ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವನ್ನಪ್ಪಿದ್ದಾರೆ. ಶಂಕರ್ ಚವ್ಹಾಣ್ (29) ಮೃತ ಅಯ್ಯಪ್ಪ ಮಾಲಾಧಾರಿಯಾಗಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇನ್ನೂ ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದೆ.
ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದ ಶಂಕರ್ ಚವ್ಹಾಣ್, ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 13 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶಂಕರ್ ಚವ್ಹಾಣ್ ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆರೈಕೆಯಲ್ಲಿ ಬೆಳೆದಿದ್ದರು.
ಶಂಕರ್ ಚವ್ಹಾಣ್ ಮೊದಲ ಬಾರಿ ಅಯ್ಯಪ್ಪನ ಮಾಲೆ ಧರಿಸಿದ್ದರು. ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 22ರಂದು ರಾತ್ರಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಒಟ್ಟು 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಮಂದಿಯಲ್ಲಿ ಐವರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ಶಂಕರ್ ಚವ್ಹಾಣ್ (29) ಮೃತ ದುರ್ದೈವಿಗಳು. ಇನ್ನುಳಿದ ನಾಲ್ವರು ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಮೃತರಾದ ನಿಜಲಿಂಗಪ್ಪ ಬೇಪುರಿಯ ದೇಹ ಶೇ.86 ರಷ್ಟು, ಸಂಜಯ್ ಸವದತ್ತಿಯ ದೇಹ ಶೇ.80 ರಷ್ಟು, ರಾಜು ಮೂಗೇರಿಯ ದೇಹ ಶೇ.74 ರಷ್ಟು, ಲಿಂಗಾರಾಜು ಬೀರನೂರ ದೇಹ ಶೇ.86 ರಷ್ಟು, ಶಂಕರ್ ಚವ್ಹಾಣ್ ದೇಹ ಶೇ.99 ರಷ್ಟು ಸುಟ್ಟಿತ್ತು.
ಇನ್ನು, ಚಿಂತಾಜನಕ ಸ್ಥಿತಿಯಲ್ಲಿರುವ ಮಂಜುನಾಥ್ ವಾಗ್ಮೋಡೆಯ ದೇಹ ಶೇ.70 ರಷ್ಟು, ಪ್ರಕಾಶ್ ಬಾರಕೇರ್ ದೇಹ ಶೇ91 ರಷ್ಟು, ತೇಜಸ್ವರ್ ಸಾತರೆಯ ದೇಹ ಶೇ.74 ರಷ್ಟು ಸುಟ್ಟಿದೆ. ವಿನಾಯಕ್ ಭಾರಕೇರ್ ದೇಹ ಶೇ.25 ರಷ್ಟು ಸುಟ್ಟಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಸಚಿವ ಸಂತೋಷ ಲಾಡ್ ಈಗಾಗಲೇ ಘೋಷಣೆ ಮಾಡಿದ್ದಾರೆ.
ಮಕ್ಕಳೆ ದೇವರು ಎನ್ನುತ್ತಾರೆ. ಸಣ್ಣ ಮಕ್ಕಳಿಗೆ ದೇವರ ಅವಶ್ಯಕತೆ ಇದೇಯಾ. ಈಗ ನೋಡಿ ಅಯಪ್ಪ ಸ್ವಾಮಿಯ ಒಂಬತ್ತು ಮಾಲಾಧಾರಿಗಳಲ್ಲಿ 5 ನೇ ತರಗತಿಯ ಹನ್ನೊಂದು ವರ್ಷದ ವಿಧ್ಯಾರ್ಥಿ ಬೆಂಕಿ ಅವಗಡದಲ್ಲಿ ಇದ್ದಾನೆ. ಇವುಗಳನ್ನೆಲ್ಲ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಸಣ್ಣ ಮಕ್ಕಳಿಗೆ ದೇವರ ಹೆಸರಲ್ಲಿ ಮೌಡ್ಯತೆ ತುಂಬಿ ಆಚರಣೆ ಮಾಡಿಸುವುದು ಬಿಟ್ಟು ಒಳ್ಳೆ ಶಿಕ್ಷಣ ಕೋಡಿಸಿ. ವೖಜ್ಞಾನಿಕ ಮನೋಭಾವ ಬೇಳಿಸಿ. ಮಕ್ಕಳಿಗೆ ದೇವರ ಬಗ್ಗೆ ಭಯ ಭಕ್ತಿ ಇರಲಿ ಆದರೆ ಕೆಲವು ಆಚರಣೆಗಳು ಮಕ್ಕಳಿಗೆ ಮಾರಕವಾಗದೀರಲಿ. ಕಟೀನ ವೃತ ಮಾಡಿಸುವುದು. ಕೆಂಡ ಸೇವೆ. ತಣ್ಣಿರ ಸ್ನಾನ. ಕಾಲ್ನಡಿಗೆ. ಕಾದ ಏಣ್ಣೆಯಲ್ಲಿ ಕೖ ಎದ್ದೀಸುವುದು. ಇದೇಲ್ಲವು ಮಕ್ಕಳ ದೌರ್ಜನ್ಯ ಕಾಯದೆಯಡಿ ಬರುತ್ತವೆ. ಹಿಂತವುಗಳನ್ನು ಪ್ರೇರಿಪಿಸುವವರು ಹಾಗೂ ಇವುಗಳಿಗೆ ಸಮ್ಮತಿಸುವವರ ವಿರುಧ್ಧ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ. ಇನ್ನಾದರೂ ಪಾರಕರು ತಮ್ಮ ಮಕ್ಕಳಿಗೆ ಒಳ್ಳಯ ಶಿಕ್ಷಣದ ಜೊತೆಗೆ ಉತ್ತಮ ಮಾರ್ಗದರ್ಶನ ನೀಡಿ. ವೖಚಾರಿಕತೆ ಪ್ರಾಮಾಣಿಕತೆ ವಿಮರ್ಶಾ ಮನೋಭಾವ ಯೋಗ ಧ್ಯಾನಗಳಂತಹ ಉತ್ತಮ ಮಾರ್ಗದರ್ಶನ ಜೊತೆಗೆ ಅವರಿಗೆ ಇಷ್ಟವಿರುವ ವಿಷಯಗಳ ಬಗ್ಗೆ ಪ್ರೊತ್ಸಾಹಿಸಿದರೆ. ಇದಕಿಂತ ದೇವರ ಆಶಿರ್ವಾದ ಯಾವದಿದೆ ಹೇಳಿ. ನಮ್ಮ ಮಕ್ಕಳಿಗೆ ನಾವೆ ದೇವರಾಗೋಣ. ನಮ್ಮ ಮಕ್ಕಳೆ ದೇವರು ಎಂದು ತಿಳಿಯೋಣ. ಶಿಕ್ಷಣವೆ ಶಕ್ತಿ. ✍️🙏❤️💐