ವಿಶ್ವದ ನಾಲ್ಕನೇ ಅತಿದೊಡ್ಡ ರಾಷ್ಟ್ರ ಜರ್ಮನಿಗೆ ಆರ್ಥಿಕ ಹಿಂಜರಿತದ ಆಘಾತ

Date:

Advertisements

ವಿಶ್ವದ ನಾಲ್ಕನೆ ಅತಿದೊಡ್ಡ ಅರ್ಥ ವ್ಯವಸ್ಥೆ ಹೊಂದಿರುವ ಜರ್ಮನಿಯು ತಾನು ಆರ್ಥಿಕ ಹಿಂಜರಿತದಲ್ಲಿರುವುದಾಗಿ ದೃಢಪಡಿಸಿದೆ. ಇದರ ಬೆನ್ನಲ್ಲೇ ಯೂರೋ ಕರೆನ್ಸಿ ಗುರುವಾರ ಕುಸಿತ ದಾಖಲಿಸಿದೆ. ಆದರೆ ಅಮೆರಿಕ ಡಾಲರ್ ಎರಡು ತಿಂಗಳ ಗರಿಷ್ಠ ಮಟ್ಟ ತಲುಪಿದೆ.

ಅಮೆರಿಕ ಸಾಲ ಪಾವತಿಯಲ್ಲಿ ವಿಫಲವಾಗಲಿದೆ ಎಂಬ ಆತಂಕಗಳು ಹೆಚ್ಚಾಗಿದ್ದು, ಸುರಕ್ಷಿತ ತಾಣಗಳತ್ತ ಹೂಡಿಕೆದಾರರು ಗಮನಹರಿಸಿದ್ದರಿಂದ ಈ ಏರಿಕೆ ದಾಖಲಾಗಿದೆ.

ರೇಟಿಂಗ್ ಏಜೆನ್ಸಿ ಫಿಚ್ ಅಮೆರಿಕದ “ಎಎಎ” ಸಾಲದ ರೇಟಿಂಗ್‌ಗಳನ್ನು ಋಣಾತ್ಮಕ ವೀಕ್ಷಣೆಯಲ್ಲಿ ಇರಿಸಿದ್ದು, ಇದರ ಬೆನ್ನಲ್ಲೇ ಹೂಡಿಕೆದಾರರಲ್ಲಿ ಕಳವಳ ಹೆಚ್ಚಾಗಿದ್ದು, ಸುರಕ್ಷಿತ ಹೂಡಿಕೆ ತೊಡಗಿಸುವ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಈ ಕಾರಣದಿಂದ ಹೆಚ್ಚೆಚ್ಚು ಡಾಲರ್‌ ಖರೀದಿಗೆ ಮುಂದಾಗಿದ್ದಾರೆ. ಆದ ಕಾರಣ ಡಾಲರ್‌ ಬೇಡಿಕೆ ಹೆಚ್ಚಾಗಿದೆ.

ಈ ಸುದ್ದಿ ಓದಿದ್ದೀರಾ? ಜಿಂಬಾಬ್ವೆ ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರ: ಭಾರತದ ಸ್ಥಾನ ಎಷ್ಟು ಗೊತ್ತೆ?

Advertisements

ಅಮೆರಿಕದ ಖಜಾನೆಯ ಎಲ್ಲ ಲೆಕ್ಕಪಾವತಿಗಳನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಸಾಲದ ಸೀಲಿಂಗ್ ಮಾತುಕತೆಗಳ ನಿರ್ಣಯಕ್ಕೆ ಕೇವಲ ಒಂದು ವಾರವಷ್ಟೇ ಬಾಕಿ ಉಳಿದಿದೆ.

ಯುರೋಪಿನ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ ಸ್ವಲ್ಪಮಟ್ಟಿಗೆ ಸಂಕುಚಿತಗೊಂಡಿದೆ. ಇದಕ್ಕೂ ಮುನ್ನ 2022ರ ಡಿಸೆಂಬರ್‌ನ ನಾಲ್ಕನೇ ತ್ರೈಮಾಸಿಕದಲ್ಲಿಯೂ ಜರ್ಮನಿ ನಕಾರಾತ್ಮಕ ಬೆಳವಣಿಗೆ ದಾಖಲಿಸಿತ್ತು. ಸತತ ಎರಡು ತ್ರೈಮಾಸಿಕಗಳಲ್ಲಿ ದೇಶದ ಆರ್ಥಿಕತೆ ಕುಸಿತ ಕಂಡಿರುವ ಕಾರಣ ಜರ್ಮನಿ ಅಧಿಕೃತವಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ.

ಆರು ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್‌ನ ಮೌಲ್ಯವನ್ನು ಅಳೆಯುವ ಯುಎಸ್‌ ಡಾಲರ್‌ ಇಂಡೆಕ್ಸ್‌ ಶೇ. 0.3ರಷ್ಟು ಏರಿಕೆ ಕಂಡಿದ್ದು 104.16ಕ್ಕೆ ಏರಿಕೆಯಾಗಿದೆ. ಇದು ಮಾರ್ಚ್‌ 17ರ ನಂತರದ ಗರಿಷ್ಠ ಮಟ್ಟ ಇದಾಗಿದೆ.

ಯೂರೋ ಸುಮಾರು ಶೇ. 0.2ರಷ್ಟು ಕುಸಿತ ಕಂಡಿದ್ದು ಡಾಲರ್‌ ವಿರುದ್ಧದ ಮೌಲ್ಯ 1.0715 ಡಾಲರ್‌ಗೆ ಇಳಿದಿದೆ. ಈ ಮೂಲಕ ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಏಪ್ರಿಲ್ 3ರಂದು ಡಾಲರ್‌ ವಿರುದ್ಧ 1.2332ಕ್ಕೆ ಕುಸಿತ ಕಂಡಿದ್ದ ಇಂಗ್ಲೆಂಡಿನ ಪೌಂಡ್‌ ಸ್ಪರ್ಲಿಂಗ್‌ ಶೇ. 0.1ರಷ್ಟು ಏರಿಕೆ ಕಂಡಿದೆ.

ಜಪಾನ್‌ ಕರೆನ್ಸಿ ಯೆನ್‌ ವಿರುದ್ಧ ಡಾಲರ್‌ ಭಾರೀ ಪ್ರಬಲವಾಗಿದ್ದು 139.705ಕ್ಕೆ ಏರಿಕೆ ಕಂಡಿದೆ. ಇದು ನವೆಂಬರ್‌ 30ರ ನಂತರದ ಗರಿಷ್ಠ ಮಟ್ಟವಾಗಿದೆ. ಆದರೂ ಕೊನೆಯ ವಹಿವಾಟಿನಲ್ಲಿ ಶೇ. 0.1ರಷ್ಟು ಕುಸಿತ ಕಂಡು 139.345ಕ್ಕೆ ಇಳಿಕೆಯಾಗಿದೆ. ಚೀನಾದ ಕರೆನ್ಸಿ ಯುವಾನ್ ಕೂಡ ಆರು ತಿಂಗಳ ಕನಿಷ್ಠ ದಾಖಲಿಸಿದೆ, ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರತಿ ಡಾಲರ್‌ಗೆ 7.0903 ಕ್ಕೆ ಇಳಿಕೆ ಕಂಡಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಡಾಲರ್‌ ಮೌಲ್ಯಗಳು ಕೂಡ ತತ್ತರಿಸಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X