ಬರೋಬ್ಬರಿ 12 ಸಿಕ್ಸರ್, 46 ಬೌಂಡರಿಗಳೊಂದಿಗೆ ಅಜೇಯ 428 ರನ್ (465 ಎಸೆತ) ಸಿಡಿಸುವ ಮೂಲಕ ಹರಿಯಾಣದ ಬ್ಯಾಟರ್ ಯಶ್ವರ್ಧನ್ ದಲಾಲ್ ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸಿಗ ದಿಗ್ಗಜ ಬ್ಯಾಟರ್ ಅವರ ದಾಖಲೆಗೆ ಹತ್ತಿರವಾಗಿದ್ದಾರೆ. ಬ್ರಿಯಾನ್ ಲಾರಾ 1994ರ ಜೂನ್ 4 ರಂದು ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ವಾರ್ವಿಂಕ್‌ಷೈರ್ ತಂಡದ ಪರವಾಗಿ ದರ್ಹಾಮ್ ತಂಡದ ವಿರುದ್ದ ಅಜೇಯ 501 ರನ್ ಸಿಡಿಸಿದ್ದರು. ಹಾಗೆಯೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2004ರಲ್ಲಿ ಅಜೇಯ 400 ರನ್ ಸಿಡಿಸಿದ್ದರು.
ಶುಕ್ರವಾರದಿಂದ ಆರಂಭಗೊಂಡಿರುವ ನಡೆದ ಕರ್ನಲ್ ಸಿ ಕೆ ನಾಯ್ಡು ಟ್ರೋಫಿ ಅಂಗವಾಗಿ ಹರಿಯಾಣದ ಸುಲ್ತಾನ್ ಪುರದಲ್ಲಿರುವ ಗುರುಗ್ರಾಮ ಕ್ರಿಕೆಟ್ ಮೈದಾನದಲ್ಲಿ ನಡೆದ ಹರಿಯಾಣ ಹಾಗೂ ಮುಂಬೈ ತಂಡಗಳ ನಡುವೆ ಅಂಡರ್ 23 ಪಂದ್ಯದಲ್ಲಿ ಆರಂಭಿಕ ಆಟಗಾರ ಯಶ್ವರ್ಧನ್ ದಲಾಲ್ ಆರಂಭದಲ್ಲೇ ಭರ್ಜರಿ ಕಮಾಲ್ ಮಾಡಿದ್ದಾರೆ. ಮುಂಬೈ ವಿರುದ್ಧ 92.03 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಯಶ್ವರ್ಧನ್ ದಲಾಲ್ 426 ರನ್ ಚಚ್ಚಿ ಕ್ರೀಸ್‌ನಲ್ಲಿ ಅಜೇಯರಾಗುಳಿದರು. ಇದರೊಂದಿಗೆ 2ನೇ ದಿನದ ಅಂತ್ಯಕ್ಕೆ ಹರಿಯಾಣ ತಂಡ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 732 ರನ್ ಬಾರಿಸಿತು.
ಈ ಸುದ್ದಿ ಓದಿದ್ದೀರಾ? ಹಣದ ಅಮಲು ಹಾಗೂ ಭಾರತೀಯ ಕ್ರಿಕೆಟ್ ತಂಡದ ಗರ್ವಭಂಗ
ದಲಾಲ್ ಈ ಇನ್ನಿಂಗ್ಸ್‌ನಲ್ಲಿ ಅಜೇಯ 428 ರನ್ ಗಳಿಸುವ ಮೂಲಕ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ದಾಖಲೆ ಬರೆದರು. ಇದರೊಂದಿಗೆ ಅಂಡರ್ 23 ಪಂದ್ಯದಲ್ಲಿ ಕಳೆದ ವರ್ಷ ಇದೇ ಟೂರ್ನಿಯಲ್ಲಿ ಒಂದೇ ಇನಿಂಗ್ಸ್ ನಲ್ಲಿ 312 ರನ್ ಸಿಡಿಸಿ ಅತಿ ದೊಡ್ಡ ವೈಯಕ್ತಿಕ ಮೊತ್ತ ದಾಖಲೆ ಬರೆದಿದ್ದ ಉತ್ತರ ಪ್ರದೇಶ ಬ್ಯಾಟ್ಸ್‌ಮನ್ ಸಮೀರ್ ರಿಝ್ವಿಯವರ ದಾಖಲೆಯನ್ನು ಅಳಿಸಿ ಹಾಕಿದರು.
