ವರದಕ್ಷಿಣೆ ಕಿರುಕುಳ ನೀಡಿ, ತವರಿನಿಂದ ವರದಕ್ಷಿಣೆ ತರಲಿಲ್ಲ ಎನ್ನುವ ಕಾರಣಕ್ಕೆ, ಗೃಹಿಣಿಯನ್ನು ಕತ್ತು ಹಿಸುಕಿ ಕೊಲೆ ಮಾಟಿರುವ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.
28ವರ್ಷದ ಹೀನಾಕೌಸರ್ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷದ ಹಿಂದೆ ಮಹಮ್ಮದ್ ಅಜರುದ್ದೀನ್ ಎಂಬಾತನೊಂದಿಗೆ ಹೀನಾ ಮದುವೆಯಾಗಿದ್ದು, ವರದಕ್ಷಿಣೆ ತರುವಂತೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ವರದಕ್ಷಿಣೆ ತರುವಂತೆ ಹೀನಾಳೊಂದಿಗೆ ಮಹಮ್ಮದ್ ಕುಟುಂಬಸ್ಥರು ಜಗಳವಾಡಿದ್ದರು. ಈ ಕುರಿತು ಹಲವು ಬಾರಿ ಮಹಮ್ಮದ್ ಕುಟುಂಬಸ್ಥರಿಗೆ ಹಿರಿಯರು ಬುದ್ಧಿವಾದ ಹೇಳಿದ್ದರು. ವರದಕ್ಷಿಣೆ ಕಿರುಕುಳ ಮಾತ್ರ ಮುಂದುವರೆದಿತ್ತು.
ಇದನ್ನು ಓದಿದ್ದೀರಾ? ಧಾರವಾಡ | ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಅಪಾಯದಿಂದ ಪಾರು
ಗಂಡ ಮಹಮ್ಮದ್ ಅಜರುದ್ದೀನ್, ಅತ್ತೆ ಫರಿದಾಬಾನು, ಮಾವ ಕರೀಮ್‌ಸಾಬ್, ಹಾಗೂ ನಾದಿನಿ ಶಬ್ಬೋ ಸೇರಿ ಹೀನಾಕೌಸರ್ ಅನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಿ ಹೀನಾ ತಂದೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.