ಮಂಡ್ಯ | ಒಂದು ಟ್ವೀಟ್‌ನಿಂದ ಏನಾಗುತ್ತದೆ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ!

Date:

Advertisements

ಕನ್ನಡ ಮನಸುಗಳು ಟ್ವಿಟರ್ ಅಕೌಂಟಿನಿಂದ ಪವನ್‌ ಧರೆಗುಂಡಿ, ಚಿಕ್ಕಮಂಡ್ಯ ಶಾಲೆಯ ಮುಂಭಾಗದಲ್ಲಿನ ಅವ್ಯವಸ್ಥೆ, ಗಲೀಜು ಮತ್ತು ಗಬ್ಬು ವಾಸನೆಯ ಕುರಿತು ಒಂದು ಟ್ವೀಟ್ ಮಾಡಿದ್ದರು. ಅದು ನಾಡಿನ ಸಿಎಂ ಸಿದ್ದರಾಮಯ್ಯನವರ ವಿಶೇಷ ಕರ್ತವ್ಯಾಧಿಕಾರಿಗೂ ಟ್ಯಾಗ್ ಮಾಡಿದ್ದರು. ಇದು ಪ್ರಜ್ಞಾವಂತರ ಗಮನ ಸೆಳೆದಿತ್ತು. ಪರಿಸರ ಪ್ರೇಮಿಗಳು ಮತ್ತು ಸರಕಾರಿ ಶಾಲಾಭಿಮಾನಿಗಳು ಸಂಬಂಧಪಟ್ಟವರಿಗೆ ಕರೆ ಮಾಡಿದ್ದರು.

ಇದಕ್ಕೆ ಸಕಾಲದಲ್ಲಿ ಸ್ಪಂದಿಸಿದ ಮಂಡ್ಯದ ಜಿಲ್ಲಾಡಳಿತ ಕೂಡಲೇ ದುರ್ವಾಸನೆ ಬೀರುತ್ತಿದ್ದ ಸ್ಥಳವನ್ನು ಶುಚಿಗೊಳಿಸುವಂತೆ ನಿರ್ದೇಶನ ನೀಡಿತ್ತು. ಹಲವು ವರ್ಷಗಳಿಂದ ಶಾಲೆಯ ಮುಂಭಾಗ ಕಸ ಸುರಿದಿದ್ದರಿಂದ ಆವರಣವನ್ನು ಸ್ವಚ್ಛಗೊಳಿಸಲು ಪೌರ ಕಾರ್ಮಿಕರಿಗೆ ಇಡೀ ದಿನ ಬೇಕಾಯಿತು. ಸ್ಥಳೀಯ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

IMG 20241118 WA0004

ನಮಗೆ ಕಾಣದ್ದು ಪವನ್‌ಗೆ ಕಂಡಿತು!

Advertisements

ಧರೆಗುಂಡಿ ಪವನ್ ಮಾತನಾಡಿ, ಚಿಕ್ಕ ಮಂಡ್ಯ ಶಾಲೆಗೆ ಸುಣ್ಣ, ಬಣ್ಣ ಮಾಡಲು ವಾಲೆಂಟಿಯರ್‌ಗಳಾಗಿ ಹೋಗಿದ್ವಿ. ಶಾಲೆಯ ಪಕ್ಕದಲ್ಲಿ ತುಂಬಾ ಅಂದರೆ ತುಂಬಾನೆ ಗಲೀಜಾಗಿತ್ತು. ಶಾಲೆಯ ಅಕ್ಕ ಪಕ್ಕದ ಪರಿಸರ ಸ್ವಚ್ಛವಾಗಿರಬೇಕು ಎನ್ನುವ ಉದ್ದೇಶದಿಂದ ಒಂದು ವಿಡಿಯೋ ಮಾಡಿ ಟ್ವಿಟ್ ಮಾಡಿದ್ದೆ. ಅದಕ್ಕೆ ಜಿಲ್ಲಾಡಳಿತ ಸ್ಪಂದಿಸಿ ಗಲೀಜನ್ನು ಎತ್ತಾಕಿಸಿದೆ ಎಂದು ಮಾಹಿತಿ ನೀಡಿದರು.

