ವಿಮಾನ ಪತನವಾದರೂ ಪವಾಡದ ರೀತಿಯಲ್ಲಿ ಬದುಕುಳಿದ 11 ತಿಂಗಳ ಶಿಶು, ನಾಲ್ಕು ಮಕ್ಕಳು!

Date:

Advertisements

ವಿಮಾನ ಪತನವಾದರೂ 11 ತಿಂಗಳ ಶಿಶು ಸೇರಿ ನಾಲ್ಕು ಮಕ್ಕಳು ಪವಾಡದ ರೀತಿಯಲ್ಲಿ ಬದುಕುಳಿದ ಅಚ್ಚರಿಯ ಘಟನೆ ಕೊಲಂಬಿಯಾದ ಅಮೆಜಾನ್‌ನ ಅಪಾಯಕಾರಿ ದಟ್ಟಾರಣ್ಯದಲ್ಲಿ ನಡೆದಿದೆ.

ಈ ಪ್ರದೇಶದಲ್ಲಿ ಎರಡು ವಾರದ ಹಿಂದೆ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಪೈಲಟ್ ಹಾಗೂ ಮಕ್ಕಳ ತಾಯಿ ಸೇರಿದಂತೆ ಮೂವರು ವಯಸ್ಕರು ಮೃತಪಟ್ಟಿದ್ದರು. ಅವರ ಮೃತದೇಹಗಳು ಕಳೆದ ವಾರ ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಪತ್ತೆ ಮಾಡಲು ಸ್ನಿಫರ್ ಶ್ವಾನ ಪಡೆಯ ಜತೆಗೆ ನೂರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿತ್ತು.

ಶೋಧ ಕಾರ್ಯ ನಡೆಸಿದ ಸೇನಾ ತಂಡಗಳಿಗೆ 11 ತಿಂಗಳ ಪುಟಾಣಿ ಸೇರಿದಂತೆ ನಾಲ್ಕು ಮಕ್ಕಳು ಜೀವಂತ ಪತ್ತೆಯಾಗಿದ್ದಾರೆ. ಅಪಘಾತದ ಬಳಿಕ ಬದುಕುಳಿದ 13, 9 ಮತ್ತು 4 ವರ್ಷದ ಮಕ್ಕಳು 11 ತಿಂಗಳ ಶಿಶುವನ್ನು ಎತ್ತಿಕೊಂಡು ದಕ್ಷಿಣ ಕಾಕ್ವೆಟಾ ವಿಭಾಗದ ಕಾಡಿನಲ್ಲಿ ಅಲೆದಾಡಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

Advertisements

ಮಕ್ಕಳು ಬದುಕುಳಿದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ “ಇದು ದೇಶಕ್ಕೆ ಉಂಟಾದ ಖುಷಿಯ ವಿಚಾರ’ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚೆನ್ನೈನಲ್ಲಿ ಕೆಟ್ಟು ನಿಂತ ಸಾವಿರ ಕೋಟಿ ನಗದು ಸಾಗಿಸುತ್ತಿದ್ದ ಆರ್‌ಬಿಐ ವಾಹನ!

ಬದುಕುಳಿದಿರುವ ಮಕ್ಕಳನ್ನು ಎಲ್ಲಿ ರಕ್ಷಿಸಲಾಗಿದೆ ಅಥವಾ ಅವರು ಅರಣ್ಯದಲ್ಲಿ ಹೇಗೆ ಜೀವ ಉಳಿಸಿಕೊಂಡಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಮೇ 1ರಂದು ಅಮೇಜಾನಸ್ ಪ್ರಾಂತ್ಯದ ಅರಾರಕುವರಾದಿಂದ ಗುವಿಯಾರ್ ಪ್ರಾಂತ್ಯದ ಸಾನ್ ಜೋಸ್ ಡೆಲ್ ಗುವಿಯಾರ್ ನಗರದ ಕಡೆಗೆ ತೆರಳುತ್ತಿದ್ದ ಸೆಸ್ನಾ 206 ಲಘು ವಿಮಾನವು ತಡರಾತ್ರಿ ಕಣ್ಮರೆಯಾಗಿತ್ತು. ಕೆಲವು ದಿನಗಳ ಹಿಂದೆ ಇದೇ ಅರಣ್ಯದಲ್ಲಿ ವಿಮಾನದ ಅವಶೇಷಗಳ ಜೊತೆಗೆ ಮೂವರ ಮೃತದೇಹಗಳು ಸಿಕ್ಕಿದ್ದವು. ಮೃತರಲ್ಲಿ ಈ ನಾಲ್ಕು ಮಕ್ಕಳ ತಾಯಿ ರೊನಾಕ್ಯು ಮುಕುಟುಯಿ ಸೇರಿದ್ದರು.

ಬದುಕುಳಿದ ಜೀವಂತ ಮಕ್ಕಳನ್ನು ನದಿ ತೀರದಿಂದ ದೋಣಿಯಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ ಮತ್ತು ಅವರೆಲ್ಲರೂ ಜೀವಂತವಾಗಿ ಇದ್ದಾರೆ ಎಂದು ಶೋಧ ಪ್ರದೇಶದಲ್ಲಿದ್ದ ಪೈಲಟ್ ಮಾಹಿತಿ ನೀಡಿದ್ದಾರೆ. ಆದರೆ ಈ ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಅರಣ್ಯ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಕ್ಕಳನ್ನು ಕರೆತರುವುದಕ್ಕೆ ಇನ್ನಷ್ಟು ಸಮಯ ಹಿಡಿಯುತ್ತದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X