ಬೀದರ್‌ | ಪಶು ಮೇಳ: ಬೆರಗುಗೊಳಿಸಿದ 90 ಕೆಜಿ ತೂಕದ ಮೇಕೆ, ₹9 ಲಕ್ಷದ ಗಿರ್‌ ತಳಿ ಎತ್ತು

Date:

ಬೀದರ್‌ ತಾಲ್ಲೂಕಿನ ಕಮಠಾಣ ರಸ್ತೆಯಲ್ಲಿರುವ ಪಶು ವಿವೇಕ ಕ್ರೀಡಾಂಗಣದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಜಾನುವಾರು, ಕುಕ್ಕುಟ ಮತ್ತು ಮತ್ಸ್ಯಮೇಳ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶುಕ್ರವಾರ ಚಾಲನೆ ನೀಡಿದರು.

- Advertisement -

ರಾಜ್ಯಮಟ್ಟದ ಬೃಹತ್ ಪಶು ಮೇಳದಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಚಿಕ್ಕಬಳ್ಳಾರಿ ಗ್ರಾಮದ ಪ್ರಗತಿಪರ ರೈತ ಶ್ರೀನಿವಾಸರಾಜು ಅವರು ರೈತರಿಗೆ ಹೊಸ ತಳಿಯ ಎತ್ತು ಪರಿಚಯಿಸಲು ತಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ರೈತ ಶ್ರೀನಿವಾಸರಾಜು ಅವರ ಪ್ರದರ್ಶನಕ್ಕೆ ತಂದಿರುವ ₹9 ಲಕ್ಷ ಮೌಲ್ಯದ ಗುಜರಾತಿನ ಗಿರ್‌ ತಳಿಯ ಏಳು ವರ್ಷದ ಎತ್ತಿನ ಬೆಲೆ ಕೇಳಿ ಜನ ಹೌಹಾರುತ್ತಿದ್ದಾರೆ.

WhatsApp Image 2025 01 18 at 12.02.01 PM
9 ಲಕ್ಷ ಮೌಲ್ಯದ ಗಿರ್‌ ತಳಿಯ ಎತ್ತು

ಪ್ರಗತಿಪರ ರೈತ ಶ್ರೀನಿವಾಸರಾಜು ತಮ್ಮ 50ಕ್ಕೂ ಹೆಚ್ಚಿನ ಎಕರೆ ಜಮೀನಿನಲ್ಲಿ ಕೃಷಿಯ ಜತೆಗೆ ಜಾನುವಾರು ಸಾಕಣೆ ಮಾಡುತ್ತಿದ್ದಾರೆ. ಅಪರೂಪದ ತಳಿಗಳನ್ನು ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಎತ್ತು ವಯಸ್ಸಿನಲ್ಲಿ ಚಿಕ್ಕದಾಗಿದ್ದರೂ ಆಗಲೇ ಒಂದು ಟನ್‌ ಭಾರ ಹೊರುವ ಸಾಮರ್ಥ್ಯ ಇದೆ. ಈ ಬೆಲೆಬಾಳುವ ಎತ್ತು ಕೆಲ ತಿಂಗಳ ಹಿಂದೆ ರಾಯಚೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶಿಸಿದ್ದರು.

WhatsApp Image 2025 01 18 at 12.05.14 PM

ಬೃಹದಾಕಾರದ ಜಾನುವಾರುಗಳನ್ನು ಜನ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಇವುಗಳ ಬೆಲೆ ಕೇಳಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ. ಮೇಳ ವೀಕ್ಷಣೆಗೆ ಬಂದ ವಿದ್ಯಾರ್ಥಿಗಳು, ರೈತರು ಅದರ ಮುಂದೆ ನಿಂತುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

₹3 ಲಕ್ಷದ ಜಾಫ್ರಾಬಾದಿ ಎಮ್ಮೆ :

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಪ್ರಗತಿಪರ ರೈತರೊಬ್ಬರು ಪ್ರದರ್ಶನಕ್ಕೆ ತಂದಿರುವ ಜಾಫ್ರಾಬಾದಿ ಎಮ್ಮೆ ಗಮನ ಸೆಳೆಯುತ್ತಿದೆ. ₹3 ಲಕ್ಷ ಮೌಲ್ಯದ ಈ ಎಮ್ಮೆ ದಿನಕ್ಕೆ 22 ಲೀಟರ್‌ ಹಾಲು ಕೊಡುತ್ತದೆ ಎಂದು ರೈತ ವಿವರಿಸಿದರು.

