ರಾಯಚೂರು | ಹಿಂದಿನ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಸಮಾಧಿಗೆ ಜಾಗ ಕೊಡಲಿಲ್ಲ: ವಿರೂಪಾಕ್ಷಪ್ಪ

Date:

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1956ನೇ ಡಿಸೆಂಬರ್‌ 6ರಂದು ವಿಧಿವಶರಾದಾಗ ಕಾಂಗ್ರೆಸ್ ಪಕ್ಷ ಅವರ ಸಮಾಧಿಗೆ ಜಾಗ ಕೊಡಲಿಲ್ಲ ಎಂದು ಜೆಡಿಎಸ್ ಮುಖಂಡ ವಿರೂಪಾಕ್ಷಪ್ಪ ಹೇಳಿದರು.

- Advertisement -

ರಾಯಚೂರು ನಗರದ ರಂಗ ಮಂದಿರದಲ್ಲಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ರಾಯಚೂರು ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ 68ನೇ ಮಹಾ ಪರಿನಿಬ್ಬಾಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

“ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ 20 ಎಕರೆ ಜಾಗ ನೀಡಿದೆ. ಇಂದಿರಾ ಗಾಂಧಿ, ನೆಹರು ಸೇರಿದಂತೆ ಇನ್ನಿತರ ಎಲ್ಲರ ಸಮಾಧಿಗೂ ಜಾಗವಿದೆ. ಆದರೆ ಅಂಬೇಡ್ಕರ್ ಅವರಿಗೆ ಮಾತ್ರ ಜಾಗ ನೀಡಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಅಂಬೇಡ್ಕರ್ ಅವರು ಕೆಳ ಜಾತಿಯಲ್ಲಿ ಹುಟ್ಟಿದ್ದಾರೆಂಬ ಕಾರಣಕ್ಕೆ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಶಾಲೆಯ ಹೊರಗಡೆ, ಕೆಳಗಡೆ ಕೂತುಕೊಂಡು ಪಾಠ ಕೇಳುವ ಸನ್ನಿವೇಶವಿತ್ತು. ವಿದ್ಯುತ್ ಇಲ್ಲದೆ ರಸ್ತೆ ಬದಿಗೆ ಹಾಕಿರುವ ವಿದ್ಯುತ್ ಕಂಬದ ಬೆಳಕಿನಲ್ಲಿ ಹಗಲು ರಾತ್ರಿ ಓದಿ ಸಮಾಜದ ಕತ್ತಲು ನಿವಾರಣೆಗೆ ಬೆಳಕು ಮೂಡಿಸಿದ ಮಹಾನ್ ನಾಯಕ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ಮಹಾ ಪರಿನಿಬ್ಬಾಣ ದಿನ; ದಲಿತಪರ ಸಂಘಟನೆಗಳಿಂದ ಅಂಬೇಡ್ಕರ್‌ ನೆನಪು

“ಎಲ್ಲ ದೇಶಕ್ಕಿಂತ ನಮ್ಮ ದೇಶದ ಸಂವಿಧಾನ ಮಹತ್ವವಾಗಿದ್ದು, ಮಿಗಿಲಾಗಿದೆ. ಅಂಬೇಡ್ಕರ್‌ ಅವರ ಮಾರ್ಗದಲ್ಲಿ ನಡೆಯುವುದರ ಮೂಲಕ ಅವರ ಮತ್ತು ಸಂವಿಧಾನದ ಆಶಯಗಳನ್ನು ಮುಂದಿನ ಪೀಳಿಗೆಗೆ ತೋರಿಸಿಕೊಡಬೇಕು” ಎಂದು ಹೇಳಿದರು.

ಈ ವೇಳೆ ಅಂಬಣ್ಣ ಆರೋಲಿಕರ, ಶಿವುಕುಮಾರ ಮ್ಯಾಗಳಮನಿ, ಖಾಜ ಅಸ್ಲಾಂ, ಎಂ ಆರ್ ಭೇರಿ, ಪ್ರವೀಣ, ಶಾಲಾ ಮಕ್ಕಳು ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | 422 ಶಾಲಾ ಅಡುಗೆ ಕೋಣೆಗಳ ದುರಸ್ತಿ ಯಾವಾಗ? ಅಧಿಕಾರಿಗಳಿಗೆ ಸಿಇಒ ಗಜಾನನ ಬಾಲೆ ಚಾಟಿ

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ ದುರಸ್ತಿ ಅಗತ್ಯವಿರುವ 422 ಅಡುಗೆ ಕೋಣೆಗಳ ಕಾಮಗಾರಿಗಳನ್ನು...

ಉಡುಪಿ | ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ: ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಪ್ರಾಣಾಪಾಯದಿಂದ ಪಾರು

ವೇಗವಾಗಿ ಬಂದ ಕೆಎಸ್ಆರ್‌ಟಿಸಿ ವೋಲ್ವೋ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ...

ಮುಂಡಗೋಡ | ನೀರು ತುಂಬಲು ಮೋಟಾರ್ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

ಮನೆಯ ಮುಂದಿನ ನಳದಲ್ಲಿ ನೀರು ತುಂಬಲು ಮೋಟಾರ್ ಹಾಕುವಾಗ ವಿದ್ಯುತ್ ಸ್ಪರ್ಶಿಸಿ...

ಹಾವೇರಿ | ಎಸ್ಐಆರ್ ರದ್ದು, ಜ್ಞಾನೇಶಕುಮಾರ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್ ವಿರೋಧಿಸಿ...