IMG 20241118 WA0009

ಚಿತ್ರಕೂಟದ ಅರವಿಂದ ಪ್ರಭು ಮಾತನಾಡಿ, ನಾವು ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೆವು. ಪಕ್ಕದಲ್ಲೇ ಇರುವ ನಿಲ್ದಾಣದಲ್ಲಿ ವಾಸನೆ ಸಹಿಸಿಕೊಂಡು ಬಸ್ ಹತ್ತುತ್ತಿದ್ದೆವು. ನಮಗ್ಯಾರಿಗೂ ಇದು ಕಣ್ಣಿಗೆ ಬಿದ್ದಿರಲಿಲ್ಲ. ನೂರು ಕಿಲೋ ಮೀಟರ್ ದೂರದಿಂದ ಬಂದ ಕನ್ನಡವೀರನೊಬ್ಬ ನಮ್ಮೆಲ್ಲರ ಕಣ್ಣು ತೆರೆಸಿದ. ಶಾಲೆಯ ಮಕ್ಕಳ ಜತೆಗೆ ಸಾರ್ವಜನಿಕರಿಗೂ ಪವನ್ ಈ ಕೆಲಸದಿಂದ ಒಳ್ಳೆಯದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

https://twitter.com/kannadamanasuga/status/1856197861223899365?t=fImVbTd_kjUaTRQ2CANUPw&s=19

ಚಿಕ್ಕಮಂಡ್ಯ ಸರಕಾರಿ ಶಾಲೆಯ ದೈಹಿಕ ಶಿಕ್ಷಕ ಚಂದನ್ ಮಾತನಾಡಿ, ಗಲೀಜು ಮಾಡಿ ಎತ್ತಾಕುವುದಕ್ಕಿಂತ ಕಸ ಹಾಕದಂತೆ ಸ್ಥಳೀಯ ಆಡಳಿತದಿಂದ ಕ್ರಮ ಆಗಬೇಕು. ಕನ್ನಡ ಮನಸ್ಸುಗಳು ತಂಡದ ಪವನ್ ಧರೆಗುಂಡಿಯವರಿಗೆ ಬಂದಂತಹ ಯೋಚನೆ ನಮಗ್ಯಾಕೆ ಬರಲಿಲ್ಲ ಎಂದರು.

ಇದನ್ನು ಓದಿದ್ದೀರಾ? ಮಂಡ್ಯ | ದಕ್ಷಿಣ ಭಾರತಕ್ಕೆ ಸುಪ್ರೀಂ ಕೋರ್ಟ್ ಬೆಂಚ್ ಬೇಕು: ಅಭಿಗೌಡ

ಮಂಗಲ ಯೋಗೇಶ್ ಮಾತನಾಡಿ, ಪಂಚಾಯಿತಿಯಿಂದ ಆಯ್ಕೆ ಆದವರಿಗೆ ಕಣ್ಣು, ಕಿವಿ, ನಾಲಿಗೆ ಯಾವುದೂ ಇಲ್ಲ. ಅಯ್ಯೋ ನಮಗ್ಯಾಕೆ ಬಿಡು ಅಂತ ಸುಮ್ಮನಾಗುತ್ತಾರೆ. ಕೇಳುವವರಿದ್ದಾಗಲೇ ಕೆಲಸ ಆಗುವುದು. ಗೆಳೆಯ ಪವನ್ ಎಚ್ಚರಿಸುವ ಕೆಲಸ ಮಾಡಿರುವುದರಿಂದ ಒಳೆಯದಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

Untitled 24
ನಗರಕೆರೆ ಜಗದೀಶ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X