ಚೆನ್ನೈನಲ್ಲಿ ಕೆಟ್ಟು ನಿಂತ ಸಾವಿರ ಕೋಟಿ ನಗದು ಸಾಗಿಸುತ್ತಿದ್ದ ಆರ್‌ಬಿಐ ವಾಹನ!

Date:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ 1,070 ಕೋಟಿ ರೂ ಸಾಗಿಸುತ್ತಿದ್ದ ಎರಡು ಕಂಟೈನರ್‌ಗಳ ಪೈಕಿ ಒಂದು ವಾಹನ ಚೆನ್ನೈನ ತಾಂಬರಂ ಬಳಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದರಿಂದ ಎರಡೂ ವಾಹನಗಳು ನಿಲುಗಡೆಗೊಂಡಿವೆ.

- Advertisement -

ಪೊಲೀಸ್ ಬೆಂಗಾವಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಚೆನ್ನೈನಿಂದ ವಿಳ್ಳುಪುರಂಗೆ ಸಾಗುತ್ತಿದ್ದ 535 ಕೋಟಿ ಹೊತ್ತ ಟ್ರಕ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಈ ಸುದ್ದಿ ತಿಳಿದು ಕ್ರೋಮ್ಪೇಟ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಂತರ ಹೆಚ್ಚಿನ ಭದ್ರತೆಗಾಗಿ ಪೊಲೀಸರನ್ನು ಕರೆಸಿಕೊಳ್ಳಲಾಯಿತು. ವಿಳ್ಳುಪುರಂಗೆ ನಗದನ್ನು ಪೂರೈಸಲು ಇವೆರಡೂ ವಾಹನಗಳು ಹೊರಟಿದ್ದವು.    

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಭದ್ರತೆಯ ದೃಷ್ಟಿಯಿಂದ ಕೆಟ್ಟು ನಿಂತಿದ್ದ ಟ್ರಕ್ ಅನ್ನು ಚೆನ್ನೈನಲ್ಲಿರುವ ತಾಂಬರಂನ ರಾಷ್ಟ್ರೀಯ ಸಿದ್ಧಸಂಸ್ಥೆಗೆ ಸಾಗಿಸಲಾಯಿತು. ಕೆಟ್ಟು ನಿಂತಿರುವ ಟ್ರಕ್‌ನ ತಾಂತ್ರಿಕ ದೋಷ ಪತ್ತೆ ಹಚ್ಚಲು ತಾಂಬರಂನ ಸಹಾಯಕ ಆಯುಕ್ತ ಶ್ರೀನಿವಾಸನ್ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು.

ಈ ಸುದ್ದಿ ಓದಿದ್ದೀರಾ? ಅದಾನಿ ಸಮೂಹದ ತನಿಖೆಗೆ ಸೆಬಿಗೆ ಮೂರು ತಿಂಗಳು ಸಮಯ ನೀಡಿದ ಸುಪ್ರೀಂ ಕೋರ್ಟ್

ನಂತರ ಟ್ರಕ್‌ ಅನ್ನು ರಾಷ್ಟ್ರೀಯ ಸಿದ್ಧಸಂಸ್ಥೆಗೆ ಸಾಗಿಸಿ ಅದರ ಬಾಗಿಲುಗಳನ್ನು ಮುಚ್ಚಲಾಯಿತು. ಕೆಲ ದಿನಗಳ ಮಟ್ಟಿಗೆ ರಾಷ್ಟ್ರೀಯ ಸಿದ್ಧಸಂಸ್ಥೆ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಟ್ರಕ್ ದುರಸ್ತಿಗೆಂದು ಬಂದಿದ್ದ ಮೆಕಾನಿಕ್‌ಗಳು ಅದನ್ನು ದುರಸ್ತಿಗೊಳಿಸಲು ಸಾಧ್ಯವಾಗದ ಕಾರಣ ಅವರನ್ನು ಚೆನ್ನೈನ ರಿಸರ್ವ್ ಬ್ಯಾಂಕ್‌ಗೆ ವಾಪಸ್ ಕಳಿಸಲಾಯಿತು. ನೋಟುಗಳ ಟ್ರಕ್‌ಗಳು ಮಧ್ಯಪ್ರದೇಶದ ದೇವಾಸ್‌ನ ನೋಟು ಮುದ್ರಣಾಲಯದಿಂದ ಬರುತ್ತಿದ್ದವು.

