ಗುಂಪು ಹಲ್ಲೆಯಲ್ಲಿ ಓರ್ವ ಯುವಕನಿಗೆ ಚಾಕುವಿನಿಂದ ಇರಿದ ಪರಿಣಾಮ 19 ವರ್ಷದ ಸಮೀರ್ ಶೇಖ್ ಎಂಬ ಯುವಕನು ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕಳೆದ ಸೋಮವಾರ ಮಕ್ಕಳ ಜಗಳ ತಾರಕಕ್ಕೇರಿದ ಪರಿಣಾಮ ಸಮೀರ್ ಮತ್ತು ಆತನ ಚಿಕ್ಕಪ್ಪ ಜಾವೀದ್ ಮೇಲೆ ಸ್ಥಳೀಯ ಯುವಕರು ಮುಗಿಬಿದ್ದು, ಚಾಕುವಿನಿಂದ ಇರಿದಿರುವ ಘಟನೆ ಹಳೆ ಹುಬ್ಬಳ್ಳಿಯ ಗೋಡ್ಕೆ ಪ್ಲಾಟ್ ನಲ್ಲಿ ನಡೆದಿದ್ದು, ಹಲ್ಲೆಗೊಳಗಾಗಿದ್ದ ಜಾವೀದ್ ಮತ್ತು ಸಮೀರ್ ಇಬ್ಬರನ್ನೂ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಜ. 1ರಂದು ಸಮೀರ್ ಸಾವೀಗಿಡಾಗಿದ್ದಾನೆ.
ಓಣಿಯಲ್ಲಿ ಸಣ್ಣ ಮಕ್ಕಳು ಜಗಳವಾಡಿದ್ದು, ಸಮೀರ್ ಜಗಳವಾಡುತ್ತಾನೆ. ಮನೆಯ ಮಹಿಳೆಯರೊಂದಿಗೆ ಜಗಳ ತೆಗೆಯಲು ಬಂದಿದ್ದೀರಿ ಎಂದು ಯುವಕರೆಲ್ಲ ಸೇರಿ ಸಮೀರ್ ಮತ್ತು ಜಾವೀದ್ ಇಬ್ಬರನ್ನು ಬೆನ್ನುಹತ್ತಿ ಚಾಕುವಿನಿಂದ ಇರಿದಿದ್ದಾರೆ. ಸಮೀರ್ ಸಾವಿಗೀಡಾಗಿದ್ದು, ಆತನ ಚಿಕ್ಕಪ್ಪ ಜಾವೀದ್ ಸದ್ಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಳೆಹುಬ್ಬಳ್ಳಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಈ ಮೊದಲು ಎರಡು ಕುಟುಂಬಗಳ ನಡುವೆ ಹಳೆ ವೈಷಮ್ಯವಿದ್ದು, ಆ ಕ್ಷುಲ್ಲಕ ಕಾರಣವಾನ್ನಿಟ್ಟುಕೊಂಡು ಸಮೀರ್ ಮೇಲೆ ಮುಗಿಬಿದ್ದು, ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ವರದಿ ಓದಿದ್ದೀರಾ? ರಾಯಚೂರು ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ, ನವಜಾತ ಶಿಶು ಸಾವು
ಹಲ್ಲೆ ಮಾಡಿದ ಗುಂಪಿನಲ್ಲಿ 15ಜನರಿದ್ದು, ಆರೋಪಿಗಳ ಪೈಕಿ ಇದುವರೆಗೂ 7 ಜನರನ್ನು ಬಂಧಿಸಲಾಗಿದ್ದು, ಈ ಕುರಿತ ಆರೋಪಿ ಮುಜಾಮಿಲ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಮತ್ತು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.