ರಾಜ್ಯ ಸರ್ಕಾರ ಯಾವುದೇ ಕುಂಟು ನೆಪ ಹೇಳದೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ತಂಗಡಗಿಯಲ್ಲಿ ಒಳಮೀಸಲಾತಿ ಹೋರಾಟ ಐಕ್ಯತೆ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಡಿ ಬಿ ಮಧುರಿ ಹೇಳಿದರು.
ತಂಗಡಗಿ ಗ್ರಾಮದ ದುರ್ಗಾ ದೇವಸ್ಥಾನದಿಂದ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಸಮುದಾಯದ ಜನರಿಗೆ ಒಳಮೀಸಲಾತಿ ಸೌಲಭ್ಯದ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಈ ರ್ಯಾಲಿ ಮಾಡಲಿದೆ ಎಂದು ಸಂಘಟನೆ ಹೇಳಿದರು.
ಐಕ್ಯತೆ ಸಮಿತಿ ಸಂಚಾಲಕ ತಿಪ್ಪಣ್ಣ ದೊಡಮನಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರದಿಂದ ನಮಗೆ ನ್ಯಾಯ ಸಿಕ್ಕಿಲ್ಲ. ಸಿಎಂ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೊಳಿಸುವ ದಿಟ್ಟ ನಿರ್ಧಾರ ತೋರಬೇಕು ಎಂದು ಒತ್ತಾಯಿಸಿದರು.
ವಕೀಲ ಕೆ.ಬಿ. ದೊಡಮನಿ ಮಾತನಾಡಿ, ಶ್ರೇಣೀಕೃತ ಜಾತಿ ತಾರತಮ್ಯ ಅನುಭವಿಸುತ್ತಿಸರುವ ಸಮುದಾಯಗಳಿಗೆ ಕೆನೆ ಪದರ ಆಳವಡಿಸುವ ಯಾವುದೇ ಮರು ಪರಿಶೀಲನಾ ಅರ್ಜಿಗಳು ದಾಖಲಾಗಿದ್ದಲ್ಲಿ ಅದರ ಗಂಭೀರತೆಯನ್ನು ಆಧರಿಸಿ ಸೂಕ್ತ ನಿರ್ದೇಶನ ನೀಡುವ ನ್ಯಾಯಪೀಠಕ್ಕಿದೆ. ಈಗಾಗಲೇ ಪ್ರಕಟವಾಗಿರುವ ತೀರ್ಪನ್ನು ಕಡೆಗಣಿಸದೇ ಒಳಮೀಸಲಾತಿ ಸೌಲಭ್ಯ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ವಿಜಯನಗರ | ಕಲುಷಿತ ನೀರು ಸೇವಿಸಿ ನವಜಾತ ಶಿಶು ಸೇರಿ ಐವರು ಸಾವು
ಮುಖಂಡ ಚೆನ್ನಪ್ಪ ವಿಜಯಕರ್ ಮತ್ತು ವಿವಿಧ ಸಂಘಟನೆಗಳ ಮುಖಂಡರು. ಐಕ್ಯತೆ ಸಮಿತಿ ಪದಾಧಿಕಾರಿಗಳು ಹೋರಾಟದಲ್ಲಿ ಭಾಗಿಯಾಗಿದ್ದರು.