ಅಡಿಲೇಡ್‌ನಲ್ಲಿ ಇಂದಿನಿಂದ ಭಾರತ – ಆಸ್ಟ್ರೇಲಿಯಾ ಪಿಂಕ್‌ ಬಾಲ್‌ ಟೆಸ್ಟ್

Date:

Advertisements

ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಕ್ರಿಕೆಟ್‌ ಟೆಸ್ಟ್​ ಪಂದ್ಯ ಇಂದಿನಿಂದ ಅಡಿಲೇಡ್‌ನ ಓವಲ್‌ನಲ್ಲಿ ಆರಂಭವಾಗಲಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಗೆದ್ದಿರುವ ಭಾರತ ಇದೀಗ ಪಿಂಕ್‌ ಬಾಲ್‌ ಟೆಸ್ಟ್​ ಮೇಲೆ ಕಣ್ಣಿಟ್ಟಿದ್ದು, ಸರಣಿ ಮುನ್ನಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮೊದಲ ಟೆಸ್ಟ್​ನಿಂದ ಹೊರಗುಳಿದಿದ್ದ ನಾಯಕ ರೋಹಿತ್​ ಶರ್ಮಾ ತಂಡಕ್ಕೆ ವಾಪಸ್​ ಆಗಿದ್ದಾರೆ. ಮತ್ತೊಂದೆಡೆ, ಕೈ ಬೆರಳ ಗಾಯಕ್ಕೆ ತುತ್ತಾಗಿದ್ದ ಶುಭಮನ್​ ಗಿಲ್​ ಕೂಡ ಚೇತರಿಸಿಕೊಂಡು ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದ್ದಾರೆ. ಇದರಿಂದಾಗಿ ಈ ಇಬ್ಬರು ಆಟಗಾರರು ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಮೊದಲ ಪಂದ್ಯವನ್ನಾಡಿದ್ದ ದೇವದತ್​ ಪಡಿಕ್ಕಲ್​ ಮತ್ತು ಧ್ರುವ್​ ಜುರೇಲ್​ 2ನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.

ಜೈಸ್ವಾಲ್​ ಜೊತೆ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದ್ದು, ಇದಕ್ಕೆ ನಾಯಕ ರೋಹಿತ್​ ಶರ್ಮಾ ಉತ್ತರ ನೀಡಿದ್ದಾರೆ. ಅಡಿಲೇಡ್​ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡನೇ ಟೆಸ್ಟ್​ನಲ್ಲಿ ನಾನು ಆರಂಭಿಕನಾಗಿ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

Advertisements

ಪರ್ತ್ ಟೆಸ್ಟ್ ಪಂದ್ಯದಂತೆ ಕೆ.ಎಲ್.ರಾಹುಲ್ ಮತ್ತು ಜೈಸ್ವಾಲ್​ ಆರಂಭಿಕರಾಗಿರಲಿದ್ದಾರೆ. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅಗ್ರ ಕ್ರಮಾಂಕದ ಆಟಗಾರರು ಮಿಂಚಿದರೆ ತಂಡ ಒಳ್ಳೆಯ ಸ್ಕೋರ್​ ಕಲೆಹಾಕಬಹುದು. ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವುದಾಗಿ ರೋಹಿತ್​ ಶರ್ಮಾ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್ | ರಾಹುಲ್ ಆಟಕ್ಕೆ ಹತ್ತು ವರ್ಷ ಮತ್ತು ಪಿಂಕ್ ಬಾಲ್ ಟೆಸ್ಟ್

ಅಡಿಲೇಡ್‌ ಓವಲ್‌ ಭಾರತದ ಪಾಲಿಗೆ ಸೋಲುಗೆಲುವಿನ ಕಣವಾಗಿದೆ. 2001ರಿಂದೀಚೆ ಭಾರತ ಇಲ್ಲಿ ಎರಡು ಟೆಸ್ಟ್‌ಗಳನ್ನು ಗೆದ್ದು ಪ್ರವಾಸಿ ತಂಡಗಳ ಪೈಕಿ ಅತಿ ಹೆಚ್ಚು ಯಶಸ್ಸು ಪಡೆದಿದೆ. ಇದೇ ಅವಧಿಯಲ್ಲಿ ಆಸ್ಟ್ರೇಲಿಯಾ ಇಲ್ಲಿ ಮೂರು ಪಂದ್ಯಗಳನ್ನು ಮಾತ್ರ ಸೋತಿದೆ.

