ಜಮ್ಮು ಕಾಶ್ಮೀರ ಚುನಾವಣೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಇಂದು ಜಮ್ಮು ಕಾಶ್ಮೀರದ ಅಂತಿಮ ಹಂತದ ಮತದಾನ ಆರಂಭವಾಗಿದ್ದು, 415 ಅಭ್ಯರ್ಥಿಗಳ ಪೈಕಿ ಮಾಜಿ ಉಪಮುಖ್ಯಮಂತ್ರಿಗಳಾದ ತಾರಾ ಚಂದ್ ಮತ್ತು ಮುಜಾಫರ್ ಬೇಗ್ ಅವರಂತಹ ಪ್ರಮುಖ ನಾಯಕರು ಚುನಾವಣಾ ಕಣದಲ್ಲಿದ್ದಾರೆ.
40 ಕ್ಷೇತ್ರಗಳ ಮತದಾರರು ಇಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮೂರನೇ ಮತ್ತು ಅಂತಿಮ ಹಂತದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಭದ್ರತೆಯ ನಡುವೆ ಮತ ಚಲಾಯಿಸುತ್ತಿದ್ದಾರೆ. 40 ವಿಧಾನಸಭಾ ಕ್ಷೇತ್ರಗಳ ಪೈಕಿ 24 ಜಮ್ಮು ವಿಭಾಗದಲ್ಲಿ ಮತ್ತು 16 ಕಾಶ್ಮೀರ ವಿಭಾಗದಲ್ಲಿವೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.
ಮೊದಲ ಹಂತದ ಮತದಾನವು ಸೆಪ್ಟೆಂಬರ್ 18ರಂದು ನಡೆಯಿತು. ನಂತರ ಎರಡನೇ ಹಂತವು ಸೆಪ್ಟೆಂಬರ್ 25ರಂದು ನಡೆಯಿತು. ಭಾರತದ ಚುನಾವಣಾ ಆಯೋಗದ ಪ್ರಕಾರ, ಮೊದಲ ಮತ್ತು ಎರಡನೇ ಹಂತದಲ್ಲಿ ಕ್ರಮವಾಗಿ ಶೇಕಡ 61 ಮತ್ತು ಶೇಕಡ 57.31 ಮತದಾನವಾಗಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ಚುನಾವಣೆ | ಎರಡನೇ ಹಂತದ ಮತದಾನ ಆರಂಭ, ಒಮರ್ ಅಬ್ದುಲ್ಲಾ ಕಣದಲ್ಲಿ
ಜಮ್ಮು ವಿಭಾಗದ 24 ವಿಧಾನಸಭೆ ಕ್ಷೇತ್ರಗಳಲ್ಲಿ ಹೆಚ್ಚಾಗಿ ಹಿಂದೂ ಸಮುದಾಯದ ಜನರು ಬಹುಸಂಖ್ಯೆಯಲ್ಲಿರುವ ಜಿಲ್ಲೆಗಳಾದ ಜಮ್ಮು, ಸಾಂಬಾ, ಕಥುವಾ ಮತ್ತು ಉಧಂಪುರದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರಗಳನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ.
VIDEO | Jammu and Kashmir Assembly Election: Voters visit polling stations to cast vote in Uri, Baramulla district. Strict security measures are in place to ensure peaceful voting.#JammuAndKashmirElection2024
— Press Trust of India (@PTI_News) October 1, 2024
(Full videos available on PTI Videos – https://t.co/n147TvqRQz) pic.twitter.com/Cj1hn0IiGK
ಪ್ರಮುಖ ಅಭ್ಯರ್ಥಿಗಳು ಇವರು
ಇಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಪ್ರತಿನಿಧಿಸುವ ಹಲವಾರು ರಾಜಕೀಯ ಪ್ರಮುಖರು ಕಣದಲ್ಲಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿಗಳು ಕೂಡಾ ಕಣದಲ್ಲಿದ್ದಾರೆ.
ದೇವೆಂದರ್ ಸಿಂಗ್ ರಾಣಾ: ನಗ್ರೋಟಾದ ಬಿಜೆಪಿ ಅಭ್ಯರ್ಥಿ ದೇವೆಂದರ್ ಸಿಂಗ್ ರಾಣಾ ಅವರಾಗಿದ್ದು, ಅವರ ಚುನಾವಣಾ ಪ್ರಚಾರವು ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿತ್ತು.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ: ಮೊದಲ ಹಂತದ 24 ಕ್ಷೇತ್ರಗಳಲ್ಲಿ ಮತದಾನ ಆರಂಭ
ರಾಮನ್ ಭಲ್ಲಾ: ಆರ್‌ಎಸ್ ಪುರ-ಜಮ್ಮು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ರಾಮನ್ ಭಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ ಮಾಜಿ ಸಚಿವರಾಗಿದ್ದಾರೆ. ಭಲ್ಲಾ ಸ್ಥಳೀಯ ಆಡಳಿತ ಸುಧಾರಣೆಯನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ.
ತಾರಾ ಚಂದ್: ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ತಾರಾ ಚಂದ್ ಚಂಬ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಸಜಾದ್ ಲೋನ್: ಪೀಪಲ್ಸ್ ಕಾನ್ಫರೆನ್ಸ್ ನಾಯಕ ಮತ್ತು ಮಾಜಿ ಪ್ರತ್ಯೇಕತಾವಾದಿ, ಕುಪ್ವಾರ ಮತ್ತು ಹಂದ್ವಾರದಲ್ಲಿ ಜನಪ್ರಿಯರಾದ ಸಜಾದ್ ಲೋನ್ ಅವರು ಚುನಾವಣೆಯಲ್ಲಿ ನಿರ್ಣಾಯಕ ವ್ಯಕ್ತಿಯಾಗಿದ್ದಾರೆ.
