ಪಿತ್ತಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ ಅವರು ಗುಣಮುಖರಾಗಿದ್ದಾರೆಂದು ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
“ಪಿತ್ತಕೋಶ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಕುರಿತು ವೈದ್ಯ ಡಾ.ಮುರುಗೇಶ್ ಅವರಿಂದ ವಿಷಯ ತಿಳಿದ ಕೂಡಲೇ ಈ ಮೊದಲು ಸಚಿವ ಮಧು ಬಂಗಾರಪ್ಪ ವಿಡಿಯೋವನ್ನು ಹರಿಬಿಟ್ಟಿದ್ದರು. ಇದೀಗ ನಟನ ಪತ್ನಿ ಗೀತಾ ಶಿವರಾಜ್‌ಕುಮಾರ್ ವಿಡಿಯೋ ಬಿಡುಗಡೆ ಮಾಡಿದ್ದು, ʼಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶೀಘ್ರದಲ್ಲಿಯೇ ಅವರು ನಿಮ್ಮೊಂದಿಗೆ ಇರಲಿದ್ದೇವೆ” ಎಂದು ಮತ್ತೊಂದು ವಿಡಿಯೋ ಹರಿ ಬಿಟ್ಟಿದ್ದಾರೆ. ಇದರಿಂದ ಅಭಿಮಾನಿಗಳ ಭಯ ಹೋಗಲಾಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ನನ್ನ ಸೇವೆ ತೃಪ್ತಿದಾಯಕವಾಗಿದೆ: ಡಾ. ಎನ್.ಎಮ್.ಮಕಾಂದಾರ
ಅಭಿಮಾನಿಗಳ ಪ್ರಾರ್ಥನೆಯಿಂದಾಗಿ ಎಲ್ಲ ಮೆಡಿಕಲ್ ವರದಿಗಳು ಕ್ಯಾನ್ಸರ್ ಮುಕ್ತವೆಂದು ಸಾಬೀತಾಗಿವೆಯೆಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಶಿವಣ್ಣನವರೂ ಕೂಡಾ ತಮ್ಮ ಅಭಿಮಾನಿಗಳು, ಸಂಬಂಧಿಕರು, ಆತ್ಮೀಯರ ಪ್ರೀತಿಗೆ ಚಿರಋಣಿ ಎಂದಿದ್ದಾರೆ.