ಭಾರತ ಪಿಂಕ್‌ಬಾಲ್‌ ಟೆಸ್ಟ್‌ಗಳಲ್ಲಿ ಆಡಿದ ನಾಲ್ಕರಲ್ಲಿ ಮೂರು ಗೆದ್ದು ಉತ್ತಮ ಸಾಧನೆ ದಾಖಲಿಸಿದೆ. ಆದರೆ ಆಸ್ಟ್ರೇಲಿಯಾದ ದಾಖಲೆಯೂ ಅದಕ್ಕಿಂತ ಉತ್ತಮವಾಗಿದೆ. 12 ಟೆಸ್ಟ್‌ ಪಂದ್ಯಗಳಲ್ಲಿ 11 ರಲ್ಲಿ ಗೆದ್ದಿದೆ. ಆ ಏಕೈಕ ಸೋಲನ್ನು ಈ ವರ್ಷದ ಜನವರಿಯಲ್ಲಿ ವೆಸ್ಟ್‌ ಇಂಡೀಸ್ ಎದುರು ಅನುಭವಿಸಿತ್ತು. ಭಾರತಕ್ಕೆ ಸ್ವಲ್ಪ ಆತಂಕದ ವಿಷಯವೆಂದರೆ ಅಡಿಲೇಡ್‌ನಲ್ಲಿ ಆಡಿರುವ ಪಿಂಕ್‌ಬಾಲ್‌ ಟೆಸ್ಟ್‌ಗಳಲ್ಲಿ ಆತಿಥೇಯರು ಎಲ್ಲವನ್ನೂ ಗೆದ್ದಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ ರಾಹುಲ್‌ ದ್ರಾವಿಡ್ 2003ರ ಸರಣಿಯಲ್ಲಿ ಅತಿ ಶ್ರೇಷ್ಠ ಇನಿಂಗ್ಸ್‌ (233) ಕಟ್ಟಿದ್ದರು. ಅದೇ ಪಂದ್ಯದಲ್ಲಿ ಅಜೇಯ 72 ರನ್‌ಗಳೊಂದಿಗೆ ಭಾರತ ಗುರಿಯನ್ನು ಬೆನ್ನಟ್ಟುವಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು. ವಿರಾಟ್‌ ಕೊಹ್ಲಿ ಇಲ್ಲಿ ಗಳಿಸಿದ್ದ ಶತಕಗಳು (115 ಮತ್ತು 141) ಭಾರತವನ್ನು ಬಹುತೇಕ ಗೆಲುವಿನ ಹಳಿಗೆ ತಲುಪಿಸಿದ್ದವು.

ಆದರೆ ಇದೇ ಕ್ರೀಡಾಂಗಣದ ಹಗಲು ರಾತ್ರಿ ಟೆಸ್ಟ್‌ನಲ್ಲಿ ಭಾರತಕ್ಕೆ ಹಿಂದೆಂದೂ ಅನುಭವಿಸದ ಮುಖಭಂಗ ಎದುರಾಯಿತು. ಟೆಸ್ಟ್‌ ಇತಿಹಾಸದಲ್ಲೇ ತನ್ನ ಅತಿ ಕಡಿಮೆ ಮೊತ್ತವಾದ 36 ರನ್‌ಗೆ ಉರುಳಿದ್ದು ಇಲ್ಲಿಯೇ. ಆ ಟೆಸ್ಟ್‌ ನಂತರ ಭಾರತ ಅಮೋಘವಾಗಿ ತಿರುಗಿಬಿದ್ದು ಸರಣಿ ಗೆದ್ದಿದ್ದು ಇತಿಹಾಸ.

ಪಂದ್ಯವಾಡುವ ಉಭಯ ತಂಡಗಳು

ಆಸ್ಟ್ರೇಲಿಯಾ ತಂಡ: ಪ್ಯಾಟ್‌ ಕಮಿನ್ಸ್ (ನಾಯಕ), ಉಸ್ಮಾನ್ ಖ್ವಾಜಾ, ನಥಾನ್ ಮೆಕ್‌ಸ್ವೀನಿ, ಟ್ರಾವಿಸ್‌ ಹೆಡ್‌, ಸ್ವೀವ್‌ ಸ್ಮಿತ್‌, ಮಾರ್ನಸ್‌ ಲಾಬುಷೇನ್‌, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್‌), ಮಿಚೆಲ್‌ ಮಾರ್ಷ್‌, ಮಿಚೆಲ್‌ ಸ್ಟಾರ್ಕ್, ಸ್ಕಾಟ್‌ ಬೋಲ್ಯಾಂಡ್‌, ನಥಾನ್ ಲಯನ್.

ಭಾರತ ತಂಡ: ರೋಹಿತ್‌ ಶರ್ಮಾ(ನಾಯಕ), ಜಸ್‌ಪ್ರೀತ್ ಬೂಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್‌, ಕೆ.ಎಲ್‌.ರಾಹುಲ್, ಶುಭಮನ್ ಗಿಲ್‌, ವಿರಾಟ್‌ ಕೊಹ್ಲಿ, ರಿಷಬ್‌ ಪಂತ್‌ (ವಿಕೆಟ್‌ ಕೀಪರ್‌), ವಾಷಿಂಗ್ಟನ್ ಸುಂದರ್‌, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್‌, ಹರ್ಷಿತ್‌ ರಾಣಾ.

ಪಂದ್ಯ ಆರಂಭ: ಬೆಳಿಗ್ಗೆ 9.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

Download Eedina App Android / iOS

X