2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ ಸಿನಿಮಾವಾಗಿ ಆಯ್ಕೆಯಾಗಿದ್ದ ‘ಲಾಪತಾ ಲೇಡೀಸ್’ 97ನೇ ಆಸ್ಕರ್ ರೇಸ್ನಿಂದ ಹೊರಗುಳಿದಿದೆ.
ಕಿರಣ್ ರಾವ್ ಅವರ ನಿರ್ದೇಶನದ ಈ ಸಿನಿಮಾವನ್ನು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ (ಎಫ್ಎಫ್ಐ) ಆಸ್ಕರ್ 2025ಕ್ಕೆ ಆಯ್ಕೆ ಮಾಡಿತ್ತು. ಆದರೆ 15 ಸಿನಿಮಾಗಳ ಪಟ್ಟಿಯಲ್ಲಿ ಲಾಪತಾ ಲೇಡೀಸ್ ಭಾಗವಾಗಿಲ್ಲ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (ಎಎಂಪಿಎಎಸ್) ಬುಧವಾರ ಬೆಳಿಗ್ಗೆ ಪ್ರಕಟಿಸಿದೆ.
ಇದನ್ನು ಓದಿದ್ದೀರಾ? ಆಸ್ಕರ್ 2025 | ಭಾರತವನ್ನು ಪ್ರತಿನಿಧಿಸಲಿದೆ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’
ಆದರೆ ಬ್ರಿಟಿಷ್ – ಭಾರತೀಯ ನಿರ್ದೇಶಕಿ ಸಂಧ್ಯಾ ಸೂರಿ ಅವರ ‘ಸಂತೋಷ್’ ಸಿನಿಮಾ ಆಸ್ಕರ್ ರೇಸ್ನಲ್ಲಿ ಉಳಿದಿದೆ. ಯುಕೆಯನ್ನು ಪ್ರತಿನಿಧಿಸುವ ಈ ಸಿನಿಮಾದಲ್ಲಿ ಭಾರತೀಯ ನಟಿಯರಾದ ಶಹಾನಾ ಗೋಸ್ವಾಮಿ ಮತ್ತು ಸುನೀತಾ ರಾಜ್ವಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಎಮಿಲಿಯಾ ಪೆರೆಜ್ (ಫ್ರಾನ್ಸ್), ಐಯಾಮ್ ಸ್ಟಿಲ್ ಹಿಯರ್ (ಬ್ರೆಜಿಲ್), ಯೂನಿವರ್ಸಲ್ ಲಾಂಗ್ವೇಜ್ (ಕೆನಡಾ), ವೇವ್ಸ್ (ಜೆಕ್ ರಿಪಬ್ಲಿಕ್), ದಿ ಗರ್ಲ್ ವಿತ್ ದಿ ನೀಡಲ್ (ಡೆನ್ಮಾರ್ಕ್) ಮತ್ತು ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್ ಫ್ರಂ (ಜರ್ಮನಿ) ಕೂಡಾ ಸ್ಪರ್ಧೆಯಲ್ಲಿದೆ.
STORY | India's official entry 'Laapataa Ladies' out of Oscars 2025 race
— Press Trust of India (@PTI_News) December 17, 2024
READ: https://t.co/GUl4WitXcL pic.twitter.com/ELWoNSWpor
ಟಚ್ (ಐಸ್ಲ್ಯಾಂಡ್), ನೀಕ್ಯಾಪ್ (ಐರ್ಲೆಂಡ್), ವರ್ಮಿಗ್ಲಿಯೊ (ಇಟಲಿ), ಫ್ಲೋ (ಲಾಟ್ವಿಯಾ), ಅರ್ಮಾಂಡ್ (ನಾರ್ವೆ), ಫ್ರಮ್ ಗ್ರೌಂಡ್ ಝೀರೋ (ಪ್ಯಾಲೇಸ್ತೀನ್), ದಾಹೋಮಿ (ಸೆನೆಗಲ್) ಮತ್ತು ಹೌ ಟು ಮೇಕ್ ಮಿಲಿಯನ್ಸ್ ಬಿಫೋರ್ ಗ್ರಾಡ್ಮಾ ಡೈಸ್ (ಥೈಲ್ಯಾಂಡ್) ಕೂಡಾ ಆಸ್ಕರ್ ಸ್ಪರ್ಧೆಯಲ್ಲಿದೆ.
