ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1956ನೇ ಡಿಸೆಂಬರ್ 6ರಂದು ವಿಧಿವಶರಾದಾಗ ಕಾಂಗ್ರೆಸ್ ಪಕ್ಷ ಅವರ ಸಮಾಧಿಗೆ ಜಾಗ ಕೊಡಲಿಲ್ಲ ಎಂದು ಜೆಡಿಎಸ್ ಮುಖಂಡ ವಿರೂಪಾಕ್ಷಪ್ಪ ಹೇಳಿದರು.
ರಾಯಚೂರು ನಗರದ ರಂಗ ಮಂದಿರದಲ್ಲಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ರಾಯಚೂರು ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ 68ನೇ ಮಹಾ ಪರಿನಿಬ್ಬಾಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ 20 ಎಕರೆ ಜಾಗ ನೀಡಿದೆ. ಇಂದಿರಾ ಗಾಂಧಿ, ನೆಹರು ಸೇರಿದಂತೆ ಇನ್ನಿತರ ಎಲ್ಲರ ಸಮಾಧಿಗೂ ಜಾಗವಿದೆ. ಆದರೆ ಅಂಬೇಡ್ಕರ್ ಅವರಿಗೆ ಮಾತ್ರ ಜಾಗ ನೀಡಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅಂಬೇಡ್ಕರ್ ಅವರು ಕೆಳ ಜಾತಿಯಲ್ಲಿ ಹುಟ್ಟಿದ್ದಾರೆಂಬ ಕಾರಣಕ್ಕೆ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಶಾಲೆಯ ಹೊರಗಡೆ, ಕೆಳಗಡೆ ಕೂತುಕೊಂಡು ಪಾಠ ಕೇಳುವ ಸನ್ನಿವೇಶವಿತ್ತು. ವಿದ್ಯುತ್ ಇಲ್ಲದೆ ರಸ್ತೆ ಬದಿಗೆ ಹಾಕಿರುವ ವಿದ್ಯುತ್ ಕಂಬದ ಬೆಳಕಿನಲ್ಲಿ ಹಗಲು ರಾತ್ರಿ ಓದಿ ಸಮಾಜದ ಕತ್ತಲು ನಿವಾರಣೆಗೆ ಬೆಳಕು ಮೂಡಿಸಿದ ಮಹಾನ್ ನಾಯಕ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮಹಾ ಪರಿನಿಬ್ಬಾಣ ದಿನ; ದಲಿತಪರ ಸಂಘಟನೆಗಳಿಂದ ಅಂಬೇಡ್ಕರ್ ನೆನಪು
“ಎಲ್ಲ ದೇಶಕ್ಕಿಂತ ನಮ್ಮ ದೇಶದ ಸಂವಿಧಾನ ಮಹತ್ವವಾಗಿದ್ದು, ಮಿಗಿಲಾಗಿದೆ. ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುವುದರ ಮೂಲಕ ಅವರ ಮತ್ತು ಸಂವಿಧಾನದ ಆಶಯಗಳನ್ನು ಮುಂದಿನ ಪೀಳಿಗೆಗೆ ತೋರಿಸಿಕೊಡಬೇಕು” ಎಂದು ಹೇಳಿದರು.
ಈ ವೇಳೆ ಅಂಬಣ್ಣ ಆರೋಲಿಕರ, ಶಿವುಕುಮಾರ ಮ್ಯಾಗಳಮನಿ, ಖಾಜ ಅಸ್ಲಾಂ, ಎಂ ಆರ್ ಭೇರಿ, ಪ್ರವೀಣ, ಶಾಲಾ ಮಕ್ಕಳು ಸೇರಿದಂತೆ ಇತರರು ಇದ್ದರು.