90 ಕೆಜಿ ತೂಕದ ಮೇಕೆ ಬೆಲೆ ₹1.20 ಲಕ್ಷ :

ಬೀದರ್‌ ತಾಲ್ಲೂಕಿನ ಮರಖಲ ಗ್ರಾಮದ ರೈತ ಅಜರೋದ್ದಿನ್‌ ಎಂಬುವವರು ಪಶು ಮೇಳದಲ್ಲಿ ಪ್ರದರ್ಶನಕ್ಕೆ ತಂದಿರುವ ರಾಜಸ್ಥಾನ ಮೂಲದ ಕೋಟಾ ತಳಿಯ ಗಂಡು ಮೇಕೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ಈ ಮೇಕೆ ಮೂರು ತಿಂಗಳ ಮರಿ ಇರುವಾಗ ರಾಜಸ್ಥಾನದಿಂದ 18 ಸಾವಿರಕ್ಕೆ ಖರೀದಿಸಿದ್ದೇನೆ. ಆವಾಗ 12ಕೆಜಿ ತೂಕ ಇತ್ತು. ಈಗ ಎರಡೂವರೆ ವರ್ಷದ ಈ ಮೇಕೆ 90 ಕೆಜಿ ತೂಕವಿದೆ. ಇದರ ಬೆಲೆ ₹1.20 ಲಕ್ಷ ಇದೆ ಎಂದು ರೈತ ಅಜರೋದ್ದಿನ್‌ ಹೇಳುತ್ತಾರೆ.

ʼಈ ತಳಿಯ ಮೇಕೆಯನ್ನು ಹೈದರಾಬಾದ್‌, ಮುಂಬಯಿ ಕಡೆ ಹೆಚ್ಚಿನ ಜನ ಇಷ್ಟಪಡುತ್ತಾರೆ. ಇದರ ತೂಕಗಿಂತ ಇದರ ರೂಪವೇ ಬಹಳಷ್ಟು ಜನರನ್ನು ಆಕರ್ಷಿಸುತ್ತಿದೆ. ಈ ಹಿಂದೆ ಬೀದರ್‌ ಉತ್ಸವ ಸಂದರ್ಭದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು’ ಎಂದರು.

‘ಕಳೆದ ಬಕ್ರಿದ್‌ ವೇಳೆ ಬೀದರ್‌ನಲ್ಲಿ 90 ಸಾವಿರಕ್ಕೆ ಕೇಳಿದ್ರು, ಕೊಡಲಿಲ್ಲ. ಮುಂದಿನ ಬಕ್ರಿದ್‌ಗೆ ಮಾರಾಟ ಮಾಡಲಾಗುವುದುʼ ಎಂದು ತಿಳಿಸಿದ್ದಾರೆ.

ಕಣ್ಮನ ಸೆಳೆದ ಪುಂಗನೂರ್‌ ಹಸು :

ಹಸುಗಳಲ್ಲಿಯೇ ಅತಿ ಚಿಕ್ಕ ಹಸು ಎಂದೇ ಖ್ಯಾತಿ ಹೊಂದಿರುವ ಪುಂಗನೂರ್‌ ತಳಿಯ ಹಸು ಮೇಳದಲ್ಲಿ ಕಣ್ಮನ ಸೆಳೆಯುತ್ತಿದೆ.

ಹುಮನಾಬಾದ್‌ ತಾಲ್ಲೂಕಿನ ರೈತ ಬ್ರಹ್ಮಶ್ರೀ ಗಂಗಾಧರ ಸ್ವಾಮೀಜಿ ಅವರು ಪ್ರದರ್ಶನ್ಕೆ ತಂದಿರುವ ಪುಂಗನೂರ್‌ ತಳಿಯ ಮೂರು ಬಿಳಿ ಬಣ್ಣದ ಹಸುಗಳು ನೋಡುಗರ ಗಮನ ಸೆಳೆಯುತ್ತಿವೆ. ‌

WhatsApp Image 2025 01 18 at 11.58.06 AM
ಅತ್ಯಂತ ಚಿಕ್ಕ ಪುಂಗನೂರ್‌ ತಳಿಯ ಹಸು

ಗಾತ್ರದಲ್ಲಿ 2 ರಿಂದ 3 ಅಡಿ ಮಾತ್ರ ಎತ್ತರ, ಚಿಕ್ಕ ಕೊಂಬು, ಅಗಲ ಹಣೆ ಇರುವ ಈ ಹಸು ನೋಡಲು ಮುದ್ದಾಗಿ ಕಾಣುತ್ತದೆ. ಎರಡು ಲೀಟರ್‌ ಹಾಲು ನೀಡುವ ಈ ಹಸುವಿನ ಬೆಲೆ ₹3 ರಿಂದ 4 ಲಕ್ಷ ಎಂದು ರೈತ ಗಂಗಾಧರ ತಿಳಿಸಿದ್ದಾರೆ.

