿನ ಕರ್ನಾಟಕ ಸರಕಾರದ ಗೃಹಮಂತ್ರಿ ರಾಮಲಿಂಗಾ ರೆಡ್ಡಿ ಹೊರಡಿಸಿದ ಅಧಿಕೃತ ದಾಖಲೆಗಳೇ ಹೇಳುವಂತೆ, ಕರ್ನಾಟಕದಲ್ಲಿ ಹತ್ಯೆಗಳು ನಡೆದುದು ನಿಜ. ಆದರೆ ಅವು ಮತೀಯ ಕಾರಣಕ್ಕೆ ಮಾತ್ರ ನಡೆದ ಹತ್ಯೆಗಳಲ್ಲ ಮತ್ತು ನಡೆದುದು ಹಿಂದೂಗಳ ಹತ್ಯೆ ಮಾತ್ರವಲ್ಲ. ಮುಸ್ಲಿಂ ಸಂಘಟನೆಗಳವರು ಹಿಂದೂ ಸಮುದಾಯಕ್ಕೆ ಸೇರಿದ ಎಷ್ಟು ಮಂದಿಯನ್ನು ಕೊಂದಿದ್ದಾರೋ, ಹಿಂದುತ್ವ ಸಂಘಟನೆಗಳು ಸರಿಸುಮಾರು ಅಷ್ಟೇ ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರನ್ನು ಕೊಂದಿದ್ದಾರೆ.

24 ಹಿಂದೂಗಳ ಕೊಲೆ ಎಂದು ರಾಜ್ಯದ ಬಿಜೆಪಿ ನಾಯಕರು ಆಗಿನ ಕೇಂದ್ರ ಗೃಹಮಂತ್ರಿ ರಾಜನಾಥ ಸಿಂಗ್ ಅವರಿಗೆ 24 ಮಂದಿಯ ಹೆಸರನ್ನು ಕೊಟ್ಟಿದ್ದು, ಅದರಲ್ಲಿ ಅಶೋಕ್ ಪೂಜಾರಿ ಎಂಬವರು ಸತ್ತೇ ಇರಲಿಲ್ಲ. ಬದುಕಿದ್ದ ಈ ವ್ಯಕ್ತಿಯ ಹೆಸರನ್ನೂ ಸತ್ತವರ ಪಟ್ಟಿಯಲ್ಲಿ ಬಿಜೆಪಿ ನಾಯಕರು ಕೊಟ್ಟಿದ್ದರು!. ಉಳಿದಂತೆ ಮುಸ್ಲಿಂ ಸಂಘಟನೆಗಳಿಂದ (ಎಸ್ ಡಿ ಪಿ ಐ/ ಪಿ ಎಫ್ ಐ) ಹತರಾದವರೆಂದರೆ, ಮೂಡಬಿದ್ರೆಯ ಪ್ರಶಾಂತ ಪೂಜಾರಿ, ಮಡಿಕೇರಿಯ ಕುಟ್ಟಪ್ಪ, ಮೈಸೂರಿನ ಎಂ ರಾಜು, ಉಳ್ಳಾಲದ ರಾಜೇಶ್ ಕೋಟ್ಯಾನ್, ಕೊಡಗಿನ ಪ್ರವೀಣ ಪೂಜಾರಿ, ಮಂಗಳೂರಿನ ಚರಣ್ ಪೂಜಾರಿ, ಶಿವಮೊಗ್ಗದ ವಿಶ‍್ವನಾಥ, ಬೆಂಗಳೂರಿನ ರುದ್ರೇಶ, ಬಂಟ್ವಾಳದ ಶರತ್ ಕುಮಾರ್, ಬೆಂಗಳೂರಿನ ಸಂತೋಷ್, ಹೊನ್ನಾವರದ ಪರೇಶ‍್ ಮೇಸ್ತ (ಇದು ಮತೀಯ ಕೊಲೆ ಅಲ್ಲ ಎಂದು ಸಿಬಿಐ ಹೇಳಿದೆ), ಸುರತ್ಕಲ್ ನ ದೀಪಕ್ ರಾವ್.