ಭಾರತದಲ್ಲಿ ಕರ್ನಾಟಕದ ಮೈಸೂರು ಸೇರಿದಂತೆ ಮಧ್ಯಪ್ರದೇಶದ ದೇವಾಸ್, ಮಹಾರಾಷ್ಟ್ರದ ನಾಸಿಕ್, ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿ ನೋಟುಗಳನ್ನು ಮುದ್ರಿಸಲಾಗುತ್ತದೆ.

ಮಧ್ಯಪ್ರದೇಶದ ದೇವಾಸ್‌ನಲ್ಲಿ ಒಂದು ವರ್ಷದಲ್ಲಿ 265 ಕೋಟಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಈ ನೋಟುಗಳನ್ನು ಮುದ್ರಿಸಲು ಬಳಸುವ ಶಾಯಿಯನ್ನೂ ಇಲ್ಲಿಯೇ ತಯಾರಿಸಲಾಗುತ್ತದೆ. ಈ ಮುದ್ರಣಾಲಯದಲ್ಲಿ 20, 50, 100 ಮತ್ತು 500 ನೋಟುಗಳನ್ನು ಮುದ್ರಿಸಲಾಗುತ್ತದೆ. ಈ ಮುದ್ರಣಾಲಯವು 1991 ರಿಂದ ನಾಸಿಕ್‌ನಲ್ಲಿದೆ. 1, 2, 5, 10, 50 ಮತ್ತು 100 ರೂಪಾಯಿ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತದೆ.

ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 2,000 ಕೋಟಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇದರಲ್ಲಿ ಶೇಕಡ 40 ರಷ್ಟು ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಖರ್ಚಾಗುತ್ತದೆ. ನೋಟುಗಳಿಗೆ ಬಳಸುವ ಕಾಗದವನ್ನು ಜರ್ಮನಿ, ಬ್ರಿಟನ್ ಮತ್ತು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಎಷ್ಟು ನೋಟುಗಳನ್ನು ಮುದ್ರಿಸಬೇಕು ಎಂಬುದನ್ನು ಆರ್‌ಬಿಐ ನಿರ್ಧರಿಸುತ್ತದೆ. ಆದರೆ ನೋಟು, ನಾಣ್ಯಗಳನ್ನು ವಿತರಿಸುವ ಹಕ್ಕು ಸರ್ಕಾರ ಹೊಂದಿರುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಚೋದನಕಾರಿ ಭಾಷಣದಿಂದ ಹಲ್ಲೆಯವರೆಗೆ: ಪರ್ವೇಶ್ ವರ್ಮಾ ಎಂಬ ಪರಮ ದುರಹಂಕಾರಿಯ ಕತೆ

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿಗಳಾಗಿರಬೇಕು. ಆದರೆ, ದೆಹಲಿಯ ಲೋಕೋಪಯೋಗಿ ಸಚಿವ ಪರ್ವೇಶ್...

ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಾಧಿಕಾರಗಳ ನಿರ್ಲಕ್ಷ್ಯ: ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಅಪ್ರಾಪ್ತರು ಹಾಗೂ ಮಹಿಳೆಯರ...

ಜನಸಂಖ್ಯಾ ಸಮಿತಿಯ ‘ಧರ್ಮ ಆಧಾರಿತ’ ಪ್ರಶ್ನೆಗಳಿಗೆ ಉತ್ತರಿಸಲಾಗದೆ ರಾಜ್ಯ ಸರ್ಕಾರಗಳ ಪರದಾಟ

ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು (HLCDC)...