ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಕೊನೆಯಾಗಿದೆ. ಇದಾದ ಬೆನ್ನಲ್ಲೇ ಹಲವು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷಾ ವರದಿಯನ್ನು ಪ್ರಕಟಿಸಿದೆ.
ಜೆವಿಸಿ, ಮ್ಯಾಟ್ರಿಜ್, ಪೀಪಲ್ಸ್ ಪಲ್ಸ್, ಟೈಮ್ಸ್ ನೌ ಮೊದಲಾದವುಗಳು ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ತೆಕ್ಕೆಗೆ ಅಧಿಕಾರ ಸೇರಲಿದೆ ಎಂದು ಹೇಳಿದೆ. ಆದರೆ ಆಕ್ಸಿಸ್ ಮೈ ಇಂಡಿಯಾ ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟವು ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಚುನಾವಣೋತ್ತರ ಸಮೀಕ್ಷೆ | ಹರಿಯಾಣದಲ್ಲಿ ಬಿಜೆಪಿಯ ಹುಟ್ಟಡಗಿಸುತ್ತೆ ಕಾಂಗ್ರೆಸ್!
ಮ್ಯಾಟ್ರಿಜ್ ಎನ್‌ಡಿಎಗೆ 42-47, ಇಂಡಿಯಾ ಒಕ್ಕೂಟಕ್ಕೆ 25-30, ಇತರೆ 1-4 ಸ್ಥಾನಗಳು ಗೆಲ್ಲಲಿದೆ ಎಂದಿದೆ. ಈ ನಡುವೆ ಪೀಪಲ್ಸ್ ಪಲ್ಸ್ ಎನ್‌ಡಿಎಗೆ 44-53, ಇಂಡಿಯಾ ಒಕ್ಕೂಟಕ್ಕೆ 25-37, ಇತರೆ 5-9 ಸ್ಥಾನಗಳು ಗೆಲ್ಲಲಿದೆ ಎಂದಿದೆ.
ಟೈಮ್ಸ್ ನೌ- ಜೆವಿಸಿ ಪೋಲ್‌ಸ್ಟರ್ ಎನ್‌ಡಿಎಗೆ 40-44, ಇಂಡಿಯಾ ಒಕ್ಕೂಟಕ್ಕೆ 30-40, ಇತರೆ 1 ಸ್ಥಾನವನ್ನು ಮಾತ್ರ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದೆ. ಪಿ-ಮಾರ್ಕ್ ಎನ್‌ಡಿಎಗೆ 31-40, ಇಂಡಿಯಾ ಒಕ್ಕೂಟಕ್ಕೆ 37-47 ಸ್ಥಾನ ಲಭಿಸಲಿದೆ ಎಂದು ಹೇಳಿದೆ.
Jharkhand Exit Poll – Overall Seat Share (81 Seats) & Vote Share(%)#JharkhandAssemblyElection2024 #Election2024 #exitpoll pic.twitter.com/XwjWLYGNi8
— Axis My India (@AxisMyIndia) November 20, 2024
ಆಕ್ಸಿಸ್ ಮೈ ಇಂಡಿಯಾ
ಜಾರ್ಖಂಡ್‌ನಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳಿದ್ದು ಬಹುಮತಕ್ಕೆ 42 ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ. ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಜಾರ್ಖಂಡ್‌ನಲ್ಲಿ ಉತ್ತರ ಚೋಟನಾಗಪುರದ 25 ಕ್ಷೇತ್ರಗಳ ಪೈಕಿ ಇಂಡಿಯಾ ಒಕ್ಕೂಟ 12, ಎನ್‌ಡಿಎ 11, ಜೆಎಲ್‌ಕೆಎಂ 2 ಕ್ಷೇತ್ರದಲ್ಲಿ ಗೆಲ್ಲಲಿದೆ. ಕೋಲ್ಹಾನ್ ಪ್ರಾಂತ್ಯದ 14 ಕ್ಷೇತ್ರಗಳಲ್ಲಿ 9ರಲ್ಲಿ ಇಂಡಿಯಾ, 5ರಲ್ಲಿ ಎನ್‌ಡಿಎ ಜಯ ಗಳಿಸಲಿದೆ.
ಇದನ್ನು ಓದಿದ್ದೀರಾ? ಚನ್ನಪಟ್ಟಣ ಉಪಚುನಾವಣೆ; ಚರ್ಚೆ, ಸಂವಾದ, ಸಮೀಕ್ಷೆಗಳಿಗೆ ನಿರ್ಬಂಧ
ಪಲಾಮುವಿನ 9 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಇಂಡಿಯಾ ಒಕ್ಕೂಟ, 3ರಲ್ಲಿ ಎನ್‌ಡಿಎ, ಇತರೆ 1 ಕ್ಷೇತ್ರ ಗಳಿಸಲಿದೆ. ಸಂತಾಲ್ ಪರಗಣದ 18 ಕ್ಷೇತ್ರಗಳಲ್ಲಿ 15 ಇಂಡಿಯಾ ಒಕ್ಕೂಟದ, ಮೂರರಲ್ಲಿ ಎನ್‌ಡಿಎ ಪಾಲಾಗಲಿದೆ. ದಕ್ಷಿಣ ಚೋಟನಗರದ 15 ವಿಧಾನಸಭೆ ಕ್ಷೇತ್ರದಲ್ಲಿ ಇಂಡಿಯಾ ಒಕ್ಕೂಟ 12, ಎನ್‌ಡಿಎ 3 ಕ್ಷೇತ್ರದಲ್ಲಿ ಗೆಲುವು ಕಾಣಲಿದೆ.
ಒಟ್ಟಾರೆಯಾಗಿ ಎನ್‌ಡಿಎ 17-27 ಕ್ಷೇತ್ರದಲ್ಲಿ, ಇಂಡಿಯಾ ಒಕ್ಕೂಟವು 49-59, ಜೆಎಲ್‌ಕೆಎಂ 1-4, ಇತರೆ ಪಕ್ಷಗಳು 2 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಹೇಳಿದೆ.
2019ರ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದು ಹೇಮಂತ್ ಸೊರೇನ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತ್ತು. ಇಂದು ಎರಡನೇ ಹಂತದಲ್ಲಿ ಮತದಾನ ನಡೆದ 38 ಕ್ಷೇತ್ರಗಳಲ್ಲಿ 2019ರಲ್ಲಿ ಜೆಎಂಎಂ 13ರಲ್ಲಿ ಗೆದ್ದಿತ್ತು. ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಸಿಪಿಐ(ಎಂಎಲ್)ಎಲ್ ಕ್ರಮವಾಗಿ ಎಂಟು ಮತ್ತು ಒಂದು ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿ 12 ಸ್ಥಾನಗಳನ್ನು ಮಾತ್ರ ಗೆದ್ದಿತ್ತು.
