ಜಿಂಬಾಬ್ವೆ ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರ: ಭಾರತದ ಸ್ಥಾನ ಎಷ್ಟು ಗೊತ್ತೆ?

Date:

ವಿಶ್ವದಲ್ಲೇ ಜಿಂಬಾಬ್ವೆ ದೇಶ ಅತ್ಯಂತ ದಟ್ಟದರಿದ್ರ ರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಹ್ಯಾಂಕೆ ಎಂಬ ಸಂಸ್ಥೆ 2022ರ ವಾರ್ಷಿಕ ದಾರಿದ್ರ್ಯ ಸೂಚ್ಯಂಕದ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ 157 ದೇಶಗಳ ಪಟ್ಟಿ ಪ್ರಕಟಿಸಲಾಗಿದೆ.

ಹ್ಯಾಂಕೆ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಜಿಂಬಾಬ್ವೆ ಮೊದಲ ಸ್ಥಾನದಲ್ಲಿದ್ದರೆ, 157ನೇ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್ ಕೊನೆಯ ಸ್ಥಾನದಲ್ಲಿದೆ. ಅಂದರೆ ಸ್ವಿಟ್ಜರ್ಲೆಂಡ್ ಅತೀ ಕಡಿಮೆ ದಾರಿದ್ರ್ಯದ ದೇಶವಾಗಿದೆ. ಇಲ್ಲಿ ಪ್ರಮುಖವಾದ ಸಂಗತಿಯಂದರೆ ವಿಶ್ವದಲ್ಲಿ ಅತ್ಯಂತ ಸಂತೋಷದ ದೇಶವೆಂದು ಪರಿಗಣಿಸಲಾದ ಫಿನ್ಲೆಂಡ್ ದೇಶವು ದರಿದ್ರ ರಾಷ್ಟ್ರಗಳ ಪಟ್ಟಿಯಲ್ಲಿ 109ನೇ ಸ್ಥಾನದಲ್ಲಿದೆ. ಅಂದರೆ ಫಿನ್ಲೆಂಡ್ ಜನರು ದಾರಿದ್ರ್ಯದಲ್ಲೂ ಸಂತೋಷ ಅನುಭವಿಸುತ್ತಾರೆ ಎಂದು ಪಟ್ಟಿ ಮಾಹಿತಿ ನೀಡುತ್ತದೆ.

ವರ್ಷಾಂತ್ಯದಲ್ಲಿನ ನಿರುದ್ಯೋಗ, ಹಣದುಬ್ಬರ ಮತ್ತು ಬ್ಯಾಂಕ್ ಸಾಲ ದರ, ತಲಾವಾರು ಆದಾಯ, ದೇಶದ ಜಿಡಿಪಿ ಮುಂತಾದ ಮಾನದಂಡಗಳನ್ನು ಅನುಸರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹ್ಯಾಂಕೆ ಸಂಸ್ಥೆಯ ಮುಖ್ಯಸ್ಥ ಹಾಗೂ ಅರ್ಥಶಾಸ್ತ್ರಜ್ಞ ಸ್ಟೀವ್ ಹ್ಯಾಂಕೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೇರಳದಲ್ಲಿ ಮೊದಲ ಬಾರಿಗೆ ಮನೆಕೆಲಸಗಾರರ ಹಕ್ಕುಗಳ ರಕ್ಷಣೆಗಾಗಿ ಮಸೂದೆ

ಜಿಂಬಾಬ್ವೆಯಲ್ಲಿ ಹಣದುಬ್ಬರ ಶೇ. 243.8ರಷ್ಟು ಇದ್ದು, ಅಲ್ಲಿನ ಬಡ್ಡಿ ದರ ಶೇ. 131.8ರಷ್ಟು ಇದೆ. ಜಿಂಬಾಬ್ವೆ ನಂತರದ ದಟ್ಟದರಿದ್ರ ಪಟ್ಟಿ ಹೊಂದಿರುವ ಮೊದಲ 15 ರಾಷ್ಟ್ರಗಳೆಂದರೆ ವೆನಿಜ್ಯುವೆಲಾ, ಸಿರಿಯಾ, ಲೆಬನಾನ್, ಸೂಡಾನ್, ಅರ್ಜೆಂಟೀನಾ, ಯೆಮೆನ್, ಉಕ್ರೇನ್, ಕ್ಯೂಬಾ, ಟರ್ಕಿ, ಶ್ರೀಲಂಕಾ, ಹೈಟಿ, ಆಂಗೋಲ, ಟೋಂಗಾ, ಘಾನಾ.