ಅಮಿತ್‌ ಸಾ
ಸುರತ್ಕಲ್‌ನಲ್ಲಿ ಕೊಲೆಯಾದ ದೀಪಕ್‌ ರಾವ್‌ ಮನೆಯಲ್ಲಿ ಅಮಿತ್‌ ಶಾ

ಬಚ್ಚಿಟ್ಟ ಸತ್ಯ

ಇನ್ನುಳಿದ 12 ಹಿಂದೂಗಳ ಹತ್ಯೆಯನ್ನು ಮಾಡಿದ್ದು ಹಿಂದೂಗಳೇ. ಹಾಗೆ ಹತರಾದವರೆಂದರೆ, ಬೆಂಗಳೂರಿನ ಸಿ ಎನ್ ಶ್ರೀನಿವಾಸ್, ಬಳ್ಳಾರಿಯ ಬಂಡಿ ರಮೇಶ್, ಕಲಬುರ್ಗಿಯ ಮಹದೇವ, ಬೆಂಗಳೂರಿನ ಶ್ರೀನಿವಾಸ ಪ್ರಸಾದ್, ಮೂಡಬಿದಿರೆಯ ವಾಮನ್ ಕೋಟ್ಯಾನ್, ಬೆಂಗಳೂರಿನ ಸಿ ಎಂ ಅಶ‍್ವಥ್ ಕುಮಾರ್, ಕೊಡಗಿನ ರಾಜು ಕನ್ನಡಬಾನೆ, ಹುಬ್ಬಳ್ಳಿ ಧಾರವಾಡದ ಯೋಗೇಶ್ ಗೌಡ, ಮಂಗಳೂರಿನ ಕಾರ್ತಿಕ್ ರಾಜ್, ಬೆಂಗಳೂರಿನ ಹರೀಶ್, ತುಮಕೂರಿನ ತಿಪ್ಪೇಶ್, ಮೈಸೂರಿನ ರವಿ ಮಾಗಳ್ಳಿ.

ಇದನ್ನು ಓದಿ ಕರ್ನಾಟಕದಲ್ಲಿ ನೆಮ್ಮದಿ ಬೇಕು ಎಂದರೆ ಬಿಜೆಪಿ ವಿರುದ್ಧ ಹೋರಾಡಲೇಬೇಕು:..

ಇಷ್ಟು ಮಂದಿ ಹಿಂದೂಗಳನ್ನು ಹಿಂದೂಗಳೇ ಕೊಂದಿರುವುದು ಮಾತ್ರವಲ್ಲ, 11 ಮಂದಿ ಮುಸ್ಲಿಂ (ಎಸ್ ಡಿ ಪಿ ಐ/ಪಿಎಫ್ ಐ) ಕಾರ್ಯಕರ್ತರನ್ನೂ ಸಂಘ ಪರಿವಾರದವರು ಹತ್ಯೆ ಮಾಡಿದರು. ಈ ವಿಚಾರವನ್ನು ಜಾಣತನದಿಂದ ಸಂಘಪರಿವಾರವರು ಮರೆಮಾಚಿದ್ದಾರೆ. ಹಾಗೆ ಸತ್ತ ನತದೃಷ್ಟರೆಂದರೆ ಹುಬ್ಬಳ್ಳಿ ಧಾರವಾಡದ ಹುಸೇನ್ ಸಾಬ್, ಅಣ್ಣಿಗೇರಿಯ ಇಸ್ಮಾಯಿಲ್ ಸಾಬ್, ಮಡಿಕೇರಿಯ ಸಾಹುಲ್ ಹಮೀದ್, ಉಳ್ಳಾಲದ ಸಫಾನ್ ಪಿಲ್ಲರ್, ಮೈಸೂರಿನ ಮುಸ್ತಾಫ, ವಿಟ್ಲದ ಅಬ್ದುಲ್ ಜಲೀಲ್, ಉಡುಪಿಯ ಹನೀಫ್, ಬಂಟ್ವಾಳದ ಅಶ‍್ರಫ್, ಕಾವೂರಿನ ಅಬ್ದುಲ್ ಬಶೀರ್, ಮಂಗಳೂರಿನ ಯೂಸುಫ್ ಮಾಡೂರು, ಬಂಟ್ವಾಳದ ಮುಸ್ತಾಫಾ ನಾಸಿರ್.