ಮೊದಲು ಟಾಸ್ ಗೆದ್ದಿದ್ದ ಮುಂಬೈ ತಂಡ, ಫೀಲ್ಡಿಂಗ್ ಆಯ್ದುಕೊಂಡು ಬ್ಯಾಟಿಂಗ್ ಮಾಡುವ ಅವಕಾಶವನ್ನು ಹರಿಯಾಣಕ್ಕೆ ಬಿಟ್ಟುಕೊಟ್ಟಿತು. ಫೀಲ್ಡಿಂಗ್ ಆಯ್ಡುಕೊಂಡ ಮುಂಬೈ ಎದುರಾಳಿ ಬ್ಯಾಟರ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸದಲ್ಲಿತ್ತು. ಆದರೆ ಹರಿಯಾಣ ಬ್ಯಾಟರ್‌ಗಳ ಆರ್ಭಟಕ್ಕೆ ಲೆಕ್ಕಾಚಾರ ಫಲಿಸಲಿಲ್ಲ. ಆರಂಭಿಕರಾದ ದಲಾಲ್ ಮತ್ತು ಅರ್ಶ್ ರಂಗಾ ಅವರ ಜೊತೆಯಾಟ ಮುಂಬೈ ಬೌಲರ್‌ಗಳನ್ನು ಕಂಗಾಲು ಮಾಡಿತ್ತು. ಇವರಿಬ್ಬರ ಜುಗಲ್ ಬಂದಿಯಲ್ಲಿ ಆಟ ಮೊದಲ ವಿಕೆಟ್‌ಗೆ 410 ರನ್‌ಗಳನ್ನು ಕಲೆಹಾಕಿತ್ತು.
ರಂಗಾ ಅವರ ವಿಕೆಟ್ ಪತನವಾದ ನಂತರ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಸರದಿ ಸಾಲಿನಲ್ಲಿ ಪೆವಿಲಿಯನ್‌ಗೆ ತೆರಳಿದರು. ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರು ಆಡಿದ ದಲಾಲ್ ಶನಿವಾರದ ಆಟದಲ್ಲಿ ಅಕ್ಷರಶಃ ಅಬ್ಬರಿಸಿದರು. ಅವರ ಭರ್ಜರಿ ಅಜೇಯ ಆಟದಿಂದಾಗಿ ಹರಿಯಾಣ ತಂಡ, ಪಂದ್ಯದ 2ನೇ ದಿನವಾದ ಶನಿವಾರದ ಅಂತ್ಯಕ್ಕೆ 8 ವಿಕೆಟ್ ಗೆ 732 ರನ್ ಗಳನ್ನು ಪೇರಿಸಿದೆ.
ಸಂಕ್ಷಿಪ್ತ ಸ್ಕೋರ್:
ಹರಿಯಾಣ ಮೊದಲ ಇನಿಂಗ್ಸ್ 732/8, ಯಶ್ ವರ್ದನ್ ದಲಾಲ್ ಅಜೇಯ 426 ರನ್ (463 ಎಸೆತ, 58 ಬೌಂಡರಿ, 12 ಸಿಕ್ಸರ್), ಅರ್ಶ್ ರಂಗಾ 151 ರನ್ (311 ಎಸೆತ, 18 ಬೌಂಡರಿ, 1 ಸಿಕ್ಸರ್), ಸರ್ವೇಶ್ ರೋಹಿಲಾ 48 ರನ್, ಪರ್ಥ್ ನಗಿಲ್ 25 ರನ್, ಪರ್ಥ್ ವಾಟ್ಸ್ 24 ರನ್.
