ವಿಕೃತ ಕಾಮಿಯೋರ್ವ ಸುಮಾರು 10 ವರ್ಷದ ಬಾಲಕಿಯ ಅತ್ಯಾಚಾರ ಮಾಡಿ, ಆಕೆಯ ಜನನಾಂಗಕ್ಕೆ ರಾಡ್ ತುರುಕಿಸಿರುವ ಘಟನೆ ಗುಜರಾತ್‌ನ ಭರೂಚ್‌ನಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ 36 ವರ್ಷದ ವಿಜಯ್ ಪಾಸ್ವಾನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆತ ಬಾಲಕಿಯನ್ನು ಆಕೆಯ ಮನೆಯ ಬಳಿ ಅಪಹರಿಸಿ ಬಳಿಕ ಭರೂಚ್‌ನ ಜಗಡಿಯಾ ಕೈಗಾರಿಕಾ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ತಮಿಳು ಚಿತ್ರನಿರ್ದೇಶಕ ನನ್ನ ಜನನಾಂಗಕ್ಕೆ ‘ರಾಡ್’ ತುರುಕಿಸಿದ್ದರು : ನಟಿ ಸೌಮ್ಯ ಗಂಭೀರ ಆರೋಪ
ಬಾಲಕಿಯ ಮನೆಯ ಪಕ್ಕದಲ್ಲೇ ಆರೋಪಿ ವಾಸಿಸುತ್ತಿದ್ದು, ಆಕೆಯ ತಂದೆಯೊಂದಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಾಲಕಿಯ ಗುಪ್ತಾಗದಲ್ಲಿ ಗಂಭೀರ ಗಾಯಗಳಿವೆ ಎಂದು ವರದಿಯಾಗಿದೆ.
ಆಕೆಯನ್ನು ಭರೂಚ್‌ನ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಗಿದೆ. ಆದರೆ ತೀವ್ರ ಗಾಯಗಳಿರುವುದರಿಂದಾಗಿ ಆಕೆಯ ಸ್ಥಿತಿ ಹದಗೆಟ್ಟಿದೆ. ತಕ್ಷಣ ಆಕೆಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಳಿಕ ಆಕೆಯನ್ನು ವಡೋದರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ; ಯುಪಿ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್
ಈ ವಿಕೃತ ಕಾಮಿ ಬಾಲಕಿಯ ಜನನಾಂಗಕ್ಕೆ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಚಾವ್ಡಾ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಉಪಾಧೀಕ್ಷಕ ಕುಶಾಲ್ ಓಜಾ, “ಆರೋಪಿ ಬಾಲಕಿಯನ್ನು ಅಪಹರಿಸಿ ಪೊದೆಗೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಬಾಲಕಿ ತಾಯಿ ಆಕೆಯ ಕೂಗು ಕೇಳಿದಾಗ ಆಕೆ ಪೊದೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ” ಎಂದು ತಿಳಿಸಿದ್ದಾರೆ.
