ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಾರ್ಮಿಕ ನಿರೀಕ್ಷಕರು, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಮಕ್ಕಳ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತೆ 15 ಮಕ್ಕಳ ರಕ್ಷಣೆ ಮಾಡಿದ್ದಾರೆ.
ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗೆ ಕರೆದೊಯ್ಯುತ್ತಿದ್ದ 5 ಸರಕು ಸಾಗಣೆ ವಾಹನಗಳನ್ನು ಜನವರಿ 17ರಂದು ಜಪ್ತಿ ಮಾಡಿ ವಾಹನಗಳಲ್ಲಿದ್ದ 15 ಮಂದಿ ಮಕ್ಕಳನ್ನು ರಕ್ಷಿಸಿ ಸಂಬಂಧಪಟ್ಟ ಶಾಲೆಗಳಲ್ಲಿ ಪುನಃ ದಾಖಲು ಮಾಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಸೂಚಿಸಲಾಗಿದೆ.
ಮಾಲೀಕರು, ಚಾಲಕರ ಮೇಲೆ ಕ್ರಮ: ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ವಾಹನ ಮಾಲೀಕರು ಮತ್ತು ಚಾಲಕರ ವಿರುದ್ಧ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೋ-ಆಪರೇಟಿವ್ ಸೊಸೈಟಿ ಚುನಾವಣೆ; ಎಸ್‌ಸಿ ಮೀಸಲು ಅಭ್ಯರ್ಥಿಯಾಗಿ ಶಿವಕುಮಾರ್ ಸಿ ಸ್ಪರ್ಧೆ
ಕಾರ್ಯಾಚರಣೆಯಲ್ಲಿ ಕಾರ್ಮಿಕ ನಿರೀಕ್ಷಕ ಮಲ್ಲಪ್ಪ, ರಾಯಚೂರು ಮೋಟಾರ್ ವಾಹನ ನಿರೀಕ್ಷಕ ರಾಕೇಶ್ ಎಂ, ಟ್ರಾಫಿಕ್ ಪೊಲೀಸ್ ಠಾಣೆ ಪಿಎಸ್ಐ ನಾರಾಯಣ, ಇಸಿಒ ರಾಜನಗೌಡ, ಬಿಆರ್‌ಪಿ ಮನೋಹರ ಶಾಸ್ತ್ರಿ, ಸಿಆರ್‌ಪಿಗಳಾದ ದಾಕ್ಷಾಯಿಣಿ, ಬಸವರಾಜ ಸಾತಾಲ್, ಮಹಾದೇವ, ವೆಂಕಟಾಂಜನೇಯ, ರಘು ಎನ್, ಬಿ ಎಸ್ ಕೇಶಾಪೂರ, ಟ್ರಾಫಿಕ್ ಪೊಲೀಸ್ ಠಾಣೆ ಸಿಬ್ಬಂದಿ ರಾಜಾಸಾಬ್, ಸಂಗಪ್ಪ ಹಾಗೂ ಹುಸೇನ್ ನಾಯ್ಕ ಅಕೌಂಟೆಂಟ್ ಇದ್ದರು.
