ಸ್ಕೂಟಿ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ನಗರದ ಕೃಷಿ ವಿವಿ ಮುಂಭಾಗದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸಾಕ್ಷಿ (22) ಮೃತ ಯುವತಿ. ಶನಿವಾರ ದಸರಾ ಹಬ್ಬದ ಅಂಗವಾಗಿ ಸಂಬಂಧಿಕರಿಗೆ ಬನ್ನಿ ಕೊಟ್ಟು ವಾಪಸ್ ಮನೆಗೆ ಬರುವ ಮಾರ್ಗದಲ್ಲಿ ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಜರುಗಿದೆ ಎನ್ನಲಾಗಿದೆ.
ಸ್ಕೂಟಿ ಚಲಾಯಿಸುತ್ತಿದ್ದ ಸಂಜನಾ ಎಂಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಹಿಂಬದಿ ಕುಳಿತ ಸಾಕ್ಷಿಗೆ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಕಾರು ಚಾಲಕನ ಹಿನ್ನೆಲೆ ಇನ್ನೂ ತಿಳಿದು ಬಂದಿಲ್ಲ.
ಈ ಸುದ್ದಿ ಓದಿದ್ದೀರಾ? ತಮಾಷೆ ಮಾಡಿದ್ದಕ್ಕೆ 9 ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಹತ್ಯೆ
ಈ ಕುರಿತು ರಾಯಚೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