ಸಂಘಪರಿವಾರದ ಇತಿಹಾಸ ನೋಡಿದರೆ ಅವರಿಗೆ ಹೆಣರಾಜಕಾರಣ ಬಲು ಇಷ್ಟ. ದೇಶದ ಯಾವುದೇ ಕೋಮುಗಲಭೆಯಿರಲಿ ಅಲ್ಲಿ ಸಂಘಪರಿವಾರದ ಒಂದಲ್ಲ ಒಂದು ಸಂಘಟನೆ ಇದ್ದೇ ಇರುತ್ತದೆ. ಯಾವುದೇ ಒಂದು ಕೊಲೆಯಿರಲಿ ಅಥವಾ ಅತ್ಯಾಚಾರ ಇರಲಿ, ಮೊದಲು ಈ ಪರಿವಾರ ನೋಡುವುದು ಸತ್ತವರು ಯಾವ ಸಮುದಾಯಕ್ಕೆ ಸೇರಿದವರು ಮತ್ತು ಅಪರಾಧಿಗಳು ಯಾವ ಸಮುದಾಯಕ್ಕೆ ಸೇರಿದವರು ಹಾಗೂ ಅಲ್ಲಿ ರಾಜಕೀಯ ಲಾಭ ಪಡೆಯಲು ಅವಕಾಶವಿದೆಯೇ ಎಂದು.

ಇದನ್ನು ಓದಿ ಈ ದಿನ ಸಂಪಾದಕೀಯ | ಡಬಲ್‌ ಎಂಜಿನ್‌ ಸರ್ಕಾರ ಇರುವಲ್ಲೇ ಹೆಚ್ಚು ಗಲಭೆ ನಡೆಯುತ್ತಿರುವುದೇಕೆ?

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ವಿಷಯಕ್ಕೆ ತುಟಿಪಿಟಕ್ಕೆನ್ನದ ಇವರು ತೀರ್ಥಹಳ್ಳಿಯ ನಂದಿತಾ ಪ್ರಕರಣಕ್ಕೆ ಮುನ್ನುಗ್ಗುತ್ತಾರೆ (ಅದನ್ನು ಮಾಡಿದ್ದು ಮುಸ್ಲಿಂ ಸಮುದಾಯದವರು ಎಂಬ ಆರೋಪ ಇವರದು. ಆದರೆ ಅದು ಸುಳ್ಳು ಎಂದು ಆಮೇಲೆ ಸಾಬಿತಾಯಿತು). ಹರ್ಷ ಮತ್ತು ಪ್ರವೀಣರ ಸಾವಿಗೆ ಮರುಗುವ ಇದೇ ಮಂದಿ ಮಂಗಳೂರಿನ ವಿನಾಯಕ ಬಾಳಿಗ ಕೊಲೆಗೆ ಮರುಗುವುದಿಲ್ಲ. ಯಾಕೆಂದರೆ ವಿನಾಯಕ ಬಾಳಿಗ ಕೊಲೆಯ ಆರೋಪಿ ನರೇಶ್ ಶೆಣೈ! ಇದು ತನ್ನನ್ನು ಪರಮದೇಶ ಭಕ್ತ ಮತ್ತು ಹಿಂದೂ ಧರ್ಮದ ರಕ್ಷಕ ಎಂದು ಕರೆದುಕೊಳ್ಳುವ ಸಂಘಪರಿವಾರ/ ಬಿಜೆಪಿಯ ಅಸಲಿಮುಖ.

ಆದ್ದರಿಂದಲೇ ಸಮಾಜ ಒಡೆಯುವ ಮತ್ತು ಹಿಂಸಾಪ್ರಿಯವಾದ ಇಂತಹ ಸಂಘಟನೆಗಳು ನಾಗರಿಕ ಸಮಾಜದಲ್ಲಿ ಇರಕೂಡದು. ಅಧಿಕಾರವನ್ನಂತೂ ಹಿಡಿಯಲು ಅವಕಾಶವನ್ನೇ ಕೊಡಕೂಡದು. ಚುನಾವಣೆ ಎನ್ನುವುದು ಇಂತಹ ಕ್ರಮಕ್ಕೆ ಸಕಾಲವಾಗಿದ್ದು, ನಮ್ಮ ಮತ ಜನಾಂಗದ್ವೇಷಿ ರಾಜಕೀಯ ಪಕ್ಷದ ವಿರುದ್ಧವಿರಲಿ.

?s=150&d=mp&r=g
ಶ್ರೀನಿವಾಸ ಕಾರ್ಕಳ
+ posts
56759201 10214091775274164 8688371072011075584 n
ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X