ಇಂಡಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಟೆಸ್ಟ್ ಪಂದ್ಯಾವಳಿ ನಡೆಯುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಕ್ರಿಕೆಟ್ ನಡೆಯುತ್ತಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 462 ರನ್‌ಗಳಿಸಿ, ಆಲ್‌ಔಟ್ ಆಗಿದೆ. ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಗೆಲ್ಲಲು 107 ರನ್‌ಗಳನ್ನು ಕಲೆ ಹಾಕಬೇಕಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಸಿದ್ದ ಟೀಮ್ ಇಂಡಿಯಾ ಆಲ್‌ಔಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಬರೋಬ್ಬರಿ 402 ರನ್‌ಗಳನ್ನು ಕಲೆಹಾಕಿತ್ತು.
ನ್ಯೂಜಿಲೆಂಡ್ ಭರ್ಜರಿ ರನ್ ಗಳಿಸಿದ್ದರಿಂದ, ಭಾರತ ತಂಡ 356 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಇದೀಗ, ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಟೀಮ್-ಇಂಡಿಯಾ 462 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ (150), ರಿಷಭ್ ಪಂತ್ (99), ವಿರಾಟ್ ಕೊಹ್ಲಿ (70) ಹಾಗೂ ನಾಯಕ ರೋಹಿತ್ ಶರ್ಮಾ (52) ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ನಾಲ್ವರ ಉತ್ತಮ ಆಟದೊಂದಿಗೆ 99.3 ಓವರ್‌ಗಳಲ್ಲಿ ಭಾರತ ತಂಡ 462 ರನ್ ಗಳಿಸಿ, ಆಲ್‌ಔಟ್ ಆಗಿದೆ.
ಮೊದಲ ಮತ್ತು ಎರಡನೇ ಇನ್ನಿಂಗ್‌ನಲ್ಲಿ ಟೀಮ್ ಇಂಡಿಯಾ, 508 (462+46) ರನ್ ಕಲೆ ಹಾಕಿದೆ. ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ 402 ರನ್ ಗಳಿಸಿರುವ ನ್ಯೂಜಿಲೆಂಡ್, ಮೊದಲ ಟೆಸ್ಟ್ ಗೆಲ್ಲಲು 107 ರನ್‌ಗಳ ಅಗತ್ಯವಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಅವರು ತಮ್ಮ ಮೊದಲ ಶತಕ ಬಾರಿಸಿದ್ದಾರೆ. ಅವರು 195 ಎಸೆತಗಳಿಗೆ 150 ರನ್‌ಗಳಿಸಿದ್ದಾರೆ. ಇನ್ನು, ರಿಷಬ್ ಪಂತ್ ಅವರು 99 ರನ್‌ಗಳಿಸಿ, ಔಟಾಗಿದ್ದು, ಶತಕ ವಂಚಿತರಾಗಿದ್ದಾರೆ.