ಹೂವಿನಲ್ಲಿ ಅರಳಿದ ಗೌತಮ ಬುದ್ಧ :

ಮೇಳದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಹೂವುಗಳಿಂದ ಅಲಂಕೃತವಾದ 12 ಅಡಿ ಎತ್ತರದ ಗೌತಮ ಬುದ್ಧನ ಮೂರ್ತಿ ಆಕರ್ಷಿಸುತ್ತಿದೆ. ಬುದ್ಧನ ಮೂರ್ತಿ ಎದುರು ಗುಲಾಬಿ ಹೂವುಗಳಿಂದ ಸಿದ್ಧಪಡಿಸಿ ಹೃದಯ ಆಕಾರದಲ್ಲಿ ನಿಲ್ಲಿಸಿರುವ ಸೆಲ್ಫಿ ಪಾಯಿಂಟ್‌ ಜನರು ಪೋಟೊ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ.

WhatsApp Image 2025 01 18 at 11.57.30 AM
ಹೂವಿನಲ್ಲಿ ಅರಳಿದ 12 ಅಡಿ ಎತ್ತರದ ಗೌತಮ ಬುದ್ಧ
WhatsApp Image 2025 01 18 at 12.11.23 PM
ಕಲ್ಲಗಂಡಿ ಹಣ್ಣಿನಲ್ಲಿ ಬಸವಣ್ಣ, ಕುವೆಂಪು, ಸಂಗೋಳ್ಳಿ ರಾಯಣ್ಣ ಸೇರಿದಂತೆ ಅನೇಕ ಮಹಾತ್ಮರ ಭಾವಚಿತ್ರಗಳ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ.

ವಿವಿಧ ವಿಜ್ಞಾನಿಗಳ ಸಂಶೋಧನೆಗಳ ಪ್ರಾತ್ಯಕ್ಷಿಕೆ, ಪ್ರಾತಿನಿಧಿಕ ಮೇಳಗಳು, ಮತ್ತು ಕೃಷಿಕರಿಗೆ ತಾಂತ್ರಿಕ ಸಹಾಯ ನೀಡುವ ಉದ್ದೇಶದಿಂದ ಏರ್ಪಡಿಸಿದ್ದ ವಿಶೇಷ ಚಟುವಟಿಕೆಗಳು ಗಮನ ಸೆಳೆದವು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಎಟಿಎಂ ದರೋಡೆ ಪ್ರಕರಣ : ಆರೋಪಿಗಳ ಬಂಧನಕ್ಕೆ 8 ಪೊಲೀಸ್‌ ತಂಡ ರಚನೆ

ವಿವಿಧ ತಳಿಯ ಕೋಳಿಗಳ ಪ್ರದರ್ಶನ :

WhatsApp Image 2025 01 18 at 11.57.43 AM
ಕುಕ್ಕುಟ ಪ್ರದರ್ಶನ ಮೇಳದಲ್ಲಿ ವಿವಿದ ತಳಿಯ ಕೋಳಿಗಳು
1002552890

ಮೇಳದ ಅಂಗವಾಗಿ ವಿವಿಧ ದೇಶಿ ತಳಿಯ ಜಾನುವಾರು ಕುಕ್ಕುಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದೇವಣಿ, ಮುರ್ರಾ, ಕಿಲಾರಿ ಹಾಗೂ ಟರ್ಕಿ, ನಾಟಿಕೋಳಿ, ಗಿರಿರಾಜ, ಫ್ಯಾನ್ಸಿ ಸೇರಿದಂತೆ ವಿವಿಧ ತಳಿಯ ಜಾನುವಾರು ಪ್ರದರ್ಶನ ಗಮನ ಸೆಳೆಯುತ್ತಿದ್ದು, ಪ್ರತಿಯೊಂದು ಜಾನುವಾರು, ಕೋಳಿ ತಳಿಗಳ ಕೆಳಗೆ ವಿವರದ ಫಲಕ ಹಾಗೂ ಸಾಕಾಣಿಕೆ ಮಾಡುವ ರೈತರ ವಿವರ ಹಾಕಲಾಗಿದೆ. ವೀಕ್ಷಣೆ ಬಂದ ಜನರನ್ನು ರೈತರು ತಳಿಯ ಕುರಿತು ಮಾಹಿತಿ ವಿಶ್ಲೇಷಿಸುತ್ತಿದ್ದಾರೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ ದಕ್ಷಿಣ | ಜಿಪಂ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಅನ್ಯಾಯ: ಜನಪ್ರತಿನಿಧಿಗಳಿಗೆ ಎಚ್ಚರಿಕೆ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ...

ಉಡುಪಿ | ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಧಿಕಾರಿಗೆ ಮನವಿ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು, ಹಿರಿಯ ವಕೀಲರು...

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...