ಬಿಸಿ ನೀರು ತುಂಬಿಸಿಟ್ಟಿದ್ದ ಬಕೆಟ್‌ಗೆ ಬಿದ್ದು ಐದು ವರ್ಷದ ಬಾಲಕಿ ಬಿದ್ದು ಮೃತಪಟ್ಟಿರುವ ಘಟನೆ ಕಲಬುರಗಿಯ ತಾಜ್ ನಗರದಲ್ಲಿ ಘಟನೆ ನಡೆದಿದೆ.
ತಾಜ್ ನಗರದ ಮುಹಮ್ಮದ್ ಗೌಸ್ ಮತ್ತು ತಾಹೇರ ಬಾನು ದಂಪತಿಯ ಪುತ್ರಿ ಆಫ್ರೀನಾ ಬಾನು (5) ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ನ.12ರಂದು ಸಂಜೆ ಸ್ನಾನ ಮಾಡಲು ಮೃತ ಬಾಲಕಿಯ ತಾಯಿ ಬಕೆಟ್‌ನಲ್ಲಿ ವಾಟರ್ ಹೀಟರ್ ಹಾಕಿ ನೀರು ಬಿಸಿ ಮಾಡಿದ್ದರು. ನೀರು ಬಿಸಿಯಾದ ನಂತರ ವಾಟರ್ ಹೀಟರ್ ಆಫ್ ಮಾಡಿದ್ದರು. ಈ ಸಂದರ್ಭದಲ್ಲಿ ಮೂವರೂ ಮಕ್ಕಳು ಅದೇ ಸ್ಥಳದಲ್ಲೇ ಆಟವಾಡುತ್ತಿದ್ದರು. ಒಳಗೆ ಹೋಗಿ ಬಟ್ಟೆ ತರುವ ವೇಳೆಗೆ ಅಫ್ರೀನಾ ಬಾನು ಬಿಸಿ ನೀರಿನ ಬಕೆಟ್‌ಗೆ ಬಿದ್ದಿದ್ದಳು. ದೇಹದಲ್ಲಿ ಭಾಗಶಃ ಸುಟ್ಟ ಗಾಯಗಳಾಗಿದ್ದರಿಂದ ಕುಟುಂಬಸ್ಥರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಬಳಿಕ ಬಾಲಕಿ ಗುಣಮುಖ ಆಗಿದ್ದಾಳೆ ಎಂದು ಪೋಷಕರು ನ.17 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದರು. ಬಳಿಕ ಪದೇ ಪದೇ ವಾಂತಿ-ಭೇದಿ ಮಾಡಿಕೊಂಡಿದ್ದಳು. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ವಿದಾಯ | ರಾಫಾ… ರಾಫಾ… ರಾಫಾ… ಅಭಿಮಾನಿಗಳ ಕೂಗಿಗೆ ಕಣ್ಣೀರಾದ ನಡಾಲ್
ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.