2025ರಲ್ಲಿ ನಡೆಯಲಿರುವ ಎಪಿಎಲ್‌ಗೆ ಕೆಲವೇ ದಿನಗಳಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಎಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಪ್ರಾಂಚೈಸಿಗಳು ತನ್ನ ಆಟಗಾರರನ್ನು ಉಳಿಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿವೆ. ಹಲವು ಆಟಗಾರರ ಸಂಭಾವನೆಯನ್ನು ಹೆಚ್ಚಿಸಲು ಪ್ರಾಂಚೈಸಿಗಳು ಮುಂದಾಗಿವೆ. ಎಲ್‌ಎಸ್‌ಜಿ ತಂಡದ ನಾಯಕರಾಗಿದ್ದ ಕೆ.ಎಲ್ ರಾಹುಲ್ ಇದೀಗ ತಂಡ ತೊರೆದಿದ್ದಾರೆ. ಅವರು ಆರ್‌ಸಿಬಿ ಸೇರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಇದೇ ವೇಳೆ, ಮುಂದಿನ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರೇ ಆರ್‌ಸಿಬಿಗೆ ಮತ್ತೆ ಕ್ಯಾಪ್ಟನ್ ಆಗಲಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಚರ್ಚೆ ಹೆಚ್ಚಾಗಿದೆ.
ಪ್ರಾಂಚೈಸಿಗಳು ಮತ್ತು ತಂಡಗಳ ಸಾಮಾಜಿಕ ಜಾಲತಾಣ ಖಾತೆಗಳು ಈಗ ಹೆಚ್ಚು ಸಕ್ರಿಯವಾಗಿವೆ. ಹಲವಾರು ಮಾಹಿತಿಗಳನ್ನು ಬಿಚ್ಚಿಡುತ್ತಿವೆ. ಕೆಲವೊಂದು ಕುತೂಹಲ ಮೂಡಿಸುವ ವಿಷಯಗಳನ್ನು ‘ಸರ್ಪ್ರೈಸಿಂಗ್ ಎಲಿಮೆಂಟ್’ ರೀತಿಯಲ್ಲಿ ನೀಡುತ್ತಿವೆ. ಆರ್‌ಬಿಸಿ ತಂಡದ ಫ್ರಾಂಚೈಸಿ ಕೂಡ ವಿರಾಟ್ ಕೊಹ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಜ್ಜಾಗಿದೆ. ಅವರನ್ನು ನಾಯಕನ್ನನಾಗಿಯೂ ನೇಮಿಸುವ ಸಾಧ್ಯತೆಯ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಬುಧವಾರ ಆರ್‌ಸಿಬಿ ಟ್ವೀಟ್ ಮಾಡಿದ್ದು, ಅದರಲ್ಲಿ ಅಕ್ಷರಗಳ ಚಾಟ್ ಹಾಕಿದೆ. ಅದರಲ್ಲಿರುವ ಆಟಗಾರರ ಹೆಸರುಗಳನ್ನು ಮಾರ್ಕ್ ಮಾಡುವಂತೆ ಅಭಿಮಾನಿಗಳಿಗೆ ಟಾಸ್ಕ್ ನೀಡಿದೆ. ಆ ಒಗಟಿನ ಚಾಟ್‌ನಲ್ಲಿ ಕೊಹ್ಲಿ, ಮೊಹಮ್ಮದ್ ಸಿರಾಜ್, ರಜತ್ ಪಾಟಿದಾರ್, ಫಾಫ್ ಡು ಪ್ಲೆಸಿಸ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಯಶ್ ದಯಾಲ್ ಮತ್ತು ವಿಲ್ ಜಾಕ್ಸ್ ಅವರ ಹೆಸರುಗಳಿವೆ.
So here is the list
— Nitin Kumar (@Nitin_kumar57) October 30, 2024
1. Kohli
2. Siraj
3. Rajat
4. Faf
5. Green
6. Maxwell
7. Dayal
8. Jacks
Obviously they are buying green and Maxwell. They didn't even wish birthday to maxi, and green is expensive. pic.twitter.com/vpeAgdDJfK
ಇದಕ್ಕೂ ಮುನ್ನ ಆರ್‌ಸಿಬಿ ವಿರಾಟ್ ಕೊಹ್ಲಿ ಅವರ ಚಿತ್ರಗಳ ಕೊಲಾಜ್ ಜೊತೆಗೆ ರಹಸ್ಯ ಸಂದೇಶವನ್ನು ಪೋಸ್ಟ್ ಮಾಡಿತ್ತು. “ದೀಪಾವಳಿ, ಕಿಂಗ್ ಕೊಹ್ಲಿಯಿಂದ ಮರೆಯಲಾಗದ ಉಡುಗೊರೆ! ಹಬ್ಬದ ಕಾಲವು ನಮ್ಮ ವಿಶೇಷ ವ್ಯಕ್ತಿಯಿಂದ ಹೆಚ್ಚು ವಿಶೇಷಗೊಂಡಿದೆ! ಈ ವರ್ಷ ಅಂಗಡಿಯಲ್ಲಿ ಏನಿದೆ?” ಎಂದು ಪೋಸ್ಟ್ ಮಾಡಿತ್ತು.
ಈ ವಿಶೇಷ ಏನು ಎಂಬ ವಿಚಾರದಲ್ಲಿ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗಿ ಪುನರಾಗಮಿಸುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಐಪಿಎಲ್ 2025ರ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ. ಇದು ದೊಡ್ಡ ದೀಪಾವಳಿ” ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.