ದಾರಿದ್ರ್ಯದ ರಾಷ್ಟ್ರಗಳ 157 ದೇಶಗಳ ಪೈಕಿ ಭಾರತದ ಸ್ಥಾನ 103. ಭಾರತದ ದಾರಿದ್ರ್ಯಕ್ಕೆ ಪ್ರಮುಖ ಕಾರಣವಾಗಿರುವುದು ನಿರುದ್ಯೋಗ ಎಂದು ಹ್ಯಾಂಕೆ ಹೆಸರಿಸಿದೆ. ಪ್ರಸ್ತುತ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನೊಂದಿಗೆ ಪರದಾಟ ನಡೆಸುತ್ತಿರುವ ಪಾಕಿಸ್ತಾನವು ವಿಶ್ವದ ಅತ್ಯಂತ ದಟ್ಟದರಿದ್ರ ರಾಷ್ಟ್ರಗಳ ಪಟ್ಟಿಯಲ್ಲಿ 35 ನೇ ಸ್ಥಾನದಲ್ಲಿದೆ.

ಅತೀ ಕಡಿಮೆ ದರಿದ್ರ ದೇಶಗಳ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್ (157) ಕುವೈತ್ (156), ಐರ್ಲೆಂಡ್ (155), ಜಪಾನ್ (154), ಮಲೇಷ್ಯಾ (153), ತೈವಾನ್ (152), ನೈಜರ್ (151), ಥಾಯ್ಲೆಂಡ್ (150), ಟೋಗೋ (149), ಮಾಲ್ಟಾ (148) ಒಳಗೊಂಡಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತ್ಯೇಕ ಬಜೆಟ್‌ ಮಂಡನೆ ಪದ್ಧತಿ ಸ್ಥಗಿತಗೊಳಿಸಿ ಬಿಜೆಪಿ ರೈಲ್ವೆ ವ್ಯವಸ್ಥೆ ನಾಶಗೊಳಿಸಿದೆ: ಮಮತಾ ಬ್ಯಾನರ್ಜಿ ಟೀಕೆ

ಕೋಲ್ಕತ್ತದಲ್ಲಿ ಸುದ್ದಿಗಾರರ ಜೊತೆ ಮಮತಾ ಬ್ಯಾನರ್ಜಿ ಮಾತು 2017ರಲ್ಲಿ ಕೇಂದ್ರ ಬಜೆಟ್‌ ಜೊತೆ...

ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ಕೇಳಿದ್ದಕ್ಕೆ ಗುಜರಾತ್‌ ಹೈ ನ್ಯಾಯಾಧೀಶರು `ಮನುಸ್ಮೃತಿ ಓದಿ’ ಎಂದರು!

ಅಪ್ರಾಪ್ತೆ ಮೇಲೆ ಅತ್ಯಾಚಾರವಾಗಿ 7 ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತ ಮಾಡಬಹುದೇ...

ಒಡಿಶಾ | ದುರ್ಗ್-ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ; ತಪ್ಪಿದ ಪ್ರಾಣಹಾನಿ

ಒಡಿಶಾ ರಾಜ್ಯದ ನುವಾಪಾದ ಜಿಲ್ಲೆಯಲ್ಲಿ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ ಬಾಲಾಸೋರ್‌ನಲ್ಲಿ ತ್ರಿವಳಿ...

ಕೇರಳ | ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ತಂದೆ

ಆರು ವರ್ಷದ ಬಾಲಕಿಯನ್ನು ಸ್ವತಃ ತಂದೆಯೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ...